Advertisement
ದೋಹಾದಲ್ಲಿ ನಡೆಯುತ್ತಿರುವ 14ನೇ ಏಶ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನ ಪುರುಷರ 50 ಮೀ. ರೈಫಲ್ 3 ಪೊಸಿಶನ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ತೋಮರ್ ಟೋಕಿಯೊ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.8 ಸ್ಪರ್ಧಿಗಳ ಫೈನಲ್‌ನಲ್ಲಿ ತೋಮರ್ 449.1 ಅಂಕದೊಂದಿಗೆ ತೃತೀಯ ಸ್ಥಾನಿಯಾದರು. ಕೊರಿಯಾದ ಕಿಮ್ ಜೊಂಗಿಯುನ್ ಚಿನ್ನ (459.9), ಚೀನದ ಜೊಂಗಾವೊ ಜಾವೊ ಬೆಳ್ಳಿ ಪದಕ ಗೆದ್ದರು (459.1).
18ರ ಹರೆಯದ ತೋಮರ್ ಅರ್ಹತಾ ಸುತ್ತಿನಲ್ಲಿ 1,168 ಅಂಕ ಸಂಪಾದಿಸಿ ಫೈನಲ್ ಪ್ರವೇಶಿಸಿದ್ದರು. ಆದರೆ ಭಾರತದ ಉಳಿದಿಬ್ಬರು ಸ್ಪರ್ಧಿಗಳಾದ ಚೈನ್ ಸಿಂಗ್ ಮತ್ತು ಪಾರುಲ್ ಕುಮಾರ್ ಕ್ರಮವಾಗಿ 17ನೇ ಹಾಗೂ 20ನೇ ಸ್ಥಾನಿಯಾಗಿ ಫೈನಲ್ ರೇಸ್‌ನಿಂದ ಹೊರಬಿದ್ದರು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತದ 11 ಶೂಟರ್‌ಗಳು ಪಾಲ್ಗೊಂಡಿದ್ದರು. 2016ರ ರಿಯೋ ಒಲಿಂಪಿಕ್ಸ್ ವೇಳೆ ಈ ಸಂಖ್ಯೆ 12ಕ್ಕೆ ಏರಿತ್ತು.