ಪ್ರಾಣಾಯಾಮ ಇದು ಯೋಗ ವಿಜ್ಞಾನದ ಅತಿ ಪ್ರಮುಖ ಭಾಗ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಭಾಗ್ಯ ನೀಡುವ ಪ್ರಾಣಾಯಾಮವು ಉಸಿರಾಡುವ ಕಲೆಯನ್ನು ಕಲಿಸುವ ವಿಶಿಷ್ಟ ಯೋಗ. “ಪ್ರಾಣ’ ಎಂಬುದು ಉಸಿರಾಟ ಅಥವಾ ದೇಹ ದ ಪ್ರಮುಖ ಶಕ್ತಿ. “ಪ್ರಾಣ’ ಎಂಬ ಶಬ್ದ ಜೀವ ಶಕ್ತಿಯನ್ನು ಹಾಗೂ “ಯಾಮ’ ಶಬ್ದ ನಿಯಂತ್ರಣವನ್ನು ಸೂಚಿಸುತ್ತದೆ. ಅಂದರೆ “ಉಸಿರಾಟದ ನಿಯಂತ್ರಣ’ವೇ ಪ್ರಾಣಾಯಾಮ. ಪ್ರಾಣಾ ಯಾಮದ ಮೂಲಕ ಜೀವಶಕ್ತಿಲಯದ ಮೇಲೆ ನಿಯಂತ್ರಣ ಸಾಧಿಸಿ, ದೇಹ ಹಾಗೂ ಮನಸ್ಸಿನ ಆರೋಗ್ಯ ವೃದ್ಧಿಸಿಕೊಳ್ಳ ಬಹುದು. ಇಲ್ಲಿ ಪ್ರಾಣಾಯಾಮದ ಮೂಲ ವಿಧಾನಗಳಿವೆ.
ಭಸಿŒಕ: ಈ ವಿಧದ ಪ್ರಾಣಾಯಾಮದಲ್ಲಿ ಉಚ್ಛಾಸ ಹಾಗೂ ನಿಶ್ವಾಸಗಳ ಸಮಯದಲ್ಲಿ ದೇಹಕ್ಕೆ ಅತಿ ಹೆಚ್ಚು ಆಮ್ಲಜನಕ ದೊರಕುತ್ತದೆ. ಸಪಾಟಾದ ನೆಲದ ಮೇಲೆ ಆರಾಮವಾಗಿ ಕುಳಿತು ಮೂಗಿನ ಎರಡೂ ಹೊಳ್ಳೆಗಳ ಮೂಲಕ ಆಳವಾದ ಉಸಿರನ್ನು ಎಳೆದುಕೊಂಡು ಶ್ವಾಸಕೋಶವನ್ನು ತುಂಬಿಸಿ. ಅನಂತರ ಹಿಸ್ ಎಂಬ ಶಬ್ದ ಬರುವ ಹಾಗೆ ಸಂಪೂರ್ಣ ಉಸಿರನ್ನು ಹೊರಗೆ ಬಿಡಿ. ಇದನ್ನು ಮತ್ತೆ ಮತ್ತೆ ಪ್ರಯತ್ನಿಸಿ.
ಕಪಾಲಭಾತಿ: ಹೊಟ್ಟೆಯಲ್ಲಿನ ಸಮಸ್ಯೆ, ಬೊಜ್ಜು, ಜೀರ್ಣಶಕ್ತಿ ಸಮಸ್ಯೆ ಮುಂತಾದುವುಗಳ ನಿವಾರಣೆಗೆ ಕಪಾಲಭಾತಿ ಉಪಯುಕ್ತವಾಗಿದೆ. ನೆಲದ ಮೇಲೆ ಕಾಲು ಮಡಚಿ ಕುಳಿತುಕೊಳ್ಳಿ. ಬೆನ್ನು ನೇರವಾಗಿರಲಿ ಹಾಗೂ ಕಣ್ಣು ಮುಚ್ಚಿ. ಬಲ ಅಂಗೈಯನ್ನು ಬಲ ಮೊಣಕಾಲಿಗೆ ಹಾಗೂ ಎಡ ಅಂಗೈಯನ್ನು ಎಡ ಮೊಣ ಕಾಲಿಗೆ ತಾಗಿಸಿ. ಬಳಿಕ ಆಳವಾಗಿ ಉಸಿರೆಳೆದು, ಹೊಟ್ಟೆ ಒಳಗಡೆ ಹೋಗುವಂತೆ ಉಸಿರು ಹೊರಗೆ ಬಿಡಿ. ಹಿಸ್ ಎಂಬ ಶಬ್ದ ದೊಂದಿಗೆ ಉಸಿರು ಹೊರಗೆ ಬಿಡುವಾಗ ನಿಮ್ಮ ಎಲ್ಲ ರೋಗಗಳು ಅದರೊಂದಿಗೆ ಹೊರಗೆ ಹೋಗುತ್ತಿವೆ ಎಂದುಕೊಳ್ಳಿ. ಉಸಿರು ಒಳಗೆ ತೆಗೆದುಕೊಳ್ಳುವಾಗ ಯಾವುದೇ ಬಲ ಪ್ರಯೋಗಿಸಬೇಡಿ. ಪ್ರತಿ ನಿಶ್ವಾಸದ ಬಳಿಕದ ಉಚ್ಛಾ$Ìಸವು ಸಹಜವಾಗಿರಲಿ.