Advertisement
ಶ್ರೀಗಳ ಪರಿಕಲ್ಪನೆಯಲ್ಲಿ ನಾಡಿನ ಹಲವಾರು ಮಠಾಧೀಶರ ನೇತೃತ್ವ ದಲ್ಲಿ ಕಳೆದ ಮೂರು ದಿನಗಳಿಂದ ಇಲ್ಲಿ ನಡೆಯುತ್ತಿರುವ ಮಂಗಲ ಗೋಯಾತ್ರೆಯ ಮಹಾಮಂಗಲ ದಲ್ಲಿ ರವಿವಾರ ಅವರು ಆಶೀರ್ವಚನ ನೀಡಿದರು.ದೇಶಕ್ಕೆ ಅತ್ಯಪೂರ್ವ ನಾಯಕತ್ವ ವಿತ್ತಿರುವ ಮೋದಿ ಅವರ ಹೆಸರು ತನ್ಮೂಲಕ ಅಜರಾಮರವಾಗುತ್ತದೆ. ಗೋ ಸಾಕ್ಷರತೆಯ ಮೂಲಕ ದೇಶ ಸುಭಿಕ್ಷ ವಾಗುತ್ತದೆ. ಸಹಸ್ರಾರು ಮಠಾಧಿಪತಿಗಳು ಮತ್ತು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಇಲ್ಲೀಗ ನಡೆ ಯುತ್ತಿರುವ ಮಂಗಲ ಗೋ ಯಾತ್ರೆಯು ವಸ್ತುಶಃ ಗೋವುಗಳ ಪ್ರಾಣ ಭಿಕ್ಷೆಯನ್ನು ಬೇಡುತ್ತಿದೆ ಎಂದು ಭಾವುಕರಾಗಿ ನುಡಿದರು.
ಈ ಕಾರ್ಯಕ್ರಮ ಅಮೂಲ್ಯ ಗೋವುಗಳ ಸಹಸ್ರಾಧಿಕ ಸಂತರ, ಶತಸಹಸ್ರಾಧಿಕ ಗೋಭಕ್ತರ ಮಹಾ ತ್ರಿವೇಣಿ ಎಂಬ ಬೃಹತ್ ಸಭೆಯಾಗಿತ್ತು. ಹಿಂದೂಗಳ ಪಾಲಿಗೆ ಗಂಗಾ ಯಮುನಾ, ಗೋದಾವರಿಗಳ ತ್ರಿವೇಣಿ ಸಂಗಮವು ಪರಮ ಪವಿತ್ರ ವಾಗಿದೆ. ಅಂತೆಯೇ ಇಂದಿನ ಸಂತರು, ಸುರಭಿ, ಸಾಮಾಜಿಕ ಸಮಾಜದ ಸಂಗಮ ಕೂಡ ಅಷ್ಟೇ ಪವಿತ್ರವಾಗಿದೆ ಎಂದು ರಾಘವೇಶ್ವರ ಶ್ರೀಗಳು ವರ್ಣಿಸಿದರು.
Related Articles
Advertisement
ಮಂಗಲಪಾಂಡೆ ಪ್ರೇರಣೆಗೋವಿಗಾಗಿ ಆತ್ಮಾರ್ಪಣೆ ಮಾಡಿದ ಗೋಪ್ರೇಮಿ ಮಂಗಲಪಾಂಡೆಯ ಪ್ರೇರಣೆ ಈ ಮಂಗಲ ಗೋಯಾತ್ರೆಯ ವೈಶಿಷ್ಟ Â. ಈ ಅಭಿಯಾನ ಗೋ ಸಂರಕ್ಷಣೆಯ ಬಗ್ಗೆ ದೇಶಾದ್ಯಂತ ಜಾಗೃತಿಯನ್ನು ಮೂಡಿಸಿದೆ. ಬದುಕಿದರೆ ಗೋಮಾತೆಯಂತೆ ಪರೋಪಕಾರಿಯಾಗಿ ಬದುಕಬೇಕು. ರಾಜ್ಯ ಸರಕಾರ ಗೋಸಂರಕ್ಷಣೆಯ ಬಗ್ಗೆ ತತ್‌ಕ್ಷಣವೇ ಜಾಗೃತವಾಗಬೇಕು. ಕರ್ನಾಟಕದ ಬರಗೂರು ಗೋತಳಿ (ಸಭಾಂಗಣದ ಪಕ್ಕದಲ್ಲೇ ಇದ್ದ ಈ ತಳಿಯ ಗೋವು ಹಾಗೂ ಅದರ ಪುಟ್ಟ ಕರು ಭಾರೀ ಜನಾಕರ್ಷಣೆಗೆ ಪಾತ್ರವಾದವು) ಅಮೃತ್ ಮಹಲ್ ಮುಂತಾದ ತಳಿಗಳು ಜಗತ್ ಪ್ರಸಿದ್ಧಿಯಾಗಿವೆ. ಎಲ್ಲ ಗೋತಳಿಗಳ ಸಂರಕ್ಷಣೆಯ ಕಾರ್ಯವಾಗಬೇಕು. ಗೋಮಾಳಗಳ ರಕ್ಷಣೆಗೆ ಸರಕಾರ ಕ್ರಮ ಕೈಗೊಳ್ಳಬೇಕೆಂದು ರಾಘವೇಶ್ವರ ಶ್ರೀಗಳು ಹೇಳಿದರು. ಕಟುಕ ವೃತ್ತಿ ಬಿಟ್ಟುಬಿಡಿ
ಗೋವುಗಳನ್ನು ದಯವಿಟ್ಟು ಕೊಲ್ಲಬೇಡಿ ಎಂದು ಮನವಿ ಮಾಡಿದ ರಾಘವೇಶ್ವರ ಶ್ರೀಗಳು, ಗೋವುಗಳನ್ನು ಹತ್ಯೆ ಮಾಡುವವರು ಅದರ ರಕ್ತ – ಮಾಂಸದ ನಡುವೆ ಇರುತ್ತಾರೆ. ಅವರು ಚೀರಾಟ, ಆಕ್ರಂದನ ಕೇಳುತ್ತಾರೆ. ಹೊಟ್ಟೆ ಹೊರೆಯುವುದಕ್ಕಾಗಿ ಅಂತಹ ಕಟುಕ ವೃತ್ತಿ ಮಾಡುತ್ತಿದ್ದರೆ ದಯವಿಟ್ಟು ಅದನ್ನು ತೊರೆಯಿರಿ; ಅಂತಹವರಿಗೆ ಅಗತ್ಯವಿದ್ದರೆ ಗೌರವಯುತ ಪರ್ಯಾಯ ಉದ್ಯೋಗವನ್ನು ನಾವೇ ಕಲ್ಪಿಸುತ್ತೇವೆ ಎಂದು ಪ್ರಕಟಿಸಿದರು.
ಗೋವುಗಳನ್ನು ಮಾರಾಟ ಮಾಡಬೇಡಿ, ಸಾಕಲು ಅಸಾಧ್ಯವೆನಿಸಿದರೆ ಪಕ್ಕದ ಗೋ ಶಾಲೆಗೆ ಸೇರಿಸಿ. ಇಲ್ಲಿ ಸೇರಿದ ಜನರಲ್ಲಿ ಒಂದು ಲಕ್ಷ ಮಂದಿ ತಲಾ ಒಂದೊಂದು ಗೋವನ್ನು ಸಾಕಿ ಸಲಹಿದರೂ ನಾಡಿನಲ್ಲಿ ಸುಖ, ಶಾಂತಿ ನೆಮ್ಮದಿ ನೆಲೆಸುವುದು ಎಂದು ವ್ಯಾಖ್ಯಾನಿಸಿದರು. ಈ ಅಭಿಯಾನದ ಅಪೂರ್ವ ಯಶಸ್ಸಿಗೆ ಶ್ರಮಿಸಿದ ಸರ್ವರನ್ನು ಆಶೀರ್ವದಿಸುವುದಾಗಿ ಅವರು ಹೇಳಿದರು. ಅಭಿಯಾನ ನಿಲ್ಲದು
ಗೋಸಂರಕ್ಷಣೆಯ ಈ ಅಭಿಯಾನ ಯಾವ ಕಾರಣಕ್ಕೂ ನಿಲ್ಲದು. ವೈಯಕ್ತಿಕವಾಗಿ ನನ್ನ ಮೇಲೆ ಸುಳ್ಳು ಅಪವಾದ ಇತ್ಯಾದಿಗಳನ್ನು ಹೇರಿದವರಿದ್ದಾರೆ. ಆದರೆ ಇದ್ಯಾವುದೂ ಗೋ ರಕ್ಷಣೆಯ ಆಂದೋಲನಕ್ಕೆ ಅಡ್ಡಿಯಾಗುವುದಿಲ್ಲ ಎಂದು ಹೇಳಿದರು.