Advertisement

ರಾಗಿಗುಡ್ಡದಲ್ಲಿ ಸುವರ್ಣ ಸಂಭ್ರಮ

03:15 PM Dec 22, 2018 | Team Udayavani |

ಬೆಂಗಳೂರು ದಕ್ಷಿಣದ ಪ್ರಮುಖ ಹೆಗ್ಗುರುತಾದ ರಾಗಿಗುಡ್ಡದ ಪ್ರಸನ್ನ ಆಂಜನೇಯ ಸ್ವಾಮಿ ದೇವಾಲಯದಲ್ಲಿ 50ನೇ ವರ್ಷದ ಹನುಮ ಜಯಂತಿ ನಡೆಯುತ್ತಿದೆ. ಡಿಸೆಂಬರ್‌ 12ರಂದು ಪ್ರಾರಂಭವಾದ ಸುವರ್ಣ ಮಹೋತ್ಸವ 30ರವರೆಗೆ ನಡೆಯಲಿದೆ.

Advertisement

ಡಿ. 23ರಿಂದ 30ರವರೆಗೆ ಕೃಷ್ಣ ಯಜುರ್ವೇದ ಸಂಹಿತಾ ಸ್ವಾಹಕಾರ ಯಾಗ ನಡೆಯಲಿದ್ದು, ಮಹೋತ್ಸವದ ಕೊನೆಯ ದಿನ ರಾಮತಾರಕ ಹೋಮ ಮತ್ತು ಸಂಹಿತಾಯಾಗದ ಪೂರ್ಣಾಹುತಿ ನಡೆಯಲಿದೆ. ಸ್ವರ್ಣ ಮಹೋತ್ಸವದ ಸವಿ ನೆನಪಿಗೆ 18 ಅಡಿ ಎತ್ತರದ ಶ್ರೀ ರಾಮತಾರಕನಾಮ ಕೋಟಿ ಲೇಖನ ಯಜ್ಞದ ಸ್ಮಾರಕ ಸ್ತಂಭವನ್ನು ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಸ್ಥಾಪನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಪವನಸುತ ಸ್ಮರಣ ಸಂಚಿಕೆ ಬಿಡುಗಡೆಗೊಳ್ಳಲಿದ್ದು, ಪ್ರಭಾತ್‌ ಕಲಾ ವಿದರಿಂದ ಶ್ರೀರಾಮ ಪ್ರತೀಕ್ಷ ನೃತ್ಯರೂಪಕ ನಡೆಯಲಿದೆ.

ಎಲ್ಲಿ?: ರಾಗಿಗುಡ್ಡದ ಪ್ರಸನ್ನ
ಆಂಜನೇಯ ಸ್ವಾಮಿ ದೇವಾಲಯ,
ಜಯನಗರ 9ನೇ ಬಡಾವಣೆ
 ಯಾವಾಗ?: ಡಿ 22-30
 ಹೆಚ್ಚಿನ ವಿವರಗಳಿಗೆ: 26580500/26594255

Advertisement

Udayavani is now on Telegram. Click here to join our channel and stay updated with the latest news.

Next