Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ ಕಠಿನ ಕ್ರಮ ಕೈಗೊಳ್ಳುತ್ತೇವೆ ಎನ್ನುವ ಸಿದ್ಧ ಉತ್ತರ ಸಂಪೂರ್ಣ ವೈಫಲ್ಯದ ಪ್ರತೀಕ. ಪ್ರವೀಣ್ ಹತ್ಯೆ ಖಂಡಿ ಸಿ ಆಕ್ರೋಶ ವ್ಯಕ್ತಪಡಿಸಿದ ಜನರ ಮೇಲೆ ಲಾಠೀಚಾರ್ಜ್ ಮಾಡಿರುವುದು ಲಜ್ಜೆಗೇಡಿತನ. ಪ್ರವೀಣ ಹತ್ಯೆ ಖಂಡಿಸಿ ರಾಜೀನಾಮೆ ನೀಡುತ್ತಿರುವುದನ್ನು ಸ್ವಾಗತಿಸುತ್ತೇವೆ. ಪ್ರವೀಣ್ ಕುಟುಂಬಕ್ಕೆ ಸಾಂತ್ವನ ಹೇಳಲು ಜು.29ರಂದು ಅವರ ಮನಗೆ ತೆರಳುತ್ತೇವೆ. ಆ ಕುಟುಂಬದ ಒಬ್ಬರಿಗೆ ಸರಕಾರಿ ನೌಕರಿ ನೀಡಬೇಕು ಹಾಗೂ ಆತನ ಕನಸಿನಂತೆ ಮನೆ ಕಟ್ಟಿಕೊಡಬೇಕು ಎಂದು ಆಗ್ರಹಿಸಿದರು.
Related Articles
Advertisement
ತೇಜಸ್ವಿ ಸೂರ್ಯ ಹೇಳಿಕೆ ಖಂಡನೀಯವಾಗಿದ್ದು, ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು. ಪ್ರತಿಯೊಂದು ಮನೆಗೆ ರಕ್ಷಣೆ ಕೊಡಲು ಸಾಧ್ಯವಿಲ್ಲ ಎಂಬುದು ಬಾಲಿಶತನದಿಂದ ಕೂಡಿದೆ ಎಂದರು.
ಪರ್ಯಾಯ ರಾಜಕೀಯ ಶಕ್ತಿ:
ಹಿಂದೂಗಳ ರಕ್ಷಣೆಗಾಗಿ ಪರ್ಯಾಯವಾಗಿ ರಾಜಕೀಯ ಶಕ್ತಿ ಬೇಕಾಗಿದೆ. ಮುಂದಿನ ಚುನಾವಣೆಗೆ ಸ್ವಾಮೀಜಿಗಳ ನೇತೃತ್ವದಲ್ಲಿ ಈ ಬಗ್ಗೆ ಚಿಂತನೆ ನಡೆಯಲಿದೆ. ನಿಮ್ಮ ರಾಜಕಾರಣಕ್ಕೆ ಬಡವರ ಮಕ್ಕಳನ್ನು ಬಲಿ ಕೊಡುವುದನ್ನು ನಿಲ್ಲಿಸಿ. ಯುಪಿ ಮಾದರಿ ನಿಮ್ಮಿಂದ ಸಾಧ್ಯವಿಲ್ಲ. ನನಗೆ ಅಧಿಕಾರ ಕೊಟ್ಟರೆ ಜಿಹಾದಿಗಳ ಹುಟ್ಟಡಗಿಸುತ್ತೇನೆ. ರಾಜ್ಯದಲ್ಲಿ ಎರಡನೇ ಯೋಗಿಯಾಗಿ ಆಡಳಿತ ನಡೆಸುತ್ತೇವೆ. ಹಿಂದೂಗಳ ಕೊಲೆ ವಿಚಾರದಲ್ಲಿ ರಾಜ್ಯದ ಸ್ವಾಮೀಜಿಗಳು ಸುಮ್ಮನಿರಬಾರದು ಎಂದರು.
ಅಂಗರಕ್ಷಕರನ್ನು ಹಿಂಪಡೆದ ಸರ್ಕಾರವಿದು:
ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಮೋದ ಮುತಾಲಿಕ್ ಅವರಿಗೆ ನೀಡಿದ್ದ ಇಬ್ಬರು ಅಂಗರಕ್ಷಕರಲ್ಲಿ ಒಬ್ಬರನ್ನು ವಾಪಸ್ ಪಡೆದಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಠೇವಣಿ ಇರಿಸಿದ್ದ ಪಿಸ್ತೂಲ್ ನೀಡುತ್ತಿಲ್ಲ. ಈ ಕುರಿತು ಗೃಹ ಸಚಿವರು ಉಡಾಫೆ ಉತ್ತರ ನೀಡಿದ್ದಾರೆ. ಕಲಬುರಗಿ ಸಿದ್ಧಲಿಂಗಸ್ವಾಮಿ ಅವರ ಅಂಗರಕ್ಷಕ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಮುಖಂಡರಿಗೆ ನೀಡಿದ್ದ ಭದ್ರತೆಯನ್ನು ಕೂಡ ವಾಪಸ್ ಪಡೆದಿದ್ದಾರೆ. ಈ ಬೆಳವಣಿಗೆ ನೋಡಿದರೆ ಹಿಂದೂಗಳ ಹೆಣ ಬೀಳಲಿ, ಅವರ ಸಮಾಧಿ ಮೇಲೆ ರಾಜಕಾರಣ ಮಾಡುವ ಸ್ಪಷ್ಟ ಉದ್ದೇಶ ಬಿಜೆಪಿ ನಾಯಕರದ್ದಾಗಿದೆ ಎಂದು ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಅಸಮಾಧಾನ ವ್ಯಕ್ತಪಡಿಸಿದರು.