Advertisement

ಪ್ರಧಾನಿ ಅಭ್ಯರ್ಥಿ ಆಯ್ಕೆ:ಪ್ರಶಾಂತ್‌ ಕಿಶೋರ್‌ ವೆಬ್‌ಸೈಟ್‌ ಸರ್ವೆ 

12:21 PM Jul 25, 2018 | Team Udayavani |

ಹೊಸದಿಲ್ಲಿ: ವಿವಿಧ ರಾಜಕೀಯ ಪಕ್ಷಗಳಿಗೆ ಸಲಹೆಗಾರರಾಗಿರುವ ರಾಜಕೀಯ ತಜ್ಞ ಪ್ರಶಾಂತ್‌ ಕಿಶೋರ್‌, ಇದೀಗ 2019ರ ಲೋಕಸಭಾ ಚುನಾವಣೆಗೆ ಪ್ರಧಾನಿ ಅಭ್ಯರ್ಥಿ ಯಾರಾಗಬೇಕೆಂದು ಜನರಿಂದ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದ್ದಾರೆ. 

Advertisement

ಇದಕ್ಕಾಗಿ, ನ್ಯಾಷನಲ್‌ ಅಜೆಂಡಾ ಫೋರಂ ಎಂಬ ಹೊಸತೊಂದು ವೆಬ್‌ಸೈಟ್‌ಗೆ ಚಾಲನೆ ನೀಡಿದ್ದಾರೆ. ಈ ಜಾಲತಾಣಕ್ಕೆ ಜನಸಾಮಾನ್ಯರು ಭೇಟಿ ನೀಡಿ, ಅಲ್ಲಿ ತಮ್ಮ ಆಯ್ಕೆಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ. ಆ. 14ರವರೆಗೆ ಆಯ್ಕೆ ಸಲ್ಲಿಸಲು ಅವಕಾಶವಿದ್ದು, 15ರಂದು ಫ‌ಲಿತಾಂಶ ಬರಲಿದೆ. 

ಈ ಪ್ರಕ್ರಿಯೆ 3 ಹಂತದಲ್ಲಿ ಇರಲಿದೆ. ಮೊದಲಿಗೆ, ರಾಷ್ಟ್ರದ ತುರ್ತಾಗಿ ಸುಧಾರಣೆ ಆಗಬೇಕಿರುವ 10 ಕ್ಷೇತ್ರಗಳನ್ನು ಆಯ್ಕೆ ಮಾಡಬೇಕು. 2ನೇ ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ಮೋದಿ, ರಾಹುಲ್‌, ದೇವೇಗೌಡ ಮುಂತಾದ ವರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕು. 3ನೇ ಹಂತದಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ಸೇರಿಸಬೇಕು. 

Advertisement

Udayavani is now on Telegram. Click here to join our channel and stay updated with the latest news.

Next