Advertisement
ಶಂಕರ್‌ಪಿಳ್ಳೆ ಮತ್ತು ಕೋಟಿ ಕೋಟಿ ಧನಲಾಭಶಂಕರ್ ಪಿಳ್ಳೆ ಕಡುಬಡತನ ಅನುಭವಿಸಿದ ವ್ಯಕ್ತಿ. ಅವರ 67ನೇ ವಯಸ್ಸಿನಲ್ಲಿ ಹೊರದೇಶದಲ್ಲಿ ವಾಸ ಮಾಡಿ ಸಂಪಾದನೆಯಲ್ಲಿ ತಂದೆತಾಯಿಗೆ ಹಣ ಕಳುಹಿಸಿಕೊಡುತ್ತಿದ್ದ ಅವರ ಮಗನಿಗೆ ಒಂದು ದೊಡ್ಡ ಆಸ್ತಿ ಸಿಕ್ಕಿತ್ತು. ವೃದ್ಧರಾಗಿದ್ದ ಶಂಕರ ಪಿಳ್ಳೆಗೆ ಇದು ತುಂಬಾ ಸಂತೋಷದ ಸಂಗತಿಯಾಗಿತ್ತು. ಮಗನ ಹೆಸರು ಷಣ್ಮುಖ ಪಿಳ್ಳಯ. ಇವರು ತುಂಬಾ ಧನವಂತ ಗಂಡಹೆಂಡತಿಯರ ಆರೈಕೆಯನ್ನು ಸ್ವಂತ ಮಗನಂತೆ ಮಾಡಿಕೊಂಡಿದ್ದ. ಆ ದಂಪತಿಗೆ ಅಪಾರ ಪ್ರಮಾಣದ ಉತ್ಪಾದನೆ ಇತ್ತು. ಸಂಪಾದನೆ ಚೆನ್ನಾಗಿತ್ತು ಅತ್ಯಂತ ಶ್ರೀಮಂತರ ಪಾಲಿಗೆ ಸೇರಿದ ಪ್ರಭಾವಶಾಲಿ ಕುಟುಂಬ ಅದು. ಕೊರತೆ ಎಂದರೆ ಮಕ್ಕಳಿರಲಿಲ್ಲ. ಅವರ ಆಸ್ತಿಗಾಗಿ ಹೊಂಚು ಹಾಕಿ ಕುಳಿತವರು ಸಾವಿರಾರು ಮಂದಿ. ಮಕ್ಕಳಿಲ್ಲದ ಶ್ರೀಮಂತ ದಂಪತಿಯನ್ನು ಮೆಚ್ಚಿಸಲು ಅವರ ಆಸ್ತಿಯ ಬಗ್ಗೆ ಕನಸು ಕಂಡಿದ್ದವರ ನಾಟಕದ ರೀತಿ ಒಂದಲ್ಲಾ, ಎರಡಲ್ಲಾ ನಾನಾ ಬಗೆಯವು. ಕೋಟಿಗಟ್ಟಲೆ ಆಸ್ತಿಯನ್ನು ಹೊಂದಿದ್ದ ಮಕ್ಕಳಿಲ್ಲದ ಈ ದಂಪತಿಗೆ ನಾಟಕ ಯಾವುದು, ನಿಜವಾದ ಗೌರವಾದರಗಳು ಯಾವುವು ಎಂಬುದು ತಿಳಿಯದ್ದೇನಲ್ಲ. ಕೇರಳದಿಂದ ಕೆಲಸ ಹುಡುಕಿ ಬಂದಿದ್ದ ಷಣ್ಮುಗಂ ಪಿಳ್ಳೆ ಬಗ್ಗೆ ಈ ದಂಪತಿಗೆ ಅಪಾರ ಮಮತೆ ಬೆಳೆದಿತ್ತು. ಯಾಕೆಂದರೆ ನಿರ್ವಂಚನೆಯಿಂದ ತಮ್ಮ ಸೇವೆ ಮಾಡುತ್ತಿದ್ದ ಷಣ್ಮುಗನನ್ನು ತಮ್ಮ ಸ್ವಂತ ಮಗನೇ ಎಂಬ ರೀತಿಯಲ್ಲಿ ಪರಿಭಾವಿಸಿದರು. ನಂಬಿದವ ನಂಬಿ ಬಿಟ್ಟರೆ ಬಿಡಿ, ಹೊರದೇಶದಿಂದ ಬಂದ ಹುಡುಗ ನಂತರ ತೊಳಲಾಟ ಅನುಭವಿಸಬಾರದೆಂದು ಭಾರತಕ್ಕೇ ಬಂದು ತಮ್ಮ ಜೀವಿತಾವಧಿಯಲ್ಲೇ ಸುಮಾರು ಇಪ್ಪತ್ತು ಕೋಟಿಯಷ್ಟು ಧನಕನಕ ಆಸ್ತಿ ಜಮೀನು ಮನೆಗಳನ್ನು ಷಣ್ಮುಖನ ಹೆಸರಿಗೆ ಮಾಡಿದರು. ಅಲ್ಲದೆ ಅವನ ತಂದೆ ತಾಯಿಗಳಾದ ಶಂಕರಪಿಳ್ಳೆ ದಂಪತಿಗೆ ಸುಮಾರು ಮೂರು ಕೋಟಿ ಇನಾಮನ್ನು ಅವರ ಖಾತೆಗೆ ಜಮಾ ಮಾಡಿದರು. ಇನ್ನೂ ಆಶ್ಚರ್ಯ ಎಂಬಂತೆ ಈ ವಹಿವಾಟಿನ ಸಂದರ್ಭದ ಯಾವ ಯಾವ ರೀತಿಯ ಸುಂಕಗಳು ತೆರಿಗೆಗಳಿವೆಯೋ ತಾವೇ ಭರಿಸಿದರು. ಒಬ್ಬ ನಿಷ್ಕಳಂಕ ಸೇವಾ ಮನೋಭಾವದ ಈ ಹುಡುಗನಿಗೆ ಇಷ್ಟೊಂದು ದೊಡ್ಡ ಲಾಭ ಒದಗಿ ಬಂದಿತ್ತು. ಕೇಳರಿಯದ ಶ್ರೀಮಂತಿಕೆಯೊಂದು ಶಂಕರ ಪಿಳ್ಳೆಗೆ ಇಳಿವಯಸ್ಸಿನಲ್ಲಿ ದೊರಕಿದ್ದು ಕಂಡು ಆದ ಸಂತೋಷ ಅಷ್ಟಿಷ್ಟಲ್ಲ. ಮಗನ ಮದುವೆಯನ್ನು ಮುಗಿಸಬೇಕು. ಆಗಲೇ ಮಗನಿಗೆ ವಯಸ್ಸು 27. ಹದಿನೆಂಟರ ವಯಸ್ಸಿನಲ್ಲೇ ದೂರ ದೇಶಕ್ಕೆ ಹೋಗಿದ್ದಾನೆ. ದೇವರ ದಯದಿಂದ ಎಲ್ಲವೂ ಇಲ್ಲಿಯತನಕ ಬಂದು ಬದುಕು ಗೆದ್ದಿತು ಎಂದು ಆನಂದಿಸಿದ.
ಬದುಕಿನ ಅರ್ಥ ಏನು? ಆಕಾಶ ಕುಸಿದುಬಿತ್ತು. ಧನದ ರಾಶಿಯು ಬಡ ಶಂಕರ ಪಿಳ್ಳೆಗೆ ಮಗನ ಕಾರಣಕ್ಕಾಗಿ ಬಂತು. ಆದರೆ ವಿಧಿ ಮತ್ತೂಂದನ್ನು ಬರೆದಿತ್ತು. ಮಕ್ಕಳಿಲ್ಲದ ಯಜಮಾನ ಒಡತಿಯ ಜೊತೆ ಕಾರಿನಲ್ಲಿ ಪಯಣಿಸುತ್ತಿದ್ದಾಗ ಷಣ್ಮುಖಪಿಳ್ಳೆ„ಯೂ ಸೇರಿ ಅಪಘಾತದಲ್ಲಿ ಸಾವನ್ನಪ್ಪಿದ್ದರು.
ಇಅದು ಕಥೆಯಲ್ಲ ನಡೆದ ಘಟನೆ. ಜೀವನ ಕಥೆಗಿಂತಲೂ ಹೆಚ್ಚು ರೋಚಕ. ಕಥೆಗಿಂತಲೂ ಹೆಚ್ಚು ಜಟಿಲ ಎಂಬುದನ್ನು ನಾವು ನೆನಪಿಡಬೇಕು. ಶಂಕರಪಿಳ್ಳೆಗೆ ಏನಾಗಿರಬೇಕು. ಮಗನಿಗೆ ಮಕ್ಕಳಿಲ್ಲದ ಯಜಮಾನ ತನ್ನ ಆಸ್ತಿಯ ಶೇ 75ರಷ್ಟು ವಿಲ್ ಮಾಡಿದ್ದ.
ಇಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ
ಈ ಜಗತ್ತಿನಲ್ಲಿ ಮನುಷ್ಯನೊಬ್ಬನೇ ಸಂಪಾದಿಸುವ ಪ್ರಾಣಿ. ನಾಗರೀಕತೆಯನ್ನು ಕಟ್ಟಿಕೊಂಡ ಪ್ರಾಣಿ. ಹಣದ ಬದಲಾವಣೆ, ವಹಿವಾಟು, ಕಾರ್ಯತಂತ್ರ, ಹಣಕಾಸಿನ ಕಾರ್ಯಸೂಚಿ ಬಿಸಿನೆಸ್ ಇತ್ಯಾದಿ ಇತ್ಯಾದಿ ಬೇರೆ ಜೀವಿಗಳಿಗೆ ತಿಳಿಯದು. ಅವು ಸುಖವಾಗಿದೆಯೇ? ಇಲ್ಲಾ ಮನುಷ್ಯ ಸುಖವಾಗಿದ್ದಾನೆಯೇ? ಹಾಗಾದರೆ ಯಾಕೆ ಸುಖವಾಗಿಲ್ಲ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರವಿಲ್ಲ. ಭಾರತದ ಪ್ರಧಾನಿ ಭಾರತದಲ್ಲಿನ ಕಪ್ಪುಹಣ ಹೊರತರಲು ನಡೆಸಿದ ಸರ್ಕಸ್ ಅಂತಿಂಥ ರೀತಿಯದ್ದಲ್ಲ. ಆದರೆ ಆತ್ಮಪ್ರಾಮಾಣ್ಯದಿಂದ ಮೋದಿ ನಡೆಸಿದ ಪ್ರಯತ್ನ ಇದು ಎಂದು ಹೇಳಲಾಗಿದ್ದರೂ ಈ ದಿಟ್ಟ ಕ್ರಮ ಸೋಲನ್ನೇ ಕಟ್ಟಿಕೊಟ್ಟಿತೋ ಲಾಭವನ್ನೇ ತಂದಿತೋ ಸೋಲಾಗಿದ್ದರೆ ಏಕೆ ಸೋಲಾಯಿತು? ಗೆಲುವಾಗಿದ್ದರೆ ಹೇಗೆ ಗೆಲುವಾಯಿತು? ಇತ್ಯಾದಿ ಪ್ರಶ್ನೆಗಳು ಇದ್ದೇ ಇವೆ. ಲೆಕ್ಕಾಚಾರ ಮೀರಿ ಹೆಚ್ಚಿನ ಹಣ ಬ್ಯಾಂಕಿಗೆ ಬಂತು. ಕಪ್ಪು ಹಣದ ಕುಳಗಳು ಯಾರು ಎಂಬುದನ್ನು ತಿಳಿಯಲು ಆಗಲಿಲ್ಲ. ಯಾರ್ಯಾರ ಮೇಲೆಲ್ಲಾ ತೆರಿಗೆ ಅಧಿಕಾರಿಗಳಿಂದ ಅಥವಾ ಭ್ರಷ್ಟಾಚಾರ ತಡೆ ನಿಗ್ರಹ ದಳದಿಂದ ದಾಳಿ ನಡೆಯಿತು ಗೊತ್ತಾಗಲಿಲ್ಲ. ನೋಟಿನ ರದ್ಧತಿಯ ಹೊರತಾಗಿಯೂ ಭ್ರಷ್ಟರನ್ನು ಬೆನ್ನು ಹತ್ತವಂಥ ಶಕ್ತಿ ಭಾರತದಂಥ ಬಲಿಷ್ಠ ರಾಷ್ಟ್ರ ತನಿಖಾ ದಳಗಳಿಗೆ ಇದ್ದೇ ಇದೆಯಲ್ಲವೇ? ಆದರೂ ಮೋದಿ ಇಂಥದೊಂದು ದ್ರಾವಿಡ ಪ್ರಾಣಾಯಾಮ ನಡೆಸಿದರು. ನಾವೆಲ್ಲಾ ತಿಳಿಯಬೇಕಾದ್ದು ಕಪ್ಪು ಹಣವೂ ಪ್ರಾರಬ್ಧವನ್ನು ನಿರ್ಮಿಸುತ್ತದೆ. ಒಟ್ಟಿನಲ್ಲಿ ಪ್ರಾಪ್ತಿ ಎಂಬುದು ಇರಬೇಕು. ಕಳ್ಳ ಹಣ ಹೊರತರುತ್ತೇವೆ ಎಂದು ವಿಶ್ವಾಸದಿಂದ ಮೋದಿ ಹೇಳಿದರೂ ಲಕ್ಷಾಂತರ ಮಂದಿ ತೊಂದರೆ ಇರದಂತೆ ಸಮಸ್ಯೆಯನ್ನು ನಿವಾರಿಸಿಕೊಂಡರು ಎಂದು ಹೇಳಲಾಗುತ್ತಿದೆಯಲ್ಲಾ? ಇದು ಹೇಗೆ ಸಾಧ್ಯವಾಯಿತು? ನಮ್ಮ ವ್ಯಕ್ತಿತ್ವವೇ ನಮ್ಮ ಪ್ರಾಮಾಣಿಕತೆಯನ್ನು ಭ್ರಷ್ಟಾಚಾರವನ್ನು ಪೋಸುವಂಥದ್ದು. ಪ್ರಾಮಾಣಿಕನಿಗೆ ಭಯವೇ ಇಲ್ಲವೇ ಹಾಗಾದರೆ? ತೊಂದರೆಗೊಳಗಾದವರೇ ಹರಿಶ್ಚಂದ್ರ, ನಳ, ಶೀಬಿ, ಧರ್ಮರಾಯ, ರಾಮಚಂದ್ರ ಮುಂತಾದವರು. ಹಾಗಾದರೆ ಲಾಭದ ಪಾತ್ರ ಮತ್ತು ಸಾರ್ಥಕತೆ ಆಯಾ ಮನುಷ್ಯನ ನಿಲುವುಗಳ ಮೇಲೆ ನಿಂತಿದೆ.
Related Articles
Advertisement
ಅನಂತಶಾಸ್ತ್ರಿ