ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ 28 ಲಕ್ಷ ವೆಚ್ಚದಲ್ಲಿ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿಕೊಳ್ಳುವವರಿಂದ ಜನಪ್ರತಿನಿಧಿ ಬುದ್ದಿ ಕಲಿಸುವ ಅಗತ್ಯವಿಲ್ಲ. ಸರ್ಕಾರ 41 ಕೋಟಿ ಹಣ ಕೊಟ್ಟಿದೆ. ಇದುವರೆಗೂ 39 ಕೋಟಿ ಖರ್ಚಾಗಿದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಇದರ ಲೆಕ್ಕ ಕೊಡಿ. ಸ್ವಿಮ್ಮಿಂಗ್ ಪೂಲ್ ಕಟ್ಟಿಸಲು ಟೆಂಡರ್ ಕಾಯ್ದೆ ನೋಡಿದ್ದೀರಾ..? ಪಾರಂಪರಿಕ ನಿಯಮ ಪಾಲಿಸಿದ್ದೀರಾ..?ಮೈಸೂರು ಮಹಾನಗರ ಪಾಲಿಕೆಯಿಂದ ಪರ್ಮಿಷನ್ ಪಡೆದಿದ್ದೀರಾ..? ಇದಾವುದಕ್ಕೂ ನಿಯಮ ಪಾಲಿಸಿಲ್ಲವೆಂದ ಮೇಲೆ, ಔಷಧಿ ಖರೀದಿಗೆ ಟೆಂಡರ್ ಕಾಯ್ದೆ ಬೇಕಾ..? 16 ಸ್ಟೆಪ್ ಡೌನ್ ಆಸ್ಪತ್ರೆ ತೆರೆಯಲು ಕಮಿಟಿ ವರಿದಿ ನೀಡಿದ್ಯಾ..?. ರಾಜ್ಯದ ಬೊಕ್ಕಸ ಬರಿದಾಗಿರುವ ಸಂದರ್ಭದಲ್ಲಿ ಸರ್ಕಾರಿ ದುಡ್ಡಲ್ಲಿ ಮೋಜು ಮಸ್ತಿಗಾಗಿ ಸ್ವಿಮ್ಮಿಂಗ್ ಪೂಲ್ ಅವಶ್ಯಕತೆ ಇದ್ಯಾ ಎಂದು ಪ್ರಶ್ನೆ ಮಾಡಿದ್ದಾರೆ.
ಕೋವಿಡ್ ಸಂಕಷ್ಟಕ್ಕೆ ಸ್ಪಂದಿಸಲೆಂದೇ ಪ್ರಧಾನಿಯವ್ರು ದೇಶಾದ್ಯಂತ 1 ಲಕ್ಷ ವೆಂಟಿಲೇಟರ್ ಕೊಟ್ಟಿದ್ದಾರೆ. ಆದರೆ ಈಗಲೂ ಕೂಡ ಇಲ್ಲದ ಸಬೂಬು ಹೇಳಿ ಅಳವಡಿಸದೆ ಹಾಗೆ ಇಟ್ಟಿದ್ದಾರೆ. ಇವುಗಳನ್ನೆಲ್ಲಾ ಕೇಳಿದ್ರೆ ತಪ್ಪಾ ಪಿಎಂ ಕೇರ್ ನಿಂದ ಬಂದ 40 ವೆಂಟಿಲೇಟರ್ ಗಳನ್ನ ಇನ್ನು ಅಳವಡಿಕೆ ಮಾಡಿಲ್ಲಇದು ಜಿಲ್ಲಾ ಅಧಿಕಾರಿಗಳ ವೈಫಲ್ಯ ತೋರಿಸುತ್ತೆ. ಇದನ್ನ ಕೇಳಿದ್ರೆ ಜನಪ್ರತಿನಿಧಿಗಳು, ಅಧಿಕಾರಿಗಳ ಮದ್ಯೆ ಅಸಹಕಾರ ಹೇಗಾಗುತ್ತೆ.
ಸಿಎಂ ಯಡಿಯೂರಪ್ಪ ಅವರು ಕೋವಿಡ್ ರೋಗಿಗಳಿಗೆ ನೆರವಾಗೆಲೆಂದು ಸ್ಟೆಪ್ ಡೌನ್ ಆಸ್ಪತ್ರೆ ತೆರೆಯಲು ಹೇಳಿದ್ರು. ಖಾಸಗಿ ಆಸ್ಪತ್ರೆಯವ್ರು ಸೂಕ್ತ ಸೌಲಭ್ಯ ತೋರಿಸಿದ ನಂತರ ಸಮಿತಿ ಒಪ್ಪಿಗೆ ಮೇರೆಗೆ ಆಸ್ಪತ್ರೆ ತೆರೆಯಲು ಅನುಮತಿ ಇತ್ತು. ಆದರೆ ಮೈಸೂರಿನಲ್ಲಿ ನಾಯಿಕೊಡೆಗಳಂತಡ ಸ್ಟೆಪ್ ಡೌನ್ ಆಸ್ಪತ್ರೆ ನಿರ್ವಹಿಸುತ್ತಿದ್ದವು. ಶಾಸಕ ರಾಮದಾಸ್ ಅವರು ಇದರ ಭ್ರಷ್ಟಾಚಾರ ಪತ್ತೆ ಹಚ್ಚೋ ತನಕ ಯಾರೂ ಗಮನಹರಿಸಿರಲಿಲ್ಲ. ನೀವು ಯಾರ ಅನುಮತಿ ಪಡೆದು 16 ಸ್ಟೆಪ್ ಡೌನ್ ಆಸ್ಪತ್ರೆ ಗೆ ಅನುಮತಿ ನೀಡಿದಿರಿ. ಮೊದಲು ಅದಕ್ಕೆ ಉತ್ತರ ಕೊಡಿ ಎಂದು ಜಿಲ್ಲಾಧಿಕಾರಿಗಳನ್ನು ಸಂಸದರು ಪ್ರಶ್ನೆ ಮಾಡಿದ್ದಾರೆ.
ಪಾಪದ ಜನರನ್ನು ರಕ್ಷಿಸೋದು ಬಿಟ್ಟು ಮೋಜು ಮಸ್ತಿಗೆ ಉತ್ತೇಜನ ಕೊಡುವ ಇಂತಹ ಅಧಿಕಾರಿಯಿಂದ ಪಾಠ ಕಲಿಯುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆ ಗೆ 41 ಕೋಟಿ ಹಣ ಬಂದಿದೆ ಅದರಲ್ಲಿ 39 ಕೋಟಿ ಖರ್ಚಾಗಿದೆ ಎಂದು ಹೇಳಿದ್ದಿರಿ. 39 ಕೋಟಿ ಯಾರಿಗೆ ಕೊಟ್ಟಿದ್ದೀರಿ, ಯಾವುದಕ್ಕೆ ಖರ್ಚು ಮಾಡಿದ್ದೀರಿ ಅಂತಾ ಮಾಹಿತಿ ಕೊಡಿ. ಜಿಲ್ಲಾಧಿಕಾರಿ ಹಾಗೂ ಡಿಎಚ್ ಒ ಮೊದಲು ಲೆಕ್ಕ ಕೊಡಲಿ ಎಂದು ರೋಹಿಣಿ ಸಿಂಧೂರಿ ವಿರುದ್ದ ಪ್ರತಾಪಸಿಂಹ ಗುಡುಗಿದ್ದಾರೆ..