Advertisement

ಎಲ್ಲ ಪಕ್ಷಗಳಿಂದ ಹಿಜಾಬ್‌ ರಾಜಕೀಯ, RSS ಟೀಕಿಸುವ ನೈತಿಕತೆ ಸಿದ್ದರಾಮಯ್ಯಗಿಲ್ಲ : ಮುತಾಲಿಕ್‌

01:19 PM Feb 20, 2022 | Team Udayavani |

ಬಾಗಲಕೋಟೆ: ರಾಜ್ಯದಲ್ಲಿ ಹಿಜಾಬ್‌ ಕುರಿತು ವಿವಾದ ತೀವ್ರಗೊಳ್ಳಲು ರಾಜಕೀಯ ಪಕ್ಷಗಳೇ ಕಾರಣ. ಎಲ್ಲ ಪಕ್ಷಗಳೂ ಈ ವಿಷಯದಲ್ಲಿ ಬೇಳೆ ಬೇಯಿಸಿಕೊಳ್ಳುತ್ತಿವೆ ಎಂದು ಶ್ರೀರಾಮ ಸೇನೆ
ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಆರೋಪಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷ ಮಕ್ಕಳ ಶಿಕ್ಷಣಕ್ಕೆ ತೀವ್ರ ತೊಂದರೆಯಾಗಿತ್ತು. ದುರ್ದೈವದ ಸಂಗತಿ ಎಂದರೆ ಇದೀಗ, ಕೊರೊನಾ ಬಳಿಕ ತರಗತಿಗಳು ಆರಂಭಗೊಂಡಿವೆ. ಸುರಳಿತವಾಗಿ  ಶಾಲೆ-ಕಾಲೇಜು ನಡೆಯುತ್ತಿದ್ದವು. ಈ ಇಸ್ಲಾಮಿ ಶಕ್ತಿಗಗಳಾದ ಪಿಎಫ್‌ ಐ, ಸಿಎಫ್‌ಐ ಇವರಿಬ್ಬರೂ ವಿದ್ಯಾರ್ಜನೆ ಹಾಳು ಮಾಡಿದರು. ಇದು ಸರಿಯಲ್ಲ, ಈ ಬೆಳವಣಿಗೆ ನಡೆಯಬಾರದು. ಮುಸ್ಲಿಂ ವಿದ್ಯಾರ್ಥಿನಿಯರು ನಿಮ್ಮ ಹಿಂದೆ ಇರುವ ಇಸ್ಲಾಮಿಕ್‌ ಶಕ್ತಿಗೆ ಬೆಲೆ ಕೊಡದೇ ಶಿಕ್ಷಣಕ್ಕೆ ಮಹತ್ವ ಕೊಡಿ. ನಿಮಗೆ ಜಾಬ್‌ ಬೇಕಾದ್ರೆ ಹಿಜಾಬ್‌ ಕೇಳಲ್ಲ. ಜಾಬ್‌ಗ ವಿದ್ಯೆ ಬೇಕಿದೆ, ಹಿಜಾಬ್‌ ಅಲ್ಲ. ಇದನ್ನು ಗಂಭೀರವಾಗಿ ಚಿಂತಿಸಬೇಕು. ನಿಮಗೆ ಧರ್ಮ ಅಲ್ಲ, ಜೀವನ, ಉಪ ಜೀವನ ಮುಖ್ಯ ಎಂದರು. ಇಲ್ಲಿ ಉನ್ನತ ಶಿಕ್ಷಣ ಪಡೆದು ಮಹಿಳೆಯರು ಫೈಲಟ್‌, ಐಎಎಸ್‌, ಐಪಿಎಸ್‌ ಪಡೆದು ಮೇಲೆ ಬರುತ್ತಿದ್ದಾರೆ. ಆದರೆ, ನಿಮಗೆ ಹಿಂದೆ ಎಳೆಯುವ ಎಸ್‌ಡಿಪಿಐ, ಸಿಎಫ್‌ ಐ, ಪಿಎಫ್‌ ಐಗೆ ಬಲಿಯಾಗಬೇಡಿ. ಎಂದು ಹೇಳಿದರು.

ಕುಂಕುಮ, ಬಳೆ ಬಗ್ಗೆ ಮುಸ್ಲಿಂ ವಿದ್ಯಾರ್ಥಿನಿಯರು ಪ್ರಶ್ನೆ ಮಾಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಇಂದು ಕುಂಕುಮ, ಭಸ್ಮ, ಬಳೆ ಬಗ್ಗೆ ಮಾತಾಡುವ ದಾರ್ಷr$Â ಬೆಳೆದಿದೆ. ಕುಂಕುಮ, ಬಳೆ, ವಿಭೂತಿ ವೈಜ್ಞಾನಿಕವಾಗಿವೆ. ಇದು ಶೋಕಿಗಾಗಿ ಅಥವಾ ಫ್ಯಾಶನ್‌ಗಾಗಿ ಅಲ್ಲ.  ಅಹಂಕಾರವೂ ಅಲ್ಲ. ಇದರಲ್ಲಿ ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ ಇದೆ. ಪರಂಪರೆ ಇದೆ ಎಂದರು.

ಸಮವಸ್ತ್ರ ಅಂದರೆ ಬರಿ ಬಟ್ಟೆ. ಬಟ್ಟೆ ಬಗ್ಗೆ ಮಾತ್ರ ಮಾತಾಡಿ. ಗಣಪತಿ ಪೂಜೆ, ಸರಸ್ವತಿ ಪೂಜೆ, ಕುಂಕುಮ ಬಳೆ ಬಗ್ಗೆ ಮಾತಾಡಿದರೆ ನಾಲಿಗೆ ಸೀಳಿ ಹಾಕುತ್ತೇವೆ. ಹಿಜಾಬ್‌ ಹಿಂದೆ ಇಸ್ಲಾಮೀಕರಣ ಇದೆ. ಬರಿ ಹಿಜಾಬ್‌ ಅಷ್ಟೇ, ಅಲ್ಲ ಈಗ ನೇರವಾಗಿ ಬುರ್ಕಾ ಹಾಕಿಕೊಂಡು ಬರುತ್ತಾರೆ. ಮುಂದೆ ನಮಾಜ್‌ ಮಾಡೋಕೆ ಅವಕಾಶ ಬೇಕು ಅಂತಾರೆ. ಒಂದೊಂದಾಗಿ ಮುನ್ನುಗ್ಗುವ ಪ್ರವೃತ್ತಿ ಇಸ್ಲಾಮ್‌ ಇತಿಹಾಸ ಹೇಳುತ್ತದೆ ಎಂದು ಆರೋಪಿಸಿದರು. ಹಿಜಾಬ್‌ ವಿವಾದಕ್ಕೆ ಆರ್‌ಎಸ್‌ಎಸ್‌ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆ ಮಾಡಿದ್ದು, ಆರ್‌ಎಸ್‌ಎಸ್‌, ಹಿಂದೂ ಸಂಘಟನೆಗಳು ಈ ದೇಶದ ಸುರಕ್ಷತೆ ದೃಷ್ಟಿಯಿಂದ ವಿಚಾರ ಮಾಡುತ್ತೇವೆ. ದೇಶಭಕ್ತಿ ಬೆಳೆಸುತ್ತೇವೆ. ಹಿಜಾಬ್‌-ಕೇಸರಿ ಶಾಲು ವಿಚಾರವಾಗಿ ಕೋರ್ಟ್‌ನಿಂದ ಮಧ್ಯಂತರ ಆದೇಶ ಬಂತೋ, ಅಂದಿನಿಂದ ಇಂದಿನವರೆಗೂ ಒಬ್ಬ ವಿದ್ಯಾರ್ಥಿ ಕೇಸರಿ ಶಾಲು ಹಾಕಿಕೊಂಡು ಬಂದಿಲ್ಲ. ನಾವು ಕೋರ್ಟ್‌ ಆದೇಶ ಪಾಲಿಸುತ್ತೇವೆ.

ಸಿದ್ದರಾಮಯ್ಯನವರೆ 96 ವರ್ಷಗಳಿಂದ ಆರ್‌ಎಸ್‌ ಎಸ್‌ ಕೆಲಸ ಮಾಡುತ್ತದೆ. ಒಂದೇ ಒಂದು ಕಳಂಕ ಇಲ್ಲದೇ ದೇಶದ ಸುರಕ್ಷತೆ ಹಿನ್ನಲೆ ಕೆಲಸ ಮಾಡ್ತಿದೆ. ನೀವು ಬೇಕಾದರೆ ಬಿಜೆಪಿ ಬಗ್ಗೆ ಟೀಕೆ ಮಾಡಿ, ಆದರೆ, ಎಸ್‌ಎಸ್‌ಎಸ್‌ನಂತ ಶುದ್ಧ ಭಕ್ತಿ ಸಂಘಟನೆ ಬಗ್ಗೆ ತೆಗಳಲು ಸಿದ್ದರಾಮಯ್ಯ ಅವರಿಗೆ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಬಿಜೆಪಿಯೇ ಬೆಳೆಸುತ್ತಿದೆ ಕೆಲ ಸಂಘಟನೆ:
ರಾಜ್ಯದಲ್ಲಿ ಮುಸ್ಲಿಂ ಸಂಘಟನೆ ನಿಷೇಧ ಮಾಡಲು ಬಿಜೆಪಿ ಸರ್ಕಾರ ಮುಂದಾಗುತ್ತಿಲ್ಲ. ಈ ಬಗ್ಗೆ ನಮಗೆ ಬಹಳ ದುಃಖ ಆಗುತ್ತೆ, ನೋವಾಗುತ್ತದೆ. ಸಿಟ್ಟು ಬರುತ್ತದೆ. ಮುಸ್ಲಿಂ ಓಟ್‌ ಒಡೆಯುತ್ತಾರೆಂದು ಪಿಎಫ್‌ ಐ,ಸಿಎಫ್‌ ಎಮ್‌ ಐಎಮ್‌ ಅಂತ ರಾಕ್ಷಸರನ್ನು ಬಿಜೆಪಿಯವರೇ ಬೆಳೆಸುತ್ತಿದ್ದಾರೆ. ಈ  ಎಲ್ಲ ಸಂಘಟನೆಗಳನ್ನು ಸಾಕುತ್ತಿದ್ದಾರೆ. ಕಾಂಗ್ರೆಸ್‌ ಈ ಸಂಘಟನೆಗಳನ್ನು ನಿಷೇಧಿಸಿ ಎಂದು ಹೇಳುತ್ತಿದೆ. ಬಿಜೆಪಿಯವರೇ ನಿಮ್ಮ ಓಟ್‌ ಬ್ಯಾಂಕ್‌ ಗಾಗಿ ಟೆರರಿಸ್ಟ್‌ಗಳನ್ನು ಬೆಳೆಸಬೇಡಿ. ಮುಂದಿನ ದಿನಗಳಲ್ಲಿ ಈ ಎಲ್ಲ ಸಂಘಟನೆಗಳ ವಿರುದ್ದ ವಿವಿಧ ಹಿಂದೂಪರ
ಸಂಘಟನೆಗಳು ಸೇರಿ ಹೋರಾಟ ಮಾಡಲಿದ್ದೇವೆ ಎಂದು ಹೇಳಿದರು.

ಪಿಎಫ್‌ಐ ದೊಡ್ಡ ರಾಕ್ಷಸಿ ರೂಪವಾಗಿ ದೇಶಕ್ಕೆ ಕಂಟಕವಾಗುತ್ತದೆ. ಕಾಂಗ್ರೆಸ್‌ನವರೆಸಿಎಂಗೆ ಭೇಟಿಯಾಗಿ ಬ್ಯಾನ್‌ ಮಾಡಲು ಹೇಳಿದ್ದಾರೆ. ಇಂತಹ ಸಂಘಟನೆ ನಿಷೇಧ ಮಾಡಲು
ಬಿಜೆಪಿಯವರಿಗೆ ಎಷ್ಟು ದಾಖಲೆ ಬೇಕು ಎಂದು ಪ್ರಶ್ನಿಸಿದ ಅವರು, ಈ ಸಂಘಟನೆಗಳನ್ನು ನಿಷೇಧ ಮಾಡದಿದ್ದರೆ ಮುಂದೆ ಬಿಜೆಪಿಯನ್ನೇ ನುಂಗಿ ಹಾಕುತ್ತವೆ ಎಂದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next