Advertisement

ದೇಹವನ್ನು ತಂಪಾಗಿರಿಸುವ ಪ್ರಾಣಾಯಾಮಗಳು

09:21 PM Apr 29, 2019 | Sriram |

ಬಿರು ಬಿಸಿಲು, ನೀರು ಕುಡಿದಷ್ಟೂ ದಾಹ, ದೇಹದಲ್ಲಿ ಉರಿ, ವಿಪರೀತ ಸೆಕೆ… ನಮ್ಮ ದೇಹವನ್ನು ಬಾಧಿಸುವ ಇದಕ್ಕೆ ಪರಿಹಾರ ದೇಹದಲ್ಲಿಯೇ ಅಡಗಿದೆ. ಶೀತ ಹಾಗೂ ಉಷ್ಣ ವಾತಾವರಣಕ್ಕೆ ತಕ್ಕಂತೆ ನಮ್ಮ ದೇಹವನ್ನು ಸಮತೂಕದಲ್ಲಿರಿಸಲು ಪ್ರಾಣಾಯಾಮಗಳು ಸಹಕಾರಿ. ಮುಖ್ಯವಾಗಿ ಉಷ್ಣತೆಯ ನಿಯಂತ್ರಣಕ್ಕೆ ಹಿರಿಯರು ಕಂಡುಕೊಂಡ ಸುಲಭೋಪಾಯವೇ ತಂಪಿನ ಪ್ರಾಣಾಯಾಮಗಳು.

Advertisement

ಇದರಲ್ಲಿ ಮುಖ್ಯವಾಗಿ ಮೂರು ವಿಧಗಳಿವೆ. 1.ಶೀತಲೀ ಪ್ರಾಣಾಯಾಮ, 2. ಸೀತ್ಕಾರಿ ಪ್ರಾಣಾಯಾಮ, 3. ಸದಂತ ಪ್ರಾಣಾಯಾಮ

- ಶೀತಲೀ ಪ್ರಾಣಾಯಾಮ
ಧ್ಯಾನದ ಭಂಗಿಯಲ್ಲಿ ಕುಳಿತು ನಾಲಗೆಯನ್ನು ಹೊರಹಾಕಬೇಕು. ಮಧ್ಯದಲ್ಲಿ ಚಿಕ್ಕ ಓಣಿಯ ಆಕಾರ ಮೂಡುವಂತೆ ನಾಲಗೆಯ ಎರಡೂ ಬದಿ ಮಡಚಬೇಕು. ಓಣಿಯ ಮೂಲಕ ಹೊರಗಿನ ಗಾಳಿಯನ್ನು ದೇಹದ ಒಳಕ್ಕೆ ಎಳೆದುಕೊಳ್ಳಬೇಕು. ಇದನ್ನು ಮೂಗಿನ ಮೂಲಕ ಹೊರಗೆ ಹಾಕಬೇಕು.

–  ಸೀತ್ಕಾರಿ ಪ್ರಾಣಾಯಾಮ
ಧ್ಯಾನದ ಭಂಗಿಯಲ್ಲಿ ಕುಳಿತು ಹಿಮ್ಮುಖವಾಗಿ ನಾಲಗೆಯನ್ನು ಮಡಚಬೇಕು. ನಾಲಗೆಯ ಎರಡೂ ಬದಿಗಳಿಂದ ಹೊರಗಿನ ಗಾಳಿಯನ್ನು ಒಳಗೆ ಎಳೆದುಕೊಳ್ಳಬೇಕು. ಮೂಗಿನ ಮೂಲಕ ಹೊರಹಾಕಬೇಕು.

- ಸದಂತ
ಹಲ್ಲುಗಳ ಎರಡೂ ಸಾಲುಗಳನ್ನು ಒಂದರ ಮೇಲೊಂದರಂತೆ ಒತ್ತಿ ಇಟ್ಟುಕೊಳ್ಳಬೇಕು. ಹಲ್ಲುಗಳ ಸಂಧಿಗಳ ಮೂಲಕ ಹೊರಗಿನ ಗಾಳಿಯನ್ನು ಒಳಗೆ ಎಳೆದುಕೊಳ್ಳಬೇಕು. ಹೀಗೆ ಎಳೆದುಕೊಂಡ ಗಾಳಿಯನ್ನು ಮೂಗಿನ ಮೂಲಕ ಹೊರಹಾಕಬೇಕು.

Advertisement

ಇವು ದೇಹ, ಮನಸ್ಸಿನ ನೆಮ್ಮದಿಯನ್ನು ಹೆಚ್ಚಿಸುತ್ತವೆ. ಬಾಯಾರಿಕೆ ನಿಯಂತ್ರಿಸುತ್ತವೆೆ. ರಕ್ತ ಶುದ್ಧಿಗೆ, ನಿದ್ರಾಹೀನತೆಗೆ ಫ‌ಲಕಾರಿ. ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗ ನಿವಾರಿಸುತ್ತವೆ. ಕಡಿಮೆ ರಕ್ತದೊತ್ತಡ,ಗಂಟಲು ಬೇನೆ ಇರುವವರು ಇವುಗಳನ್ನು ಮಾಡುವುದು ಸೂಕ್ತವಲ್ಲ. ಚಳಿಗಾಲದಲ್ಲಿ ಈ ಪ್ರಾಣಾಯಾಮಗಳ ಅಗತ್ಯವಿಲ್ಲ.

-   ಡಾ|ಶ್ರೀಕಾಂತ ಸಿದ್ದಾಪುರ

Advertisement

Udayavani is now on Telegram. Click here to join our channel and stay updated with the latest news.

Next