Advertisement

ಐಐಎಂನಲ್ಲಿ ಪ್ರಣಬ್‌ ಮುಖರ್ಜಿ ಪಾಠ

06:00 AM Sep 09, 2018 | |

ಅಹಮದಾಬಾದ್‌: ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಗುಜರಾತ್‌ನ ಅಹಮದಾಬಾದ್‌ ಐಐಎಂನಲ್ಲಿ ಮ್ಯಾನೇಜ್‌ಮೆಂಟ್‌ ವಿದ್ಯಾರ್ಥಿಗಳಿಗೆ ಪಾಠ ಮಾಡಲಿದ್ದು, ಇದಕ್ಕಾಗಿ ಹೊಸದೊಂದು ಕೋರ್ಸ್‌ ಸ್ಥಾಪಿಸಲಾಗಿದೆ. ಭಾರತದಲ್ಲಿ ಸಮಗ್ರ ಅಭಿವೃದ್ಧಿ ಹಾಗೂ ಸಂಸದೀಯ ಪ್ರಜಾಪ್ರಭುತ್ವ ವಿಚಾರಗಳನ್ನು ಒಳಗೊಂಡ ಪ್ರತ್ಯೇಕ ಕೋರ್ಸ್‌ ಒಂದನ್ನು ಅಭಿವೃದ್ಧಿಪಡಿಸಲಾಗಿದ್ದು, ಇದನ್ನು ಮ್ಯಾನೇಜ್‌ಮೆಂಟ್‌, ಆಹಾರ ಮತ್ತು ಕೃಷಿ ವಹಿವಾಟು ಹಾಗೂ ಎಕ್ಸಿಕ್ಯೂಟಿವ್‌ ಮ್ಯಾನೇಜ್‌ಮೆಂಟ್‌ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತದೆ. ಸುಮಾರು 12 ರಿಂದ 22 ಸೆಷನ್‌ಗಳಲ್ಲಿ ಪ್ರಣಬ್‌ ಬೋಧಿಸಲಿದ್ದಾರೆ ಎಂದು ಐಐಎಂ ಅಹಮದಾಬಾದ್‌ನ ಜೆಎಸ್‌ಡಬ್ಲೂ ಸ್ಕೂಲ್‌ ಆಫ್ ಪಬ್ಲಿಕ್‌ ಪಾಲಿಸಿ ಮುಖ್ಯಸ್ಥ ಪ್ರೊ. ವಿಜಯ ಶೆರ್ರಿ ಚಾಂದ್‌ ಹೇಳಿದ್ದಾರೆ. ಈ ಕೋರ್ಸ್‌ ಥಿಯರಿ ಮತ್ತು ಪ್ರಾಕ್ಟಿಕಲ್‌ ಪಠ್ಯಗಳನ್ನು ಒಳಗೊಂಡಿದ್ದು, ಈ ವಿಷಯದಲ್ಲಿ ಪ್ರಣಬ್‌ ಮುಖರ್ಜಿ ಹೊಂದಿರುವ ಅಪಾರ ಅನುಭವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next