ತೀರ್ಥಹಳ್ಳಿ: ದೇಶದ ಗಮನ ಸೆಳೆದ ಎರಡು ಭಯೋತ್ಪಾದಕ ಘಟನೆಗಳಾದ ಕುಕ್ಕರ್ ಬಾಂಬ್ ಮತ್ತು ರಾಮೇಶ್ವರಂ ಕೆಫೆ ಬ್ಲಾಸ್ಟ್ ಮಾಡಿದ ಶಾರಿಕ್ ಮತ್ತು ಮತಿನ್ ಮೂಲ ತೀರ್ಥಹಳ್ಳಿಯಾಗಿದೆ. ಅಷ್ಟೇ ಅಲ್ಲದೆ ನಂದಿತಾ ಅತ್ಯಾಚಾರ ಮತ್ತು ಕೊಲೆಯ ಹಿಂದೆ ಇದೆ ಭಯೋತ್ಪಾದಕರಿದ್ದಾರೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥರಾದ ಪ್ರಮೋದ್ ಮುತಾಲಿಕ್ ಹೇಳಿದರು.
ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ನಂದಿತಾ ಪ್ರಕರಣದಲ್ಲೂ ಇಸ್ಲಾಮಿಕ್ ಮಾನಸಿಕತೆ ಇರುವ ವ್ಯಕ್ತಿಗಳು ಇದ್ದಾರೆ.ಸರಿಯಾಗಿ ತನಿಖೆಯಾದರೆ ಎಲ್ಲವೂ ಹೊರಗಡೆ ಬರುತ್ತದೆ. 2011 ರಲ್ಲಿ ಮಂಜುನಾಥ್ ಎಂಬುವನ ಹತ್ಯೆಯಾದಾಗ ಯಾಸಿನ್ ಭಟ್ಕಳ್ ಬಗ್ಗೆ ಹೇಳಿದ್ದೆ ಆದರೆ ಏನು ಆಗಲಿಲ್ಲ. ಆದರೆ ಈಗ ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ ಇದಕ್ಕೆ ಬಹಳ ದೊಡ್ಡ ವ್ಯಕ್ತಿಗಳ ಕೈವಾಡ ಸಹ ಇದೆ ಎಂದರು.
ವಖ್ಫ್ ಬೋರ್ಡ್ ವಿಚಾರ ಮಾತನಾಡಿ ಇದು ದೊಡ್ಡ ಡೇಂಜರ್ ಕಾನೂನು ಇದಕ್ಕೆ ಪವರ್ ಕೊಟ್ಟಿದ್ದೆ ಕಾಂಗ್ರೆಸ್, ಜಿಲ್ಲಾಧಿಕಾರಿ, ತಹಸೀಲ್ದಾರ್ ಯಾರು ಸಹ ಪ್ರೆಶ್ನೆ ಮಾಡದ ರೀತಿ ಕಾನೂನು ಮಾಡಲಾಗಿದೆ.ಯಾವುದೇ ಇಸ್ಲಾಂ ರಾಷ್ಟ್ರದಲ್ಲೂ ಇಷ್ಟು ಪವರ್ ಕೊಟ್ಟಿಲ್ಲ. ವಖ್ಫ್ ಎಂದರೆ ಅಲ್ಲಾನಿಗೆ ಭೂಮಿ, ಕಟ್ಟಡ, ಹಣ ಇನ್ನೇನಾದರೂ ಕೊಟ್ಟು ದಾನ ಎಂದರ್ಥ, 9 ಲಕ್ಷದ 40 ಸಾವಿರ ಏನು ಯಾರು ಅಲ್ಲಾನಿಗೆ ದಾನ ಕೊಟ್ಟಿದ್ದಾರೆ, ದಾಖಲೆ ತೋರಿಸಿ, ಎಲ್ಲವೂ ಬುರುಡೆ ಮಾತುಗಳು, ಇದೆಲ್ಲವೂ ಕಾಂಗ್ರೆಸ್ ಪಕ್ಷದ ತುಷ್ಟಿಕರಣ ಎಂದು ವಾಗ್ದಾಳಿ ನಡೆಸಿದರು.
ಮುಸ್ಲಿಂ ಮತಕ್ಕೋಸ್ಕರ ಈ ರೀತಿ ಭಯಾನಕ ದೇಶಕ್ಕೆ ಗಂಡಾಂತರ ತರುವ ವಖ್ಫ್ ಬೋರ್ಡ್ ಕಾನೂನು ಆಗಿದೆ. ಈಗ ರೈತರ ಜಮೀನು ವಖ್ಫ್ ಆಸ್ತಿ ಎಂಬ ಕಾರಣದಿಂದ ಕರ್ನಾಟಕದಲ್ಲಿ ಬುಗಿಲು ಎದ್ದಿದೆ.ಹಾಗಾಗಿ ಮುಖ್ಯಮಂತ್ರಿಗಳು ವಾಪಾಸ್ ತೆಗೆದುಕೊಳ್ಳಲು ಹೇಳಿದ್ದಾರೆ. ಆದರೂ ಇಲ್ಲಿಯವರೆಗೆ ನೋಟೀಸ್ ಕಳುಹಿಸುತ್ತಿದ್ದಾರೆ. ಹಾಗಾದರೆ ಮುಖ್ಯಮಂತ್ರಿಗಳ ಆದೇಶಕ್ಕೆ ಕಿಮ್ಮತ್ತು ಇಲ್ಲವೇ? ಅಥವಾ ಆದೇಶ ಕಣ್ಣೋರೆಸುವ ತಂತ್ರವೇ? ಎಂದು ಪ್ರೆಶ್ನೆ ಮಾಡಿದರು.
ರಾಯಚೂರು ಸಿಂಧನೂರಿನ ಶಾಸಕರ 12 ಎಕರೆ ಜಮೀನು ವಖ್ಫ್ ಎಂದು ಹೇಳಿದೆ,ದಲಿತರನ್ನು ಬಿಟ್ಟಿಲ್ಲ, ದೇವಸ್ಥಾನ, ಗರಡಿ ಮನೆ, ಸರ್ಕಾರಿ ಜಮೀನು, ಸರ್ಕಾರಿ ಕಟ್ಟಡ ಸಹ ಬಿಟ್ಟಿಲ್ಲ, ಈ ರೀತಿ ವಿಚಿತ್ರವಾಗಿ ವಖ್ಫ್ ಬೋರ್ಡ್ ವೈರಸ್ ಹರಡುತ್ತಿದೆ.
ಕೇಂದ್ರ ಸರ್ಕಾರ ಈ ಬಗ್ಗೆ ಒಂದು ನಿಲುವು ತೆಗೆದುಕೊಂಡಿದೆ ಅದು ಯೋಗ್ಯವಾಗಿದೆ ಆದಷ್ಟು ಬೇಗ ಜಾರಿ ಮಾಡಿ ಈ ವೈರಸ್ ತಡಿಯಬೇಕು ಎಂದರು.
ಇದನ್ನೂ ಓದಿ: Delhi: ಒಂದು ತಿಂಗಳ ಅಂತರದಲ್ಲಿ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಎರಡನೇ ಸ್ಫೋಟ