ಯುಗಾದಿ ಹಬ್ಬದ ಪ್ರಯುಕ್ತ ದುಬೈ ಹೆಮ್ಮೆಯ ಯುಎಇ ಕನ್ನಡಿಗರು ತಂಡದ ಮಹಿಳಾ ಘಟಕ ಹೆಮ್ಮೆಯ ಯುಎಇ ಕನ್ನಡತಿಯರು ಸಂಯುಕ್ತ ಅರಬ್ ಸಂಸ್ಥಾನದಲ್ಲಿರುವ ಕನ್ನಡ ಮಕ್ಕಳಿಗಾಗಿ ಎ. 9ರಂದು ಅಂತರ್ಜಾಲದ ಮೂಲಕ ಪ್ರತಿಭಾ ಸ್ಪರ್ಧೆಯನ್ನು ಏರ್ಪಡಿಸಿತು.
ನಾಲ್ಕರಿಂದ ಏಳು ವರ್ಷಗಳೊಳಗಿನ ಮಕ್ಕಳಿಗೆ ಗಾಯನ, ನೃತ್ಯ, ಛದ್ಮವೇಷ, ವಾದ್ಯ ಸಂಗೀತ, ಡ್ರಾಯಿಂಗ್ ಮತ್ತು ಕಲರಿಂಗ್ ಸ್ಪರ್ಧೆ ಮೊದಲಾದ ಕಲಾತ್ಮಕ ಚಟುವಟಿಕೆಗಳಿಗೆ ಹೆಮ್ಮೆಯ ಕನ್ನಡತಿಯರು ತಂಡ ವೇದಿಕೆಯನ್ನು ಕಲ್ಪಿಸಿಕೊಟ್ಟಿತ್ತು. ಕೋವಿಡ್ ನಿಯಮಾವಳಿಯ ಹಿನ್ನೆಲೆಯಲ್ಲಿ ಅಂತರ್ಜಾಲದ ಮೂಲಕ ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮವು ಯುಎಇ ರಾಷ್ಟ್ರಗೀತೆ ಮತ್ತು ಕರ್ನಾಟಕ ನಾಡಗೀತೆಯೊಂದಿಗೆ ದೀಪ ಬೆಳಗುವ ಮೂಲಕ ಪ್ರಾರಂಭಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಮ್ಮೆಯ ಕನ್ನಡಿಗರು ಸಂಘದ ಅಧ್ಯಕ್ಷರಾದ ಮಮತಾ ಮೈಸೂರು ಅವರು ಅಲಂಕರಿಸಿದರು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಎಂಸ್ಕ್ವೇರ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ ಇದರ ಅಸ್ಮಾ ಮುಸ್ತಫಾ, ಚಿತ್ರಕಲಾ ತಜ್ಞೆ ವಾರುಣಿ, ಲಕ್ಷ್ಮೀರೆಡ್ಡಿ, ಗಾಯಕ ನವೀದ್ ಮಾಗುಡಿ, ಪತ್ರಕರ್ತೆ ಅನಿತಾ ಆಗಮಿಸಿದ್ದರು. ಕಾರ್ಯಕ್ರಮವನ್ನು ಹೆಮ್ಮೆಯ ಕನ್ನಡತಿಯರು ಘಟಕದ ಮುಖ್ಯ ಸಂಚಾಲಕರಾದ ಮಮತಾ ಶಾರ್ಜಾ, ಪಲ್ಲವಿ ದಾವಣಗೆರೆ ಮತ್ತು ಹಾದಿಯಾ ಮಂಡ್ಯ ಅವರು ಬಹಳ ಅಚ್ಚುಕಟ್ಟಾಗಿ ನೆರವೇರಿಸಿದರು.
ವಿವಿಧ ವಿಭಾಗಗಳ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಮಾಣ ಪತ್ರ ಮತ್ತು ಟ್ರೋಫಿ ವಿತರಿಸಲಾಯಿತು.
ಕಾರ್ಯಕ್ರಮದ ತಾಂತ್ರಿಕ ವಿಭಾಗವನ್ನು ಸೆಂತಿಲ್ ಮತ್ತು ಸಾದತ್ ಬೆಂಗಳೂರು ಅವರು ನೆರವೇರಿಸಿದರು. ಕಾರ್ಯಕ್ರಮ ಆಯೋಜಕರು ಕಲಾವಿದರಿಗೆ, ಅತಿಥಿಗಳಿಗೆ ಮತ್ತು ಸಭಿಕರಿಗೆ ಧನ್ಯವಾದ ಸಲ್ಲಿಸಿ ಕಾರ್ಯಕ್ರಮ ಮುಕ್ತಾಯಗೊಳಿಸಿದರು.