Advertisement

ಕ್ಷೇತ್ರದ ಅಭಿವೃದ್ಧಿಯನ್ನೇ ಮರೆತ ಪ್ರಸಾದ್‌

01:14 PM Mar 22, 2017 | Team Udayavani |

ನಂಜನಗೂಡು: ಮಾಜಿ ಸಚಿವ ವಿ. ಶ್ರೀನಿವಾಸ ಪ್ರಸಾದ್‌ ಕಳೆದ ಎಂಟೂವರೆ ವರ್ಷಗಳಿಂದ ಅಭಿವೃದ್ಧಿಯನ್ನೇ ಮರೆತಿದ್ದರು ಎಂದು ಡಾ. ಎಚ್‌.ಸಿ. ಮಹದೇವಪ್ಪ ಆರೋಪಿಸಿದರು.

Advertisement

ಕಾಂಗ್ರೆಸ್‌ ನಾಯಕರು ಮಂಗಳವಾರದಿಂದ ತಾಲೂಕಿ ಗ್ರಾಮೀಣ ಪ್ರದೇಶಗಳತ್ತ ಮುಖ ಮಾಡಿದ್ದು ಬೆಳಗ್ಗೆ ಸುಕ್ಷೇತ್ರ ಮಲ್ಲನಮೂಲೆ ಮಠಕ್ಕೆ ತೆರಳಿ ಅಲ್ಲಿನ ಪೀಠಾಧ್ಯಕ್ಷ ಚೆನ್ನಬಸವಸ್ವಾಮಿ ಆಶೀರ್ವಾದ ಪಡೆದು ನಗರದ ಮಹದೇಶ್ವರ ಬಡಾವಣೆಯಲ್ಲಿರುವ ಶ್ರೀ ಮಹದೇಶ್ವರ ದೇವಾಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಪ್ರಾರಂಭಿಸಿದರು.

ನಂತರ ದೇಬೂರು, ಹಂಡುವಿನಹಳ್ಳಿ, ಹೆಗ್ಗಡಹಳ್ಳಿ, ಶಿರಮಳ್ಳಿ, ಹುಲ್ಲಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಹದೇವಪ್ಪ, ಮಾಜಿ ಸಚಿವ ಸತೀಶ ಜಾರಕಿಹೊಳಿ, ಸಂಸದ ಆರ್‌.ಧ್ರುವನಾರಾಯಣ ಅಭ್ಯರ್ಥಿ ಕಳಲೆ ಕೇಶವ ಮೂರ್ತಿಯವರೊಂದಿಗೆ ಮತಯಾಚನೆ ಮಾಡಿದರು.

ಕಳೆದ 43 ವರ್ಷಗಳ ರಾಜಕೀಯ ಜೀವನದಲ್ಲಿ ಈ ಭಾಗಕ್ಕೆ ಪ್ರಸಾದರ ಕೊಡುಗೆ ಏನು ಎಂದ ಮಹದೇವಪ್ಪ,5  ಪ್ರಧಾನಿಗಳನ್ನು ಕಂಡವರಿಗೆ  ಪಟ್ಟಣದ ಎರಡು ರಸ್ತೆ ದುರಸ್ತಿ ಮಾಡಲು ಸಾಧ್ಯವಾಗದಿರುವುದು ವಿಪರ್ಯಾಸ ಎಂದರು.

ನಿಜವಾದ ಸ್ವಾಭಿಮಾನಿ ಎಂದರೆ ಕಳಲೆ ಕೇಶವಮೂರ್ತಿ ಅವರು ಎಂದು ವ್ಯಾಖ್ಯಾನಿಸಿದ ಸಂಸದ ಅರ್‌.ಧ್ರುವನಾರಾಯಣ್‌ ಕಪ್ಪು ಚುಕ್ಕೆ ಇಲ್ಲದ ಕಳಂಕ ರಹಿತ ರಾಜಕಾರಣಿಯಾದ ಕಳಲೆ ತತ್ವಾಂತರಿಯೂ ಅಲ್ಲಾ ಪûಾಂತರಿಯೂ ಅಲ್ಲ, ಇಂಥ ಸಾಮರ್ಥ್ಯ ಹೊಂದಿದ ಇವರನ್ನು ಗುರುತಿಸಿ ನಾವೇ ಕರೆ ತಂದು ಅಭ್ಯರ್ಥಿಯಾಗಿಸಿದ್ಧೇವೆ ಎಂದು ತಿಳಿಸಿದರು.

Advertisement

ವಿ.ಶ್ರೀನಿವಾಸ ಪ್ರಸಾದ್‌ ಹೇಳುವಂತಹ ಸ್ವಾಭಿಮಾನ ಮತ್ತು ದುರಹಂಕಾರದ ನಡುವಿನ ಹೋರಾಟ ಇದಲ್ಲ ಇಂತಹ ಹೇಳಿಕೆಯೇ ಹಾಸ್ಯಾಸ್ಪದ ಎಂದು  ಲೇವಡಿ ಮಾಡಿದರು. ಶಾಸಕ ಸತೀಶ್‌ ಜಾರಕಿ ಹೊಳಿ ಮಾತನಾಡಿ, ಕಾಂಗ್ರೆಸ್‌ ಪಕ್ಷ ಹಿಂದುಳಿದ ವರ್ಗ ಸೇರಿದಂತೆ ಎಲ್ಲಾ ವರ್ಗಗಳನ್ನು ಸಮಾನ ದೃಷ್ಟಿಯಿಂದ ಕಾಣುವಂತಹ ಪಕ್ಷವಾಗಿದ್ದು ಎಲ್ಲರೂ ಕಾಂಗ್ರೆಸ್‌ನ್ನೇ ಬೆಂಬಲಿಸಬೇಕೆಂದು ಕೋರಿದರು.

ತಮ್ಮಣ್ಣೇಗೌಡ, ಎಪಿಎಂಸಿ ಅಧ್ಯಕ್ಷ ಕಾಗಲವಾಡಿ ಮಾದಪ್ಪ, ಜಿಪಂ ಮಾಜಿ ಸದಸ್ಯರಾದ ಕೆ.ಬಿ.ಸ್ವಾಮಿ, ಎಂ. ಪ್ರದೀಪ್‌ ಕುಮಾರ್‌, ತಾಪಂ ಉಪಾಧ್ಯಕ್ಷ ಗೋವಿಂದರಾಜನ್‌, ತಾಪಂ ಸದಸ್ಯ ಹೆಚ್‌ .ಎಸ್‌. ಮೂಗಶಟ್ಟಿ, ವಕೀಲರಾದ ರಾಚಪ್ಪ, ನಾಗರಾಜಯ್ಯ, ಮಾಜಿ ಜಿಪಂ ಉಪಾಧ್ಯಕ್ಷ ಮಡುವಿನಳ್ಳಿ ಶಂಕರಪ್ಪ,  

ಮಾಜಿ .ಪುರಸಭಾಧ್ಯಕ್ಷರಾದ ಎನ್‌. ಶ್ರೀಧರ್‌, ಸಿ.ಎಂ ಶಂಕರ್‌, ಪಿ.ಶ್ರೀನಿವಾಸ್‌, ಮುಹೀರ್‌ ಅಹಮದ್‌, ವೀರಶೈವ ನಗರ ಘಟಕದ ಅಧ್ಯಕ್ಷ ಗುರುಮಲ್ಲಪ್ಪ, ಮಾಜಿ ತಾಪಂ ಸದಸ್ಯ ಕಡಜೆಟ್ಟಿ ಬಸವರಾಜು, ಮಾಜಿ ಉಪಾಧ್ಯಕ್ಷ ಎನ್‌.ಇಂದ್ರ, ನಗರಸಭಾ ಸದಸ್ಯ ರಾಜೇಶ್‌,

ಕಾಂಗ್ರೆಸ್‌ ಮುಖಂಡ ಜಿಲ್ಲಾ ವಿಶ್ವಕರ್ಮ ಸಂಘದ ಅಧ್ಯಕ್ಷ ನಂದಕುಮಾರ್‌ ಅನ್ಸ್‌ರ್‌ ಅಹಮದ್‌, ವಕೀಲ ಮುರಳಿ, ಬಸವರಾಜು, ಮಾಲೇಗೌಡ, ಕುರುಹುಂಡಿ ಮಹೇಶ್‌, ಸತೀಶ್‌ಗೌಡ, ಹುಚ್ಚೇಗೌಡ, ದೇಬೂರು ಗ್ರಾಪಂ ಅಧ್ಯಕ್ಷೆ ಜಯಮ್ಮ, ಮಾಜಿ ತಾಪಂ ಸದಸ್ಯ ಬಸವರಾಜು, ಹೊಸಹಳ್ಳಿ ಮಹದೇವು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next