Advertisement

ಸುಮಲತಾ ಅವರು ನಾಗರಹಾವು ಸಿನಿಮಾದ ಜಲೀಲ‌ ನೆನಪಾಗಿ ಡೈಲಾಗ್ ಹೇಳಿದ್ದಾರೆ: ಪ್ರತಾಪ್ ಸಿಂಹ

02:18 PM Nov 17, 2020 | keerthan |

ಮೈಸೂರು: ಸಂಸದೆ ಸುಮಲತಾ ಅವರ ಹೇಳಿಕೆಯನ್ನು ಗಂಬೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಅವರು ಬಣ್ಣದ ಲೋಕದಿಂದ ಬಂದವರಾಗಿದ್ದು ಫಿಲ್ಮ್ ಡೈಲಾಗ್ ನೆನಪಾಗಿ ಹಾಗೆ ಹೇಳಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಅವರು ಸುಮಲತಾ ಅವರ ‘ಪೇಟೆ ರೌಡಿ’ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

Advertisement

ತಮ್ಮನ್ನು ಪೇಟೆ ರೌಡಿಗೆ ಹೋಲಿಕೆ ಮಾಡಿದ ಸುಮಲತಾ ಹೇಳಿಕೆ ವಿಚಾರ‌ವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಲತಾ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಡಿ. ಅವರ ಹೇಳಿಕೆ ಬಗ್ಗೆ ನನಗೆ ಯಾಕೋ ನಂಬಿಕೆ ಇಲ್ಲ. ಅವರು ಸಿನಿಮಾ ಜಗತ್ತು, ಬಣ್ಣದ ಲೋಕದಿಂದ ಬಂದವರು. ಮಾಧ್ಯಮದವರ ಪ್ರಶ್ನೆಗೆ ನಾಗರಹಾವು ಸಿನಿಮಾದ ಜಲೀಲ‌ ನೆನಪಾಗಿ ಡೈಲಾಗ್ ಹೇಳಿದ್ದಾರೆ. ಯಾರೂ ಕೂಡ ಅದನ್ನು ಗಂಭೀರವಾಗಿ ಪರಿಣಿಸಬೇಡಿ ಎಂದರು.

ಪ್ರಜಾಪ್ರಭುತ್ವದಲ್ಲಿ ಪಾಳೇಗಾರಿಕೆ ಮನಸ್ಥಿತಿ ನಡೆಯುವುದಿಲ್ಲ. ನಾನು, ನನ್ನ ಕುಟುಂಬ ಅನ್ನುವ ಪಾಳೇಗಾರಿಕೆ ಇಲ್ಲಿ ನಡೆಯುವುದಿಲ್ಲ ಎಂದು ಟೀಕಿಸಿದರು.

ಇದನ್ನೂ ಓದಿ:ಎರಡು ಬಾರಿ ಸಂಸದರಾಗಿರುವವರು ಪೇಟೆ ರೌಡಿ ತರಹ ಮಾತಾನಾಡುವುದು ಸರಿಯಲ್ಲ : ಸುಮಲತಾ ಅಂಬರೀಶ್

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾರು ಏನು ಬೇಕಾದರೂ ಆಗಬಹುದು. ಇಲ್ಲಿ ಪಾಳೆಗಾರಿಕೆ ಸಂಸ್ಕೃತಿಗೆ ಅವಕಾಶ ಇಲ್ಲ. ನಾನು ಯಾವ ಸ್ಟಾರ್ ಅಲ್ಲ. ನನಗೆ ಯಾವ ಅಭಿಮಾನಿಯೂ ಬಂದು ಓಟು ಹಾಕಿಲ್ಲ. ನನ್ನ ಕೆಲಸವೇ ನನ್ನನ್ನು ಕಾಯುವುದು. ಹಾಗಾಗಿ, ನನಗೆ ಕೆಲಸದ ಮೇಲೆ ನಂಬಿಕೆ. ನಾನು ಬಸವಣ್ಣ ಅವರ ಕಾಯಕನಿಷ್ಠೆಯಲ್ಲಿ ನಂಬಿಕೆ ಇಟ್ಟವನು. ಸಮ್ಮನೆ ಹೇಳಿಕೆ ಕೊಟ್ಟು ಸಮಯ ವ್ಯರ್ಥ ಮಾಡುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

Advertisement

10 ಪಥದ ಹೆದ್ದಾರಿ‌ ಕಾಮಗಾರಿ ವಿಚಾರದಲ್ಲಿ ಮಂಡ್ಯ ಜನರು ಅಡ್ಡ ಹಾಕಿ ನನ್ನನ್ನು ಕೇಳಿದರು. ಆಗ ನಾನು ಅಂಡರ್ ಪಾಸ್ ಹಾಗೂ ಫ್ಲೈಓವರ್ ಮಾಡಿಸಿಕೊಡುವ ಭರವಸೆ ನೀಡಿದೆ. ಇದರಿಂದ ಮಂಡ್ಯ, ರಾಮನಗರ, ಮೈಸೂರು ಜಿಲ್ಲೆಯ ಜನರಿಗೆ ಅನುಕೂಲ ಆಗಲಿದೆ. ಅದಕ್ಕಾಗಿ ನಾನು ಭರವಸೆ ಕೊಟ್ಟೆ ವಿನಹ ಬೇರೆ ಏನು ಮಾತನಾಡಿಲ್ಲ. ಯಾವ ರಸ್ತೆ ಯಾರ ವ್ಯಾಪ್ತಿಗೆ ಬರುತ್ತದೆ ಎಂಬ ಕನಿಷ್ಠ ಜ್ಞಾನ ಇದ್ದರೆ ಅಪದ್ಧವಾದ ಹೇಳಿಕೆ ನಿಲ್ಲುತ್ತವೆ. 10 ಪಥದ ಹೆದ್ದಾರಿ ಅನುಕೂಲ ಮಾಡೋದು ಉದ್ದೇಶ. ಅದನ್ನು ಬಿಟ್ಟು ಬೇರೆನು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next