ಧಾರವಾಡ: ಶಹರ ಮರಾಠಾ ಸಮಾಜದ ನೂತನ ಅಧ್ಯಕ್ಷರಾಗಿ ಪ್ರತಾಪ ಚವ್ಹಾಣ ಪುನರಾಯ್ಕೆಯಾದರು. ರವಿವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಸಹ ಕಾರ್ಯದರ್ಶಿ ಮತ್ತು ಕೋಶಾಧ್ಯಕ್ಷ ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿದ್ದವು. ಹೀಗಾಗಿ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವಿ.ಜಿ. ಕುಲಕರ್ಣಿ ಘೋಷಿಸಿದರು.
ಅಧ್ಯಕ್ಷ ಪ್ರತಾಪ ಚವ್ಹಾಣ ಮಾತನಾಡಿ, ಸಮಾಜದ ಹಿತದೃಷ್ಟಿಯಿಂದ ಸಂಘವು ಮುಂದಿನ ದಿನಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಸಂಘದ ಎಲ್ಲ ಪದಾಧಿಕಾರಿಗಳು ಮತ್ತು ಸಮಾಜ ಬಾಂಧವರು ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ನಿರ್ದೇಶಕರಾದ ಮಾರುತಿ ಶಿಂಧೆ, ಅರುಣ ಗೋಳೆ, ಕಿರಣ ಪವಾರ, ಜ್ಯೋತಿಕಿರಣ ಧಾರೆ, ರವಿ ಶಿಂಧೆ, ಬಾಬುರಾವ ಭಿಸೆ, ಸುನೀಲ ಪಾಟೀಲ ಇದ್ದರು.
Advertisement
ನೂತನ ಅಧ್ಯಕ್ಷರಾಗಿ ಪ್ರತಾಪ ಚವ್ಹಾಣ, ಉಪಾಧ್ಯಕ್ಷರಾಗಿ ವಸಂತ ಪುಂಡೆ, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ ಜಾಧವ, ಸಹ ಕಾರ್ಯದರ್ಶಿಯಾಗಿ ಉದಯಕುಮಾರ ಕಾಳೆ ಮತ್ತು ಕೋಶಾಧ್ಯಕ್ಷರಾಗಿ ಚಂದ್ರಶೇಖರ ಪವಾರ ಆಯ್ಕೆಯಾದರು.