Advertisement

ಹೊಳೆಯುತ್ತಿದೆ ಮಹಾತ್ಮನ ಕಣ್ಣು!

01:31 AM Aug 11, 2019 | Team Udayavani |

ಸ್ಯಾನ್‌ಫ್ರಾನ್ಸಿಸ್ಕೋ: ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ಬೇ ಬ್ರಿಡ್ಜ್ಗೆ ಮುಖ ಮಾಡಿರುವ ಮಹಾತ್ಮ ಗಾಂಧಿ ಪ್ರತಿಮೆಯ ಕಣ್ಣುಗಳು ಕೆಂಪು ಬೆಳಕನ್ನು ಸೂಸುವ ಮೂಲಕ ಅಚ್ಚರಿ ಮೂಡಿಸಿದೆ.

Advertisement

1988ರಲ್ಲಿ ಸ್ಥಾಪಿಸಿದ ಕಂಚಿನ ಪ್ರತಿಮೆ ಹಲವು ಬಾರಿ ಇಂಥ ವಿಚಿತ್ರ ಸನ್ನಿವೇಶಗಳನ್ನು ಎದುರಿಸಿದೆ. ಈ ಪ್ರತಿಮೆಯ ಕನ್ನಡಕ ಕಾಣೆಯಾಗುವುದೇನೂ ಹೊಸತೂ ಅಲ್ಲ. ಹೀಗಾಗಿ ಅಲ್ಲಿನ ಆಡಳಿತ ಹೆಚ್ಚುವರಿ ಕನ್ನಡಕವನ್ನು ಮೊದಲೇ ತಂದು ಸಂಗ್ರಹಿಸಿಟ್ಟುಕೊಳ್ಳುತ್ತದೆಯಂತೆ.

ಆದರೆ ಈ ಬಾರಿ ರೆಡ್ಡಿಟ್ ಎಂಬ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಈ ಗಾಂಧಿ ಪ್ರತಿಮೆಯ ಕಣ್ಣುಗಳಿಂದ ಕೆಂಪು ಬೆಳಕು ಹೊರಸೂಸುತ್ತಿರುವ ಫೋಟೋ ಪ್ರಕಟಿಸಿದ್ದಾನೆ. ಈ ಕನ್ನಡಕಗಳಿಗೆ ಯಾರೋ ಎಲ್ಇಡಿ ಬಲ್ಬ್ಗಳನ್ನು ಅಳವಡಿಸಿಬಿಟ್ಟಿದ್ದಾರೆ. ಇದರಿಂದ ಗಾಂಧಿಯ ಕಣ್ಣುಗಳು ಕೆಂಡಕಾರುತ್ತಿರುವಂತೆ ಕಾಣಿಸುತ್ತಿದ್ದವು. ನಂತರ ಈ ಫೋಟೋಗಳು ಫೇಸ್‌ಬುಕ್‌, ಟ್ವಿಟರ್‌, ಇತರೆ ಸಾಮಾಜಿಕ ತಾಣಗಳಲ್ಲೂ ಹರಿದಾಡಿದವು. ಕೆಲವರು ಇದನ್ನು ಸ್ವಾಗತಿಸಿದರೆ, ಇನ್ನೂ ಕೆಲವರು ಇದು ಗಾಂಧೀಜಿಗೆ ಮಾಡಿದ ಅವಮಾನ ಎಂದು ಕಿಡಿಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next