Advertisement
ಕಾಬೂಲ್‌ನ ಯುಕೆ ಅಧೀನದ ಓವರ್‌ಸೀಸ್ ಸಪ್ಲೈ ಸರ್ವೀಸ್ ಕಂಪೆನಿಯಲ್ಲಿ 8 ವರ್ಷಗಳಿಂದ ಅಕೌಂಟೆಂಟ್ ಆಗಿದ್ದ ಪ್ರಸಾದ್ 2021ರ ಫೆಬ್ರವರಿಯಲ್ಲಿ ಊರಿಗೆ ಆಗಮಿಸಿ 2 ತಿಂಗಳ ರಜೆ ಮುಗಿಸಿ ಎಪ್ರಿಲ್ ಮೊದಲ ವಾರ ಹಿಂದಿರುಗಿದ್ದರು. ಅವರು ಒಂದು ವಾರದಿಂದ ಕಾಬೂಲ್ ಏರ್‌ಪೋರ್ಟ್‌ನಲ್ಲಿ ತಾಯ್ನಾಡಿಗೆ ಹೋಗುವ ನಿರೀಕ್ಷೆಯಲ್ಲಿ ಕಾಯುತ್ತಿದ್ದರು.
Related Articles
Advertisement
ಅಫ್ಘಾನಿಸ್ಥಾನದಲ್ಲಿ ನ್ಯಾಟೋ ಮಿಲಿಟರಿ ಬೇಸ್ ಉಳಿದಿರುವುದು ಕಾಬೂಲ್‌ನಲ್ಲಿ ಮಾತ್ರ. ಮಿಲಿಟರಿ ಬೇಸ್‌ಗೆ ಅಮೆರಿಕ ನೇತೃತ್ವದ ನ್ಯಾಟೋ ಪಡೆ ಸಂಪೂರ್ಣ ಭದ್ರತೆ ಒದಗಿಸಿದೆ. ಬೇಸ್‌ಗೆತಾಗಿಕೊಂಡಿರುವ ಏರ್‌ಪೋರ್ಟ್‌ನ ಹೊರವಲಯದಲ್ಲಿ ಉಗ್ರರು ಕ್ಯಾಂಪ್ ಹೂಡಿದ್ದಾರೆ. ಆದರೆ ಮಿಲಿಟರಿ ಬೇಸ್‌ನೊಳಗಿರುವವರಿಗೆ ಆ. 31ರ ವರೆಗೆ ಯಾವುದೇ ತೊಂದರೆ ಆಗಲಾರದು. ಒಂದು ವಾರದ ಹಿಂದೆ ಕಂಪೆನಿಯಲ್ಲಿದ್ದವರು ಭಾರತೀಯ ರಾಯಭಾರ ಕಚೇರಿ ರಚಿಸಿದ ವಾಟ್ಸ್‌ಆ್ಯಪ್‌ಗೆ ಗುಂಪಿಗೆ ಸೇರಿದ್ದೆವು. ಈ ಮೂಲಕ ನಿರಂತರ ಸಂಪರ್ಕವನ್ನು ಇಟ್ಟುಕೊಳ್ಳುತ್ತಿದ್ದೆವು. ಮನೆಯಲ್ಲಿಯೂ ಆತಂಕವಿದ್ದುದರಿಂದ ಪತ್ನಿ, ಸಂಬಂಧಿಕರು ಹಾಗೂ ಸ್ನೇಹಿತರಿಂದ ನಿರಂತರ ಕರೆ ಬರುತ್ತಿತ್ತು. ವಾಯ್ಸ ಮೆಸೇಜ್ ಮುಖೇನ ಸಂಪರ್ಕ ಇಟ್ಟುಕೊಂಡಿದ್ದೆ. ಕಾಬೂಲ್‌ನಲ್ಲಿ ವಿಮಾನ ಏರಿದ ಅನಂತರವಷ್ಟೇ ಮನೆಗೆ ತಲುಪುವ ಧೈರ್ಯ ಬಂದಿತ್ತು ಎಂದು ಪ್ರಸಾದ್ ತಿಳಿಸಿದರು.
ಶಾಸಕ ಯು.ಟಿ. ಖಾದರ್, ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷೆ ಪ್ರಫುಲ್ಲಾ ದಾಸ್ ಮೊದಲಾದವರು ಪ್ರಸಾದ್ ಅವರನ್ನು ಸ್ವಾಗತಿಸಿದರು.
ಕೊರಗಜ್ಜನಿಗೆ ಹೇಳಿದ ಹರಕೆ ಫಲಿಸಿತು :
ಪತಿ ಸುರಕ್ಷಿತವಾಗಿ ಮರಳುವಂತೆ ಕೊರಗಜ್ಜನಿಗೆ ಹರಕೆ ಹೇಳಿದ್ದು, ಇದೀಗ ಫಲಿಸಿದೆ ಎಂದು ಪ್ರಸಾದ್ ಪತ್ನಿ ಭವಿಳಾ ಪ್ರಸಾದ್ ತಿಳಿಸಿದ್ದಾರೆ. ಕಾಬೂಲ್ ತಾಲಿಬಾನ್ ವಶವಾಗುತ್ತಿದ್ದಂತೆ ಪತಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ. ಇದೀಗ ಮನೆಗೆ ತಲುಪಿದ್ದರಿಂದ ಮನಸ್ಸಿಗೆ ಸಮಾಧಾನವಾಗಿದೆ ಎಂದಿದ್ದಾರೆ.