ಹೊಸದಿಲ್ಲಿ: ವಿವಾದಾತ್ಮಕ ಟ್ವೀಟ್ ಪ್ರಕರಣದಲ್ಲಿ ಸಿಲುಕಿರುವ ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಸುಪ್ರೀಂಗೆ 134 ಪುಟಗಳ ಸುದೀರ್ಘ ಅಫಿಡವಿಟ್ಟನ್ನು ಸಲ್ಲಿಸಿದ್ದಾರೆ. ಇದರಲ್ಲಿ ‘ಸಿಜೆಐ ಹೆಲ್ಮೆಟ್ ಧರಿಸಿಲ್ಲ’ ಎಂಬ ಟ್ವೀಟ್‌ಗೆ ಮಾತ್ರವೇ ಕ್ಷಮೆ ಯಾಚಿಸಿದ್ದಾರೆ.
‘ಸಿಜೆಐ ಎಸ್‌ಎ ಬೋಬ್ಡೆ 50 ಲಕ್ಷ ರೂ. ಮೌಲ್ಯದ ಬೈಕ್ ಅನ್ನು ಹೆಲ್ಮೆಟ್ ಇಲ್ಲದೆ ಸವಾರಿ ಮಾಡಿದ್ದಾರೆ ಎಂಬ ಟ್ವೀಟ್ ಮಾಡುವಾಗ, ಆ ಬೈಕ್ ನಿಂತಿರುವುದನ್ನು ನಾನು ಗಮನಿಸಿರಲಿಲ್ಲ.
ಸ್ಟಾಂಡ್‌ನಲ್ಲಿ ನಿಂತಿದ್ದ ಬೈಕ್‌ಗೆ ಹೆಲ್ಮೆಟ್ ಧರಿಸುವುದು ಅಗತ್ಯವಿಲ್ಲ ಎಂಬುದನ್ನು ಆ ಕ್ಷಣಕ್ಕೆ ಗಮನಿಸದೆ ಹೋದೆ. ಹೀಗಾಗಿ ಈ ಟ್ವೀಟ್ ಬಗ್ಗೆ ಮಾತ್ರವೇ ವಿಷಾದಿಸುತ್ತೇನೆ’ ಎಂದು ಹೇಳಿದ್ದಾರೆ.
ಉಳಿದಂತೆ ಅವರ ಅಫಿಡವಿಟ್‌ನಲ್ಲಿ ನ್ಯಾ| ಲೋಯಾ ಸಾವಿನ ಪ್ರಕರಣ, ಪೌರತ್ವ ತಿದ್ದುಪಡಿ, ಲಾಕ್‌ಡೌನ್ ವೇಳೆ ಸುಪ್ರೀಂ ಕೊಟ್ಟ ತೀರ್ಪುಗಳ ಬಗ್ಗೆ ಟ್ವೀಟಿಸಿರುವುದನ್ನು ಸಮರ್ಥಿಸಿದ್ದಾರೆ.
ತಮ್ಮ ಟ್ವೀಟ್‌ಗಳನ್ನು ಕೇವಲ ಅನಿಸಿಕೆಯೆಂದು ಪರಿಗಣಿಸಲು ಕೋರಿದ್ದಾರೆ.
ಸುಪ್ರೀಂ ವಿರುದ್ಧ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದ ರಿಂದ ಪ್ರಶಾಂತ್ ಭೂಷಣ್ ಮೇಲೆ ನ್ಯಾಯಾಂಗ ನಿಂದನೆ ಆರೋಪದ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಿತ್ತು.