Advertisement

16ರಂದು ಪ್ರಮಥರ ಗಣಮೇಳ

03:51 PM Feb 10, 2020 | Suhan S |

ಕೋಲಾರ: ಶರಣತ್ವ ಎನ್ನುವುದು ಒಂದು ಜಾತಿಗೆ ಸೀಮಿತವಾಗದೇ ಎಲ್ಲಾ ಜಾತಿ ಗಳಿಗೂ ಅನ್ವಯವಾಗಬೇಕು ಎನ್ನುವ ಉದ್ದೇಶದಿಂದ ಪ್ರಮಥ ಗಣಮೇಳ ಹಾಗೂ ಸರ್ವಶರಣರ ಸಮ್ಮೇಳನವನ್ನು ಫೆ.16 ರಂದು ಹಮ್ಮಿಕೊಂಡಿದ್ದು, ಜಿಲ್ಲೆಯ ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ದಲಿತ ಸಂಘಟ ನೆಗಳ ಒಕ್ಕೂಟದ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಮನವಿ ಮಾಡಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಬಸವಣ್ಣ ಅಂದು ಆಯೋಜಿಸಿದ್ದ ಪ್ರಮಥರ ಗಣಮೇಳವನ್ನು 21ನೇ ಶತಮಾನದ ಇಂದಿನ ಬಸವಣ್ಣ ರೂಪವಾದ ಡಾ.ಶಿವ ಮೂರ್ತಿ ಮರುಘಾ ಶರಣರ ನೇತೃತ್ವ ದಲ್ಲಿ ಫೆ.16ಭಾನುವಾರ ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ನಂದಿ ಮೈದಾನದಲ್ಲಿ ನಡೆಯುವ ಸಮ್ಮೇಳನ‌ದಲ್ಲಿ ಜಿಲ್ಲೆಯ ಜನಸಾಮಾನ್ಯರು ಪಾಲ್ಗೊಂಡು ಬುದ್ಧ, ಬಸವ, ಅಂಬೇ ಡ್ಕರರ ಆಶಯಗಳನ್ನು ಎತ್ತಿಹಿಡಿಯ ಬೇಕೆಂದು ಕೋರಿದರು. ರಾಜ್ಯದಲ್ಲಿ ಜಾರಿಯಲ್ಲಿರುವ ಭೂಪರಭಾರೆ ನಿಷೇಧ ಕಾಯ್ದೆಯಲ್ಲಿನ ಲೋಪಗಳಿಂದ ದಲಿತ ಸಮುದಾಯ ದವರ ಜಮೀನನ್ನು ಕಳೆದುಕೊಳ್ಳುತ್ತಿದ್ದಾರೆ. ಪಿಟಿಸಿಎಲ್‌ ಕಾಯ್ದೆಗೆ ಸಮಗ್ರ ತಿದ್ದುಪಡಿ ತರಬೇಕೆಂದು ನಮ್ಮ ಒಕ್ಕೂಟವು ವಿಧಾನಮಂಡಲ ಅಧಿವೇಶನದಲ್ಲಿ ತಿದ್ದುಪಡಿಯ ಮಸೂದೆಯನ್ನು ಮಂಡಿಸಬೇಕೆಂದು ಈ ಹಿಂದೆ ಹೋರಾಟ ನಡೆಸಿ ಆಗ್ರಹಿಸಲಾಗಿತ್ತು ಎಂದು ಹೇಳಿದರು.

ದಲಿತ ಸಂಘಟನೆಗಳ ಒಕ್ಕೂಟವು ತಿದ್ದುಪಡಿ ಮಸೂದೆಯ ಕರಡನ್ನು ಸಿದ್ಧಗೊಳಿಸಿದ್ದು, ಇದೇ ತಿಂಗಳು 10ರಂದು ಮುಖ್ಯಮಂತ್ರಿ, ಕಂದಾಯ ಸಚಿವ ಹಾಗೂ ಸಮಾಜ ಕಲ್ಯಾಣ ಸಚಿವರಿಗೆ ಸಲ್ಲಿಸಲಾಗುವುದು. ಕರಡನ್ನು ಸರ್ಕಾರವು ಅಂಗೀಕರಿಸಿ, ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಬೇಕೆಂದು ಒತ್ತಾಯಿಸಿದರು.

ದಲಿತ ಸಿಂಹಸೇನೆ ರಾಜ್ಯಾಧ್ಯಕ್ಷ ಹೂಹಳ್ಳಿ ಪ್ರಕಾಶ್‌ ಮಾತನಾಡಿ, ಜಾತಿ, ವರ್ಗ ರಹಿತ ಸಮ ಸಮಾಜದ ಸಹಭಾಳ್ವೆ ಹಾಗೂ ಸಮಾನತೆಗಾಗಿ ಅಸಂಖ್ಯ ಪ್ರಮಥ ಗಣಮೇಳ ಹಾಗೂ ಸರ್ವ ಶರಣರ ಸಮ್ಮೇಳನ ಒಂದೇ ನಡೆ, ನಿಲು ವು ಗಳನ್ನು ಹೊಂದಿರುವ ಸಮಾಜಮುಖೀ ಯಾಗಿರುವ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಾವಿ ರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದು, 3ಲಕ್ಷಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆ ಇದೆ. ಈ ಸಮ್ಮೇಳನವು ಯಶಸ್ವಿಯಾಗಲು ಒಕ್ಕೂಟದ ದಲಿತ ಸಂಘಟನೆಗಳು ರಾಜ್ಯದೆಲ್ಲೆಡೆ ಪ್ರವಾಸ ಮಾಡಿ ಪ್ರಚಾರ ನಡೆಸಿ ಪ್ರತಿ ಜಿಲ್ಲೆಯಿಂದ 10ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವರು ಎಂದು ವಿವರಿಸಿದರು. ಆರ್‌ಪಿಐ ಯುವ ಘಟಕದ ರಾಜ್ಯಾಧ್ಯಕ್ಷ ಅಂಬರೀಶ್‌, ದಲಿತ ಸಿಂಹ ಸೇನೆ ಜಿಲ್ಲಾಧ್ಯಕ್ಷ ಮಾಸ್ತಿ ಬಾಬು, ಎಸ್‌ಎಸ್‌ಡಿ ಮತ್ತು ಆರ್‌ಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿಟ್ಟಿಬಾಬು, ಜಿಲ್ಲಾ ಗೌರವಾಧ್ಯಕ್ಷ ಸಯದ್‌ ಭಾಷಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next