Advertisement

ಮಲ್ಪೆ  ಮೀನುಗಾರಿಕೆ ಬಂದರಿನಲ್ಲಿ  ಪ್ರಮೋದ್‌ ಮತಯಾಚನೆ

06:00 AM May 09, 2018 | Team Udayavani |

ಮಲ್ಪೆ: ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಅವರು ಮಂಗಳವಾರ ನೂರಾರು ಕಾರ್ಯಕರ್ತರೊಂದಿಗೆ ಮುಂಜಾನೆ 6 ಗಂಟೆ ಯಿಂದ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಸಂಚರಿಸಿ ಬಿರುಸಿನ ಮತ ಪ್ರಚಾರ ನಡೆಸಿದರು.

Advertisement

ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಪ್ರಮೋದ್‌ ಅವರು, ಕಳೆದ 5 ವರ್ಷಗಳಲ್ಲಿ ಮೀನುಗಾರಿಕೆಯ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ನೀಡಲಾಗಿದೆ. ಮಲ್ಪೆಯಲ್ಲಿ ಮೀನುಗಾರಿಕಾ ಉಪನಿರ್ದೇಶಕರ ಕಚೇರಿ, ಬಂದರಿನಲ್ಲಿ ಸುಮಾರು 7.75 ಕೋ. ರೂ. ವೆಚ್ಚದಲ್ಲಿ ಡ್ರಜ್ಜಿಂಗ್‌ ಕಾಮಗಾರಿ, ಉಡುಪಿಯ ಹಳೆಮೀನು ಮಾರುಕಟ್ಟೆಯನ್ನು 2.30 ಕೋ. ರೂ. ಅನುದಾನದಲ್ಲಿ ನವೀಕರಿಸಿ ದೇಶದಲ್ಲೇ ಪ್ರಪ್ರಥಮ ಹೈಟೆಕ್‌ ಮೀನು ಮಾರುಕಟ್ಟೆ ನಿರ್ಮಾಣ, ಶಿಥಿಲಾವಸ್ಥೆಯಲ್ಲಿದ್ದ ವಿಶ್ರಾಂತಿ ಕೊಠಡಿ ಮತ್ತು ಶೌಚಾಲಯವನ್ನು ಸುಸಜ್ಜಿತವಾಗಿ ಅಭಿವೃದ್ಧಿ, ಬಂದರಿನಲ್ಲಿ ಹೈಮಾಸ್ಟ್‌ ದೀಪ ಅಳವಡಿಕೆ, ಮೀನು ಏಲಂ ಮಾಡುವ ನೆಲಕ್ಕೆ ಮಾರ್ಬಲ್‌ ಅಳವಡಿಸಿ ಶುಚಿತ್ವಕ್ಕೆ ಒತ್ತು, ಒಣಮೀನು ಒಣಗಿಸುವ ಪ್ರದೇಶದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಹೈಮಾಸ್ಟ್‌ ದೀಪ ಅಳವಡಿಸಿ ಮೀನು ಕಳ್ಳತನಕ್ಕೆ ಬೇಕ್‌ ನೀಡಲಾಗಿದೆ ಎಂದರು.

ಮೀನುಗಾರರ ನ್ಯಾಯ ಯುತವಾಗಿ ತಲುಪಬೇಕಾಗಿದ್ದ ಡೀಸೆಲ್‌ ಕಾಳಸಂತೆಯಲ್ಲಿ ಮಾರಾಟ ದಂಧೆಗೆ ಕಡಿವಾಣ ಹಾಕಿ ಡೀಸೆಲ್‌ ಸಬ್ಸಿಡಿಯನ್ನು 1,622 ದೋಣಿ ಮಾಲಕರ ಖಾತೆಗಳಿಗೆ 254 ಕೋಟಿ ರೂ. ಜಮೆ ಮಾಡಲಾಗಿದೆ ಎಂದರು. ಉಡುಪಿ ಕ್ಷೇತ್ರದ ಪ್ರಮುಖ ಸಣ್ಣ ಮೀನು ಮಾರುಕಟ್ಟೆ ಯನ್ನು ನವೀಕರಿಸಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣ, ಅಕ್ರಮ ಮೀನುಗಾರಿಕೆ ದೋಣಿಗಳನ್ನು ಸರಕಾರದ ಕಾನೂನಿನ ಅನ್ವಯ ಸಕ್ರಮಗೊಳಿಸುವ, ಹೊಸ ದೋಣಿ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದ ಮೀನುಗಾರರೆಲ್ಲರಿಗೂ ಸಾಧ್ಯತಾ ಪತ್ರ ನೀಡಲಾಗಿದೆ ಎಂದರು.

ವಸತಿ ರಹಿತ ಮೀನುಗಾರರಿಗೆ ಮತ್ಸಶ್ರಯ ಯೋಜನೆಯಡಿ ಮನೆ ನಿರ್ಮಿಸಲು 368 ಕುಟುಂಬಗಳಿಗೆ 3.19 ಕೋ. ರೂ. ಅನುದಾನ ಮಂಜೂರು, ಮೀನುಗಾರರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಶೇ. 2 ಬಡ್ಡಿ ದರದಲ್ಲಿ ಸಾಲ,  29,789 ಫಲಾನುಭವಿಗಳಿಗೆ ಸಾಲದ ಮೇಲಿನ ವ್ಯತ್ಯಾಸದ ಬಡ್ಡಿ ಮೊತ್ತ 16 ಕೋ. ರೂ. ಬಿಡುಗಡೆಗೊಳಿಸಲಾಗಿದೆ. ಸಮುದ್ರ ಮೀನುಗಾರಿಕೆ ನಡೆಸು ವಾಗ ಮೃತಪಟ್ಟ ಮೀನುಗಾರ ಕುಟುಂಬಗಳಿಗೆ  ಪರಿಹಾರದ ಮೊತ್ತವನ್ನು 1 ಲಕ್ಷ ರೂ. ನಿಂದ 6 ಲಕ್ಷ     ರೂ. ಗೆ ಏರಿಕೆ, ಗಿಲ್‌ನೆಟ್‌ ದೋಣಿ ಖರೀ ದಿಗೆ ಸಹಾಯಧನ, ಮೀನು ಹಿಡಿಯುವ ಮತ್ತು ರಕ್ಷಣಾ ಸಲಕರಣೆಗಳ ಕಿಟ್‌ಗಳನ್ನು ಮೀನುಗಾರಿಕೆ ಇಲಾಖಾ ವತಿಯಿಂದ ಉಚಿತವಾಗಿ ವಿತರಣೆ, ಟ್ರಾಲ್‌ಬೋಟ್‌ಗಳ ತಂಗುದಾಣಕ್ಕಾಗಿ ಬಾಪುತೋಟದ ಸಮೀಪ 2.40 ಕೋ. ರೂ. ವೆಚ್ಚದಲ್ಲಿ ಜೆಟ್ಟಿ  ನಿರ್ಮಾಣ ಮಾಡಲಾಗಿದೆ ಎಂದು ಅವರು ತಿಳಿಸಿದರು.

ತಡೆಗೋಡೆ ನಿರ್ಮಾಣ
ಸಮುದ್ರ ಕೊರೆತ ಪ್ರದೇಶವಾದ ಮಲ್ಪೆ ಪಡುಕರೆ, ಕೊಳ, ವಡಭಾಂಡೇಶ್ವರ, ಹೂಡೆ, ತೊಟ್ಟಂ, ಕುತ್ಪಾಡಿ ಪಡುಕರೆ, ಕಿದಿಯೂರು ಪಡುಕರೆಯಲ್ಲಿ 19.30 ಕೋ. ರೂ. ಅನುದಾನದಲ್ಲಿ ತಡೆಗೋಡೆ ಕಾಮಗಾರಿ, ಕೋಡಿಬೆಂಗ್ರೆ ಕಡಲತೀರದ ಸಂರಕ್ಷಣೆಗೆ  61 ಕೋ. ರೂ. ವೆಚ್ಚದ ಕಾಮಗಾರಿ ನಡೆಸಲಾಗಿದೆ. ಸುಮಾರು 4.88 ಕೋ. ರೂ. ವೆಚ್ಚದಲ್ಲಿ ಮೀನುಗಾರಿಕಾ ಕೊಂಡಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಪ್ರಮೋದ್‌ ಮಧ್ವರಾಜ್‌ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next