Advertisement

ಮಠದಲ್ಲಿ ನಿತ್ಯ 10 ಸಾವಿರ ಮಂದಿಗೆ ಪ್ರಸಾದ ಶ್ರೇಷ್ಠ ಕಾರ್ಯ

07:08 AM Jan 23, 2019 | Team Udayavani |

ಎಚ್‌.ಡಿ.ಕೋಟೆ: ಸಿದ್ಧಗಂಗಾ ಮಠದಲ್ಲಿ ಶ್ರೀಗಳು ಧರ್ಮಾತೀತವಾಗಿ, ಜಾತ್ಯತೀತವಾಗಿ ಲಕ್ಷಾಂತರ ಬಡ ಮಕ್ಕಳಿಗೆ ಶಿಕ್ಷಣ ನೀಡಿ ಅವರ ಬದುಕಿಗೆ ಬೆಳಕಾಗಿದ್ದಾರೆ ಎಂದು ಶಾಸಕ ಅನಿಲ್‌ ಚಿಕ್ಕಮಾದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಪಟ್ಟಣದ ಬಾಪೂಜಿ ವೃತ್ತದಲ್ಲಿ ವಿವಿಧ ಸಮುದಾಯದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಮಠದಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಇಂದು ವೈದ್ಯರು, ವಿಜ್ಞಾನಿಗಳು ಸೇರಿದಂತೆ ಅತ್ಯುನ್ನತ ಹುದ್ದೆ ಅಲಂಕರಿಸಿ ಉಜ್ವಲ ಭವಿಷ್ಯ ರೂಪಿಸಿಕೊಂಡಿದ್ದಾರೆ. ಇದಕ್ಕೆ ಸಿದ್ಧಗಂಗಾ ಶ್ರೀಗಳು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣಕ್ಕೆ ನೀಡಿದ ಕಾಳಜಿಯೇ ಕಾರಣವಾಗಿದೆ ಎಂದರು.

ಬಿಡಗಲು ವಿರಕ್ತ ಮಠದ ಮಹದೇಶ್ವರ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಮತ್ತು ಅವರ‌ ಏಳಿಗೆಗಾಗಿ ಅಪಾರವಾಗಿ ಶ್ರೀಗಳು ಶ್ರಮಿಸಿದರು. ದಾಸೋಹದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದರು. ಮಠದಲ್ಲಿ ಪ್ರತಿದಿನ ಹತ್ತು ಸಾವಿರ ಮಂದಿಗೆ ಅನ್ನದಾಸೋಹ ಮಾಡುವುದು ಸುಲಭ ಕಾರ್ಯವಲ್ಲ. ಅಂತಹ ಶ್ರೇಷ್ಠ ಕೆಲಸವನ್ನು ಹಲವು ದಶಕಗಳ ತುಂಬಾ ಅಚ್ಚುcಕಟ್ಟಾಗಿ ನಿರ್ವಹಿಸಿದರು.

ಜಗತ್ತು ಕಂಡ ಶ್ರೇಷ್ಠ ಮಾನವತವಾದಿ  ಎಂದು ಶ್ಲಾ ಸಿದರು. ಹಂಚೀಪುರ ಮಠದ ಚೆನ್ನಬಸವಸ್ವಾಮೀಜಿ ಮಾತನಾಡಿ, ನಡೆದಾಡುವ ದೇವರಾದ ಡಾ.ಶಿವಕುಮಾರಸ್ವಾಮಿಗಳು ನಡೆದ ದಾರಿಯಲ್ಲಿ ಪ್ರತಿಯೊಬ್ಬರೂ ಸಾಗಬೇಕು. ಆಗ ಮಾತ್ರ ಅವರಿಗೆ ನಾವು ಗೌರವ ಸಲ್ಲಿಸಿದಂತಾಗುತ್ತದೆ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಕನ್ನಡ ಪ್ರಮೋದ್‌ ಮಾತನಾಡಿ, 2004-05ರಲ್ಲಿ ತಾಲೂಕಿನ ಹೊಮ್ಮರಗಳ್ಳಿ ಗ್ರಾಮಕ್ಕೆ ಸಿದ್ಧಗಂಗಾ ಶ್ರೀಗಳು  ಅವರ 100ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರನ್ನು ಕಂಡ ತಾಲೂಕಿನ ಜನತೆ ಪುನೀತರಾಗಿದ್ದರು ಎಂದು ಸ್ಮರಿಸಿದರು.

Advertisement

ಸಭೆಯಲ್ಲಿ ಜಿಪಂ ಸದಸ್ಯ ವೆಂಕಟಸ್ವಾಮಿ, ಮಾಜಿ ಸದಸ್ಯರಾದ ಎಚ್‌.ಸಿ.ಶಿವಣ್ಣ, ರುದ್ರಪ್ಪ, ಪುರಸಭೆ ಸದಸ್ಯರಾದ ಎಚ್‌.ಸಿ. ನರಸಿಂಹಮೂರ್ತಿ, ಎಂ.ಮಧುಕುಮಾರ್‌, ನಂಜಪ್ಪ, ಮುಖಂಡರಾದ ಎಂ.ಸಿ. ದೊಡ್ಡನಾಯಕ, ವೈ.ಟಿ. ಮಹೇಶ್‌, ವೀರಪ್ಪ, ಮನುಗನಹಳ್ಳಿ ಮಾದಪ್ಪ, ಜೆ.ಪಿ. ಚಂದ್ರಶೇಖರ್‌, ನಾಗರಾಜಪ್ಪ, ಸಿ.ಕೆ.ಗಿರೀಶ್‌, ಉಮೇಶ್‌, ಎಂಎಸ್‌. ಗಿರೀಶ್‌ ಮೂರ್ತಿ,

ಗುರುಸ್ವಾಮಿ, ಮಹದೇವು, ಗಂಗಾಧರಸ್ವಾಮಿ, ಬಿ.ಪಿ. ಭಾಸ್ಕರ್‌, ಯೋಗೇಶ್‌, ಜಯಂತ್‌, ವಿನಯ್‌, ಎಚ್‌.ಎಲ್‌.ರವೀಂದ್ರ, ಸಿದ್ದನಾಯಕ, ತಾರಕಾ ಮನ್ಸೂರು, ಸೆಮಿಉಲ್ಲಾ, ಕಾಳಪ್ಪಾಜಿ, ರಾಜಣ್ಣ, ಯಶವಂತ್‌, ರತನ್‌, ಸ್ವಾಮಿ, ಸತೀಶ್‌, ಮಣಿ, ವೇಣು, ವಕೀಲರಾದ ಸಂಗಮೇಶ್ವರ್‌, ತಿಮ್ಮೇಗೌಡ ಇತರರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next