Advertisement

ಶ್ರೀರಾಮನ ನಡೆ-ನುಡಿ ಮನುಷ್ಯ ಸಹಜವಾಗಿದ್ದವು: ಪ್ರಸನ್ನ ಹೆಗ್ಗೋಡು

02:05 AM Jul 25, 2018 | Karthik A |

ಕಾರ್ಕಳ: ವಾಲ್ಮೀಕಿ ರಾಮಾಯಣದಲ್ಲಿ ವರ್ಣಿತನಾಗಿರುವ ಶ್ರೀರಾಮ ಒಬ್ಬ ಮನುಷ್ಯಮೂರ್ತಿ. ಅವನ ನಡೆ-ನುಡಿಗಳೆಲ್ಲ ಮನುಷ್ಯ ಸಹಜವಾಗಿಯೇ ಇದ್ದವು. ಹಾಗೆ ಪುರುಷನಾಗಿದ್ದುಕೊಂಡೇ ಆತ ಹೇಗೆ ಮರ್ಯಾದಾ ಪುರುಷೋತ್ತಮ ಎನಿಸಿಕೊಂಡ ಎಂಬುದನ್ನು ಋಷಿ ಕವಿ ವಾಲ್ಮೀಕಿ ಚಿತ್ರಿಸಿದ್ದಾರೆ ಎಂದು ರಂಗಕರ್ಮಿ – ಚಿಂತನಶೀಲ ಲೇಖಕ ಪ್ರಸನ್ನ ಹೆಗ್ಗೋಡು ಅವರು ಹೇಳಿದರು. ಕಾರ್ಕಳ ಸಾಹಿತ್ಯ ಸಂಘದ ಆಶ್ರಯದಲ್ಲಿ ಹೊಟೇಲ್‌ ಪ್ರಕಾಶ್‌ನ ಸಂಭ್ರಮ ಸಭಾಗೃಹದಲ್ಲಿ ಸೋಮವಾರ ನಡೆದ ರಾಮಾಯಣ ಅದರ ಸುತ್ತ ಮುತ್ತ ಎಂಬ ವಿಷಯದ ಕುರಿತು ವಿಶ್ಲೇಷಣಾತ್ಮಕ ಉಪನ್ಯಾಸ ನೀಡಿದರು.

Advertisement

ಭವಭೂತಿಯಲ್ಲಿ ಸಂಸ್ಕೃತ ನಾಟಕ ಉತ್ತರ ರಾಮ ಚರಿತ್ರೆಯನ್ನುಉದಾಹರಿಸಿ ಅದನ್ನೊಂದು ಬರಿಯ ನಾಟಕವಾಗಿ ಓದಿದಾಗ ನನಗದು ತೀರಾ ನೀರಸವೆನಿಸಿತು. ಆದರೆ ಅದನ್ನು ರಂಗ ಪ್ರದರ್ಶನಕ್ಕೆ ತರುವುದಕ್ಕಾಗಿ ನಿರ್ದೇಶಿಸುತ್ತಿದ್ದಂತೆಯೇ ನಾನು ಭಾವಾವಿಷ್ಟನಾದೆ. ಕಣ್ಣೀರು ಧಾರೆ ಧಾರೆಯಾಗಿ ಸುರಿಯತೊಡಗಿತು. ಅಷ್ಟರ ಮಟ್ಟಿಗೆ ಭವಭೂತಿಯ ನಾಟಕ, ಆ ಮೂಲಕ ವಾಲ್ಮೀಖೀ ರಾಮಾಯಣ ನನ್ನನ್ನು ಪ್ರಭಾವಿಸಿತು. ಶ್ರೀರಾಮನಿಗೆ ವನವಾಸವೆಂಬುದು ಒಂದು ಶಿಕ್ಷೆಯಾಗಿರಲಿಲ್ಲ. ಅದೊಂದು ಆತ್ಮ ಪರೀಕ್ಷೆಯ ಒರೆಗಲ್ಲಾಗಿತ್ತು. ಯಾವುದನ್ನು ಗಾಂಧೀಜಿ ರಾಮರಾಜ್ಯವೆಂದು ಕರೆದರೋ ಅಂತಹ ರಾಜ್ಯದ ಪರಿಕಲ್ಪನೆಯೂ ಆಗಲೇ ಅವನಲ್ಲಿ ಮೂಡಿತು ಎಂದು ಅವರು ಅಭಿಪ್ರಾಯಪಟ್ಟರು.

ಸಂಘದ ಗೌರವಾಧ್ಯಕ್ಷ ಆರ್‌. ತುಕಾರಾಮ ನಾಯಕ್‌ ಉಪಸ್ಥಿತರಿದ್ದರು. ಸಾಹಿತ್ಯ ಸಂಘದ ಕಾರ್ಯಾಧ್ಯಕ್ಷ ಪ್ರೊ| ಎಂ. ರಾಮಚಂದ್ರ ಅವರು ಸ್ವಾಗತಿಸಿ, ಡಾ| ವರದರಾಜ ಚಂದ್ರಗಿರಿ ಅವರು ಕಾರ್ಯಕ್ರಮ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಪ್ರೊ| ಬಿ. ಪದ್ಮನಾಭ ಗೌಡ ಅವರು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next