ಬೆಂಗಳೂರು: ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬಿಗ್‌ಬಾಸ್ ವಿಜೇತ ಪ್ರಥಮ್, ಗುರುವಾರ ಮುಂಜಾನೆ ಕಿಮ್ಸ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಐಸಿಯುನಲ್ಲಿ ಪ್ರಥಮ್ ಚಿಕಿತ್ಸೆ ಮುಂದುವರಿದಿದ್ದು ಹಲವು ತಪಾಸಣೆಗಳನ್ನು ನಡೆಸಲಾಗಿದೆ. ಮನೋವೈದ್ಯ ರಿಂದಲೂ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಥಮ್ ಆರೋಗ್ಯ ದಲ್ಲಿ ಚೇತರಿಕೆ ಕಂಡುಬಂದಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಕಿಮ್ಸ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಬೆತ್ತಲೆ ಓಡಾಡಿದ ಪ್ರಥಮ್?: ಮತ್ತೂಂದೆಡೆ ಆತ್ಮಹತ್ಯೆಗೆ ಯತ್ನಿಸಿ ಬುಧವಾರ ಖಾಸಗಿ ಅಸ್ಪತ್ರೆಗೆ ದಾಖಲಾಗಿದ್ದ ಪ್ರಥಮ್, ಚಿಕಿತ್ಸೆಗೆ ಸ್ಪಂದಿಸದೆ ವೈದ್ಯರ ಜತೆ ರಂಪಾಟ ಮಾಡಿದರು. ಗುರುವಾರ ಮುಂಜಾನೆ 4 ಗಂಟೆ ಸುಮಾರಿಗೆ ಐಸಿಯು ಕೊsಡಿಯ ಕಿಟಕಿ ಗಾಜುಗಳನ್ನು ಒಡೆದು, ಇತರೆ ರೋಗಿಗಳೊಂದಿಗೆ ಅಸಭ್ಯವಾಗಿ ವರ್ತಿಸಿದರು. ಅಲ್ಲದೆ ಬೆತ್ತಲೆಯಾಗಿ ಓಡಾಡಿ ಅನಾಗರೀಕರಂತೆ ವರ್ತಿಸಿದರು.
ಇದರಿಂದ ಬೇಸತ್ತ ಆಸ್ಪತ್ರೆ ಸಿಬ್ಬಂದಿ ಕೂಡಲೇ ಬಿಡುಗಡೆ ಮಾಡಿ, ಕರೆದುಕೊಂಡು ಹೋಗುವಂತೆ ಪ್ರಥಮ್ ಸ್ನೇಹಿತರಿಗೆ ತಿಳಿಸಿದರು. ಪ್ರಥಮ್ ಮಾನಸಿಕ ಸ್ಥಿಮಿತ ಕಳೆದುಕೊಂಡ ಲಕ್ಷಣಗಳನ್ನು ಗಮನಿಸಿದ ಸ್ನೇಹಿತರು, ಕೂಡಲೇ ಆತನನ್ನು ನಿಮ್ಹಾನ್ಸ್‌ಗೆ ಕರೆದೊಯ್ದರು. ಆದರೆ ನಿಮ್ಹಾನ್ಸ್‌ನಲ್ಲೂ ಗಲಾಟೆ ಮುಂದುವರಿಸಿದ ಪ್ರಥಮ್, “ನನಗೇನು ಹುಚ್ಚು ಹಿಡಿದಿದೆಯೇ? ನಾನು ಸುತಾರಾಂ ಇಲ್ಲಿರುವುದಿಲ್ಲ,’ ಎಂದು ತಗಾದೆ ತೆಗೆದ. ಇದರಿಂದ ಬೇಸತ್ತ ಆತನ ಸ್ನೇಹಿತರು ಮತ್ತೆ ಕಿಮ್ಸ್‌ಗೆ ದಾಖಲಿಸಿದರು.
ಸ್ವಯಂಪ್ರೇರಿತ ದೂರು ದಾಖಲು: ಮತ್ತೂಂದೆಡೆ ಅನ್ನಪೂರ್ಣೇಶ್ವರ ನಗರ ಠಾಣೆ ಪೊಲೀಸರು ಪ್ರಥಮ್ ವಿರುದ್ಧ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ಸಂಬಂಧ ಐಪಿಸಿ ಸೆಕ್ಷನ್ 309ರ ಅನ್ವಯ ದೂರು ದಾಖಲಿಸಿಧಿಕೊಂಡಿಧಿದ್ದಾರೆ. ನಿದ್ದೆ ಮಾತ್ರೆ ನುಂಗಿ ಆಸ್ಪತ್ರೆಗೆ ದಾಖಲಾಗಿದ್ದ ಪ್ರಥಮ್‌ಗೆ ನೀಡಿದ ಚಿಕಿತ್ಸಾ ವರದಿ ಹಾಗೂ ಆತನ ಮಾನಸಿಕ ಸ್ಥಿಮಿತತೆ ಬಗ್ಗೆ ವರದಿ ನೀಡುವಂತೆ ಫೋರ್ಟೀಸ್ ಆಸ್ಪತ್ರೆಗೆ ಪತ್ರ ಬರೆಯಲಾಗಿದೆ. ಅಲ್ಲದೆ ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಥಮ್ ಬಿಡುಗಡೆಯಾದ ಬಳಿಕ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಚಾರಕ್ಕಾಗಿ ಪ್ರಹಸನ?
ಪ್ರಥಮ್ ಆತ್ಮಹತ್ಯೆ ಪ್ರಕರಣ ಕುರಿತು ಟೀಕೆಗಳು ಬರಲಾರಂಬಿಸಿದ್ದು, ಯಾವಾಗಲೂ ಸುದ್ದಿಯಲ್ಲಿರಬೇಕೆಂಬ ಹಪಹಪಿಗೆ ಬಿದ್ದು ಆತ್ಮಹತ್ಯೆ ಪ್ರಹಸನ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಹಲವು ಸಿನಿಮಾಗಳ ನಾಯಕನಾಗುವ ಅವಕಾಶ ಗಿಟ್ಟಿಸಿಕೊಂಡಿರುವ ಪ್ರಥಮ್‌ರ ಈ ವರ್ತನೆಯಿಂದ ಅವರ ವೃತ್ತಿಜೀವನದ ಮೇಲೆ ದುಷ್ಪರಿಣಾಮ ಉಂಟಾಗಬಹುದು ಎಂದು ಹೇಳಲಾಗುತ್ತಿದೆ.