Advertisement

ಪ್ರಶಾಂತ್ ಕಿಶೋರ್ ಬಿಜೆಪಿಗೆ ರಹಸ್ಯವಾಗಿ ಸಹಾಯ ಮಾಡುತ್ತಿರಬಹುದು: ನಿತೀಶ್

11:34 AM Sep 08, 2022 | Team Udayavani |

ನವದೆಹಲಿ : 2024 ರ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಮೈತ್ರಿಕೂಟವನ್ನು ತೆಗೆದುಕೊಳ್ಳಲು ಎಲ್ಲಾ ಬಿಜೆಪಿಯೇತರ ಪಕ್ಷಗಳನ್ನು ಒಂದುಗೂಡಿಸಲು ಬುಧವಾರ ಕರೆ ನೀಡಿದ್ದು, ನಾಯಕತ್ವದ ನಿರ್ಧಾರವನ್ನು ನಂತರ ತೆಗೆದುಕೊಳ್ಳಬಹುದು ಎಂದು ಪ್ರತಿಪಾದಿಸಿದ್ದಾರೆ.

Advertisement

ಮೈತ್ರಿ ಬದಲಾಯಿಸುವ ಕುಮಾರ್ ಅವರ ನಿರ್ಧಾರವು ಪ್ರಾದೇಶಿಕ ಪರಿಣಾಮವನ್ನು ಬೀರುತ್ತದೆ ಹೊರತು, ರಾಷ್ಟ್ರೀಯ ಪರಿಣಾಮವನ್ನು ಬೀರುವುದಿಲ್ಲ ಎಂದು ಹೇಳಿರುವ ರಾಜಕೀಯ ತಂತ್ರಜ್ಞ ಮತ್ತು ಮಾಜಿ ಸಹೋದ್ಯೋಗಿ ಪ್ರಶಾಂತ್ ಕಿಶೋರ್ ಅವರ ವಿರುದ್ಧ ನಿತೀಶ್ ಆಕ್ರೋಶ ಹೊರ ಹಾಕಿದರು, ಪ್ರಶಾಂತ್ ಅವರು “ಪ್ರಚಾರ ತಜ್ಞ” ಎಂದು ಕರೆದಿದ್ದಾರೆ.

ಪ್ರಶಾಂತ್ ಕಿಶೋರ್ ಬಿಜೆಪಿಗೆ ರಹಸ್ಯವಾಗಿ ಸಹಾಯ ಮಾಡುತ್ತಿರಬಹುದು ಎಂದು ನಿತೀಶ್ ಕುಮಾರ್ ಅವರು ಅನುಮಾನ ವ್ಯಕ್ತ ಪಡಿಸಿದರು.

ಮೈತ್ರಿ ಕಡಿದುಕೊಂಡ ಬಳಿಕ ಬಿಜೆಪಿ ವಿರುದ್ಧ ಸಮರ ಸಾರಿರುವ ನಿತೀಶ್ ಈಗಾಗಲೇ ವಿಪಕ್ಷಗಳನ್ನು ಒಂದುಗೂಡಿಸುವ ಕೆಲಸದಲ್ಲಿ ನಿರತರಾಗಿದ್ದು,  ಹಲವು ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next