Advertisement

ಪ್ರಶಾಂತ್‌ ದಂಪತಿ ಹೆತ್ತವರು ಇಂದು ಜರ್ಮನಿಗೆ

02:24 AM Apr 03, 2019 | Team Udayavani |

ಕುಂದಾಪುರ: ಜರ್ಮನಿಯಲ್ಲಿ ಹತ್ಯೆಗೀಡಾದ ಪ್ರಶಾಂತ್‌ ಬಸ್ರೂರು ಅವರ ತಾಯಿ ಹಾಗೂ ಗಂಭೀರ ಗಾಯಗೊಂಡ ಸ್ಮಿತಾ ಅವರ ಹೆತ್ತವರು ಬುಧವಾರ ಮುಂಜಾನೆ ಜರ್ಮನಿಗೆ ತೆರಳಲಿದ್ದಾರೆ.

Advertisement

ಸೋಮವಾರ ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ ಅವರು ಖುದ್ದಾಗಿ ತೆರಳಿ ಸಚಿವಾಲಯ, ಪಾಸ್‌ಪೋರ್ಟ್‌ ಕಚೇರಿಗಳನ್ನು ಸಂಪರ್ಕಿಸಿ ಪಾಸ್‌ಪೋರ್ಟ್‌ ನವೀಕರಣ ಮಾಡಿ ಕೊಟ್ಟಿದ್ದರು. ವೀಸಾ ಕೂಡ ಸೋಮವಾರ ಸಂಜೆಯೇ ಲಭಿಸಿತ್ತು.

ಬುಧವಾರ ಮುಂಜಾನೆ ಚೆನ್ನೈಯಿಂದ ಸ್ಮಿತಾ ಅವರ ತಂದೆ, ತಾಯಿ, ಪ್ರಶಾಂತ್‌ ಅವರ ತಾಯಿ ಜರ್ಮನಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಶಾಂತ್‌ ತಾಯಿ ಜತೆ ಪ್ರಶಾಂತ್‌ ಅವರ ಗೆಳೆಯ ಗಣೇಶ್‌ ಬೈಂದೂರು ಅವರು ತೆರಳುತ್ತಾರೆ ಎಂದು ನಿಶ್ಚಯಿಸಲಾಗಿತ್ತು. ಆದರೆ ವೈಯಕ್ತಿಕ ಕಾರಣದಿಂದ ಅವರಿಗೆ ತೆರಳುವುದು ಅಸಾಧ್ಯವಾಗಿದೆ. ಈ ಮೂವರಷ್ಟೇ ಹೋಗುತ್ತಿದ್ದಾರೆ. ಸ್ಮಿತಾ ಅವರ ಆರೋಗ್ಯ ಸ್ಥಿತಿ ಕುರಿತು ಹೆಚ್ಚಿನ ಮಾಹಿತಿ ಲಭಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next