Advertisement

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

05:42 PM Apr 20, 2024 | Team Udayavani |

ಹೈದರಾಬಾದ್: ಟಾಲಿವುಡ್‌ ಸ್ಟಾರ್ ಜೂ.ಎನ್‌ ಟಿಆರ್‌ ಸದ್ಯ ಬಹು ನಿರೀಕ್ಷಿತ ʼದೇವರʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ʼಆರ್‌ ಆರ್‌ ಆರ್‌ʼ ಬಳಿಕ ಅವರು ಕಾಣಿಸಿಕೊಳ್ಳುತ್ತಿರುವ ಸಿನಿಮಾ ಇದಾಗಿರುವುದರಿಂದ ದೊಡ್ಡಮಟ್ಟದ ಹೈಪ್‌ ಕ್ರಿಯೇಟ್‌ ಆಗಿದೆ.

Advertisement

ಜೂ.ಎನ್‌ ಟಿಆರ್‌ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿದ್ದಾರೆ. ಹಿಂದಿಯ ʼವಾರ್‌ -2ʼ ಸಿನಿಮಾದಲ್ಲೂ ಅವರು ಕಾಣಿಸಿಕೊಳ್ಳಲಿದ್ದಾರೆ. ಪ್ರಶಾಂತ್‌ ನೀಲ್‌ ಅವರೊಂದಿಗೆ ಜೂ.ಎನ್‌ ಟಿಆರ್‌ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಈ ಸಿನಿಮಾ ಅನೌನ್ಸ್‌ ಆದ ಬಳಿಕ ಹೊಸ ಅಪ್ಡೇಡ್‌ ಗಳು ಹೊರಬಿದ್ದಿಲ್ಲ.

ಎರಡು ಭಾಗಗಳಲ್ಲಿ ಸಿನಿಮಾ ತೆರೆಗೆ ಬರಲಿದೆ ಎನ್ನಲಾಗಿದೆ. ಇದೀಗ ಈ ಸಿನಿಮಾದ ಬಗ್ಗೆ ಲೇಟೆಸ್ಟ್‌ ಮಾಹಿತಿಯೊಂದು ಹೊರಬಿದ್ದಿದೆ. ಅಂದುಕೊಂಡಂತೆ ಆಗಿದ್ದರೆ ಇಷ್ಟು ಹೊತ್ತಿಗೆ ಪ್ರಶಾಂತ್‌ – ಜೂ.ಎನ್‌ ಟಿಆರ್‌ ಸಿನಿಮಾದ ಶೂಟಿಂಗ್‌ ಆರಂಭಗೊಳ್ಳಬೇಕಿತ್ತು. ಆದರೆ ʼದೇವರʼ ಚಿತ್ರದ ಚಿತ್ರೀಕರಣದಿಂದ ವಿಳಂಬವಾಗಿದೆ.

ಇದೇ ವರ್ಷದ ಆಗಸ್ಟ್‌ ನಲ್ಲಿ ಪ್ರಶಾಂತ್‌ ನೀಲ್‌ – ಜೂ.ಎನ್‌ ಟಿಆರ್‌ ಸಿನಿಮಾ ಸಟ್ಟೇರಲಿದೆ ಎಂದು ಮೂಲಗಳಿಂದ ತಿಳಿದು ಬಂದಿರುವುದಾಗಿ ʼಟೈಮ್ಸ್‌ ಆಫ್‌ ಇಂಡಿಯಾʼ ವರದಿ ಮಾಡಿದೆ.

ಜೂನಿಯರ್ ಎನ್ಟಿಆರ್, ಸೈಫ್ ಅಲಿ ಖಾನ್, ಜಾನ್ವಿ ಕಪೂರ್, ಪ್ರಕಾಶ್ ರಾಜ್, ಶ್ರೀಕಾಂತ್ ಶೈನ್ ಟಾಮ್ ಚಾಕೋ ಮುಂತಾದವರು ʼದೇವರʼದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೇ ಅಕ್ಟೋಬರ್‌ 10 ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.

Advertisement

ಇದಾದ ಬಳಿಕ ಅವರು ಅಯಾನ್‌ ಮುಖರ್ಜಿ ಅವರ ʼವಾರ್‌ -2ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next