“ಕೆಜಿಎಫ್-2′ ಸಿನಿಮಾದ ಬಳಿಕ ನಿರ್ದೇಶಕ ಪ್ರಶಾಂತ್ ನೀಲ್ ತೆಲುಗು ಚಿತ್ರರಂಗದತ್ತ ಮುಖಮಾಡಿದ್ದಾರೆ.ಈಗಾಗಲೇ “ಬಾಹುಬಲಿ’ ಖ್ಯಾತಿಯಪ್ರಭಾಸ್ ಜೊತೆ “ಸಲಾರ್’ ಸಿನಿಮಾ ಅನೌನ್ಸ್ ಮಾಡಿರುವ ಪ್ರಶಾಂತ್‌ನೀಲ್, ಅದರ ಚಿತ್ರೀಕರಣವನ್ನೂ ಆರಂಭಿಸಿದ್ದಾರೆ.
ಇದರ ನಡುವೆಯೇ”ಸಲಾರ್’ ಸಿನಿಮಾದ ಬಳಿಕ ಪ್ರಶಾಂತ್‌ನೀಲ್ ಮತ್ತೂಂದು ತೆಲುಗು ಸಿನಿಮಾಕ್ಕೆ ಆ್ಯಕ್ಷನ್ -ಕಟ್‌ಹೇಳುತ್ತಿರುವುದು ಕೂಡ ಖಚಿತವಾಗಿದೆ. ಹೌದು, “ಸಲಾರ್’ ಸಿನಿಮಾದ ಬಳಿಕ ತೆಲುಗಿನ ಮತ್ತೂಬ್ಬ ಸ್ಟಾರ್ ಹೀರೋ, ಯಂಗ್ ಟೈಗರ್ ಖ್ಯಾತಿಯ ನಟ ಜ್ಯೂನಿಯರ್ ಎನ್‌ಟಿಆರ್ ಹೊಸ ಸಿನಿಮಾಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಕಳೆದ ಹಲವು ತಿಂಗಳಿನಿಂದ ಕನ್ನಡ ಮತ್ತು ತೆಲುಗು ಎರಡೂ ಚಿತ್ರರಂಗದಲ್ಲಿ ಜೋರಾಗಿ ಹರಿದಾಡುತ್ತಿತ್ತು.
ಆದರೆ ಈ ಸುದ್ದಿಯನ್ನು ಜ್ಯೂನಿಯರ್ ಎನ್‌ಟಿಆರ್ ಆಗಲಿ ಅಥವಾ ಪ್ರಶಾಂತ್ ನೀಲ್ ಆಗಲಿ ಖಚಿತಪಡಿಸಿರಲಿಲ್ಲ. ಇದೀಗ ಈ ಸುದ್ದಿಯನ್ನು ನಿರ್ದೇಶಕ ಪ್ರಶಾಂತ್ ನೀಲ್ ಅವರೇ ಖಚಿತಪಡಿಸಿದ್ದಾರೆ. ಜ್ಯೂನಿಯರ್ ಎನ್‌ಟಿಆರ್ 38ನೇ ಹುಟ್ಟುಹಬ್ಬದ ಸಂಭ್ರಮದ ಹೊತ್ತಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರಿರುವ ನಿರ್ದೇಶಕ ಪ್ರಶಾಂತ್ ನೀಲ್, ಎನ್‌ಟಿಆರ್ 31ಪ್ರಾಜೆಕ್ಟ್ ಶುರುವಾಗಲಿದೆ ಎಂದು ಹೇಳುವ ಮೂಲಕ ತಮ್ಮಿಬ್ಬರ ಕಾಂಬಿನೇಶನ್‌ನಲ್ಲಿ ಮುಂದಿನ ಸಿನಿಮಾರಲಿದೆ ಎಂಬ ಸುದ್ಧಿಯನ್ನು ಖಚಿತಪಡಿಸಿದ್ದಾರೆ.
ಇದನ್ನೂ ಓದಿ:ದಿನಾಲೂ ಅಪ್ಡೇಟ್ ಆಗುತ್ತಿದ್ದೇನೆ..: ರಾಬರ್ಟ್ ಬೆಡಗಿ ಆಶಾ ಭಟ್
ಇನ್ನು ಜ್ಯೂ. ಎನ್‌ಟಿಆರ್ ಅಭಿನಯದ 31ನೇ ಸಿನಿಮಾಇದಾಗಿದ್ದು, “ಮೈತ್ರಿ ಮೂವಿ ಮೇಕರ್’ಸಂಸ್ಥೆ ಈ ಸಿನಿಮಾವನ್ನು ನಿರ್ಮಿಸುತ್ತಿದೆ. ಅಂದಹಾಗೆ, ಎಲ್ಲ ಅಂದುಕೊಂಡಂತೆ ಆದರೆ ಮುಂದಿನ ವರ್ಷದ ಆರಂಭದಲ್ಲಿ ಈ ಹೊಸ ಸಿನಿಮಾ ಶುರುವಾಗುವ ಸಾಧ್ಯತೆ ಇದೆ ಎನ್ನಲಾಗಿದೆ