ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದ ಕುರಿತು ಸಿಸಿಬಿ ತಯಾರಿಸಿರುವ ಚಾರ್ಜ್ ಶೀಟ್ ನಲ್ಲಿ ಖ್ಯಾತ ನಿರೂಪಕಿ ಅನುಶ್ರೀ ಹೆಸರು ಸೇರ್ಪಡೆಯಾಗಿರುವ ಬೆನ್ನಲ್ಲೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಮಾಧ್ಯಮಗೋಷ್ಠಿ ನಡೆಸಿ ಸಾಕಷ್ಟು ಸ್ಫೋಟಕ ಮಾಹಿತಿಗಳನ್ನು ಹೊರಹಾಕಿದ್ದಾರೆ.
ಅನುಶ್ರೀ ಮುಖವಾಡ ಕಳಚಿದೆ, ಅವರು ಜೈಲಿಗೆ ಹೋಗುವುದು ಪಕ್ಕಾ ಎಂದಿರುವ ಸಂಬರಗಿ, 2020ರಲ್ಲಿ ಶುಗರ್ ಡ್ಯಾಡಿ ಎಂದು ಟ್ವೀಟ್ ಮಾಡಿದ್ದೆ. ಆಗ ಮಾಜಿ ಸಿಎಂ ಒಬ್ಬರು ಊಹಾಪೋಹಕ್ಕೆ ನಾಂದಿ ಹಾಡಿದ್ದರು. ಮುಂದಿನ ದಿನಗಳಲ್ಲಿ ಈ ಕುರಿತ ಆಡಿಯೋ ರಿಲೀಸ್ ಮಾಡ್ತೀನಿ. ಡ್ರಗ್ಸ್ ಪ್ರಕರಣದಲ್ಲಿ ಅನುಶ್ರೀಯನ್ನು ಬಿಟ್ಟುಕಳುಹಿಸಲಾಗಿದೆ. ತನಿಖೆ ನಡೆಸುತ್ತಿದ್ದ ಮಂಗಳೂರು ಸಿಸಿಬಿ ಪೊಲೀಸ್ ಅಧಿಕಾರಿ ಶಿವಪ್ರಕಾಶ್ ನಾಯಕ್ ಎತ್ತಂಗಡಿ ಮಾಡಲಾಗಿದೆ. ಕೇಸ್ ನಲ್ಲಿ ಮಂಗಳೂರು ಪೊಲೀಸರು ವೀಕ್ ಆಗಿದ್ದಾರೆ. ಪ್ರಕರಣದ ಮರು ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಡ್ರಗ್ಸ್ ಪ್ರಕರಣದಲ್ಲಿ ಕಿಶೋರ್ ಶೆಟ್ಟಿ, ತರುಣ್ ಬಂಧನವಾದಾಗಲೇ ತರುಣ್, ಅನುಶ್ರೀ ಡ್ರಗ್ಸ್ ಸೇವನೆ ಹಾಗೂ ಪೆಡ್ಲಿಂಗ್ ಬಗ್ಗೆ ಬಾಯ್ಬಿಟ್ಟಿದ್ದ. ಅನುಶ್ರೀ ಬಚಾವ್ ಮಾಡಲು ಬಳಿಕ ತರುಣ್ ನನ್ನು ಬಿಡುಗಡೆ ಮಾಡಲಾಗಿದೆ. ಪೊಲೀಸ್ ವಿಚಾರಣೆಗೆ ಹಾಜರಾಗಲು ಅನುಶ್ರೀ ನಾಟಕ ಆಡಿದ್ರು. ಬಳಿಕ ಫೇಸ್ ಬುಕ್ ಲೈವ್ ಗೆ ಬಂದು ನಾಟಕ ಮಾಡಿದ್ರು. ನನ್ನನ್ನು ಸ್ತ್ರೀ ವಿರೋಧಿ ಎನ್ನುವ ರೀತಿ ಬಿಂಬಿಸಿದರು ಎಂದು ಗುಡುಗಿದ್ದಾರೆ.
ಅಲ್ಲದೇ ಅನುಶ್ರೀ ಮಂಗಳೂರಿನಲ್ಲಿ 12 ಕೋಟಿ ರೂಪಾಯಿ ಮನೆ ಕಟ್ಟಿಸಿದ್ದಾರೆ. ಬೆಂಗಳೂರಿನಲ್ಲಿ 4 ಕೋಟಿ ಮೌಲ್ಯದ ಮನೆ ನಿರ್ಮಿಸಿದ್ದಾರೆ. ಇದಕ್ಕೆಲ್ಲ ಹಣ ಟಿವಿ ಶೋದಿಂದಲೇ ಬಂದಿದ್ದರೆ ಒಳ್ಳೆಯದು. ಆದರೆ ಅನುಶ್ರೀ ಕಾನೂನು ಬಾಹಿರ ಚಟುವಟಿಕೆ ನಡೆಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇನ್ನು ಡ್ರಗ್ ಆರೋಪಿ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿರುವ ಸಿಸಿಬಿ ಚಾರ್ಜ್ ಶೀಟ್ ನಲ್ಲಿ ಅನುಶ್ರೀ ಹೆಸರು ಸೇರ್ಪಡೆಗೊಳಿಸಿದೆ. ಅನುಶ್ರೀ ಡ್ರಗ್ಸ್ ಸೇವಿಸುತ್ತಿದ್ದರು ಎಂದು ಪ್ರಕರಣದಲ್ಲಿ ಬಂಧಿತರಾಗಿದ್ದ ಕಿಶೋರ್ ಶೆಟ್ಟಿ ಮಾಹಿತಿ ನೀಡಿದ್ದರು.
ಈ ಸಂಬಂಧ ಈ ಹಿಂದೆ ಮಂಗಳೂರು ಸಿಸಿಬಿ ವಿಭಾಗ ಅನುಶ್ರೀ ವಿಚಾರಣೆ ನಡೆಸಿತ್ತು. ಅದಾದ ಬಳಿಕ ಪ್ರಕರಣ ತಣ್ಣಗಾಗಿತ್ತು. ಇದೀಗ ಸಿಸಿಬಿ ಚಾರ್ಜ್ ಶೀಟ್ ನಲ್ಲಿ ಅವರ ಹೆಸರು ಸೇರ್ಪಡೆಯಾಗಿರುವುದರಿಂದ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ.
ಅನುಶ್ರೀ ಡ್ಯಾನ್ಸ್ ಪ್ರಾಕ್ಟೀಸ್ ಗೆ ಬರುವಾಗ ಡ್ರಗ್ಸ್ ತರುತ್ತಿದ್ದರು. ಅವರಿಗೆ ಡ್ರಗ್ ಪೆಡ್ಲರ್ ಗಳ ಪರಿಚಯವಿತ್ತು. ಅವರಿಗೆ ಯಾರು ಡ್ರಗ್ಸ್ ಪೂರೈಸುತ್ತಾರೆಂದು ಗೊತ್ತಿತ್ತು ಎಂಬುದಾಗಿ ಆರೋಪಿ ಕಿಶೋರ್ ಶೆಟ್ಟಿ ಹೇಳಿದ್ದ.