ಪ್ರಮೋದ್ ಮಧ್ವರಾಜ್ ಅವರ ನೆನಪಾಗುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕರೆ ಮತ್ತು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.
Advertisement
ಪ್ರಮೋದ್ ಶಾಸಕರಾಗುವ ಮೊದಲೇ ಉಡುಪಿ ವಿಧಾನಸಭಾ ಕ್ಷೇತ್ರದ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರನ್ನು ಸ್ವಂತ ಖರ್ಚಿನಲ್ಲಿ ಟ್ಯಾಂಕರ್ ಮೂಲಕ ವ್ಯವಸ್ಥೆಗೊಳಿಸಿದ್ದರು. ಶಾಸಕರಾದ ಅನಂತರ ರಾಜ್ಯ ಸರಕಾರದ ಟಾಸ್ಕ್ ಫೋರ್ಸ್ ಮುಖಾಂತರ ಅನುದಾನ ವನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಿ ಟ್ಯಾಂಕರ್ ಮೂಲಕ ಸರಬರಾಜು ಪ್ರಾರಂಭಿಸಿದರು.
ಪ್ರಮೋದ್ ಶಾಸಕರಾಗಿದ್ದ 5 ವರ್ಷಗಳಲ್ಲಿ ಪ್ರತೀ ವರ್ಷ ಜನವರಿಯಲ್ಲಿ ನಗರಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಸಭೆ ಕರೆದು ಲಭ್ಯ ನೀರಿನ ಮಾಹಿತಿ ಪಡೆಯುತ್ತಿದ್ದರು. ಸರಕಾರಿ ಬಾವಿ, ಬೋರ್‌ವೆಲ್‌ಗಳನ್ನು ಸುಸ್ಥಿತಿಯಲ್ಲಿಡುವಂತೆ ಮಾರ್ಗದರ್ಶನ ನೀಡುತ್ತಿದ್ದರು. ಅವರ ಶಾಸಕತ್ವದ ಅವಧಿಯ 5 ವರ್ಷಗಳಲ್ಲಿ ಎಪ್ರಿಲ್, ಮೇ ತಿಂಗಳಲ್ಲಿ ಕುಡಿಯುವ ನೀರನ್ನು ಒದಗಿಸಲು ಸರ್ವ ಪ್ರಯತ್ನ ಮಾಡಲಾಗಿತ್ತು. 24 ಗಂಟೆ ಕುಡಿಯುವ ನೀರು
ನಗರಸಭೆಯ 35 ವಾರ್ಡ್‌ಗಳಲ್ಲಿ ದಿನದ 24 ಗಂಟೆ ಜನರಿಗೆ ಕುಡಿಯುವ ನೀರನ್ನು ಒದಗಿಸಲು ಟಾಸ್ಕ್ಫೋರ್ಸ್ ರಚಿಸಿ ಪ್ರತೀ ವಾರ್ಡಿಗೆ ಅಧಿಕಾರಿಯನ್ನು ಉಸ್ತುವಾರಿಯ ನ್ನಾಗಿ ನೇಮಿಸಲಾಗಿತ್ತು. ಎಪ್ರಿಲ್-ಮೇಯ ಲ್ಲಿ ಎತ್ತರ ಪ್ರದೇಶಗಳು, ನೀರಿನ ಅಭಾವ ಇರುವ ಲ್ಲಿಗೆ ಟ್ಯಾಂಕರ್ ಮೂಲಕ ದಿನ ಬಿಟ್ಟು ದಿನ ನೀರು ಸರಬರಾಜು ಮಾಡಲಾಗುತ್ತಿತ್ತು.
Related Articles
2017ರಲ್ಲಿ ಬಜೆ ಜಲಾಶಯ ಎ. 23ರಂದು ಬರಿದಾದಾಗ ಪ್ರಮೋದ್ ಸೂಚನೆಯಂತೆ ಹೊಂಡಗಳಲ್ಲಿ ಪಾದೆ ಒಡೆದು ನೀರು ಹರಿಯುವಂತೆ ಮಾಡಲಾಗಿತ್ತು. ಬೋಟ್‌ಗಳಲ್ಲಿ ಬೃಹತ್ ಪಂಪ್ ಅಳವಡಿಸಿ ಪಂಪಿಂಗ್ ಮಾಡಿ ನೀರನ್ನು ಭಂಡಾರಿಗುಂಡಿಯಿಂದ ಬೃಹತ್ ಕೊಳವೆ ಮುಖಾಂತರ ಬಜೆ ನೀರು ಶುದ್ಧೀಕರಣ ಘಟಕಕ್ಕೆ ಹಾಯಿಸಿ ಸರಬರಾಜು ಮಾಡಲಾಗಿತ್ತು.
Advertisement
2018ರ ಮಾರ್ಚ್‌ನಲ್ಲಿ ನಗರದ 35 ವಾರ್ಡ್‌ಗಳನ್ನು ಎರಡು ವಲಯಗಳನ್ನಾಗಿ ವಿಂಗಡಿಸಿ ಮೇ ತಿಂಗಳ 2ನೇ ವಾರದ ತನಕ ದಿನ ಬಿಟ್ಟು ದಿನ ನೀರು ಸರಬರಾಜು ಮಾಡಲಾಗಿತ್ತು.
ವಾರಾಹಿ ಯೋಜನೆಗೂ ಪ್ರಯತ್ನಿಸಿದ್ದರುಉಡುಪಿ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ವಾರಾಹಿ ಯೋಜನೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಪ್ರಮೋದ್ ಅವಿರತ ಶ್ರಮ ವಹಿಸಿದ್ದರು. ಕೇಂದ್ರದ ಅಮೃತ್ ಯೋಜನೆ, ಎಡಿಬಿ ನೆರವಿನಿಂದ ರಾಜ್ಯ ಸರಕಾರ ಮತ್ತು ಉಡುಪಿ ನಗರಸಭೆಯ ಪಾಲುದಾರಿಕೆಯಿಂದ ಕುಡ್ಸೆಂಪ್ ಮುಖಾಂತರ ಕಾಮಗಾರಿ ನಿರ್ವಹಿಸಲು 320 ಕೋಟಿ ರೂ. ಅನುದಾನ ತಂದಿದ್ದರು. ವಾರಾಹಿ ಕುಡಿಯುವ ನೀರಿನ ಯೋಜನೆಯ 3ನೇ ಹಂತದ ಕಾಮಗಾರಿಗಳ ಪ್ಯಾಕೇಜ್ ಟೆಂಡರ್ ಆಗಿತ್ತು. ಆದರೆ ಇತ್ತೀಚೆಗೆ ಪಂಪಿಂಗ್ ಸ್ಟೇಶನ್ ಭರತ್ಕಲ್‌ನಲ್ಲಿಯೇ ಮಾಡುವ ನಿರ್ಧಾರದಿಂದ ಒಂದನೇ ಹಂತದ ಟೆಂಡರನ್ನು ಪುನಃ ಕರೆಯಬೇಕಾಗಿದೆ. 2ನೇ ಹಂತದ ಪ್ಯಾಕೇಜ್ ಪೈಪ್‌ಲೈನ್ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಕಾಮಗಾರಿ ಪ್ರಾರಂಭ ಹಂತದಲ್ಲಿದೆ. ಮೂರನೇ ಹಂತದ ಪ್ಯಾಕೇಜ್ ಆಗಿರುವ ಉಡುಪಿ ನಗರದಲ್ಲಿ ಓವರ್ ಹೆಡ್ ಟ್ಯಾಂಕ್ ಟೆಂಡರ್ ಮುಗಿದು ನಿರ್ಮಾಣ ಹಂತದಲ್ಲಿದೆ ಎಂದು ಉಡುಪಿ ಕಾಂಗ್ರೆಸ್ ಪ್ರಕಟನೆ ಯಲ್ಲಿ ತಿಳಿಸಿದೆ.