Advertisement

Rain: ಹಲವು ವರ್ಷಗಳ ನಂತರ ಕೆರೆಗಳಿಗೆ ನೀರು; ರೈತರ ಮೊಗದಲ್ಲಿ ಮಂದಹಾಸ

02:18 PM May 20, 2024 | Team Udayavani |

ಕಾನಾಹೊಸಹಳ್ಳಿ (ವಿಜಯನಗರ): ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಹಳ್ಳಿ ಹೋಬಳಿಯಾದ್ಯಂತ ಭಾನುವಾರ ರಾತ್ರಿ ಭಾರಿ ಮಳೆಯಾಗಿದೆ.

Advertisement

ಜಿಲ್ಲೆಯ ಗಡಿಗ್ರಾಮ ಹಿರೇಕುಂಬಳಗುಂಟೆ ಹಾಗೂ ಹುಲಿಕೆರೆ, ಕಾನಾಹೊಸಹಳ್ಳಿ, ಪೂಜಾರಹಳ್ಳಿ, ಆಲೂರು, ಕಾನಾಮಡುಗು, ಲೋಕೀಕೆರೆ, ಇಮಡಾಪುರ, ಎಂ,ಬಿ, ಅಯ್ಯನಹಳ್ಳಿ, ಸೇರಿದಂತೆ ಇತರೆ ಹಳ್ಳಿಗಳಲ್ಲಿ ಭಾರಿ ಮಳೆಯಾಗಿದ್ದು, ಹುಲಿಕೆರೆ ಕೆರೆಯಲ್ಲಿ ಸ್ವಲ್ಪ ಮಟ್ಟಿನ ನೀರಾಗಿದೆ.

ಸೊನ್ನಮರಡಿ ವೀರಭದ್ರೇಶ್ವರ ದೇವಸ್ಥಾನದ ಸಮೀಪವಿರುವ ದೊಡ್ಡದಾದ ಡ್ಯಾಂ ತುಂಬಿ ಹರಿಯುತ್ತಿದ್ದು, ಕಾನಾಹೊಸಹಳ್ಳಿ ಕೆರೆಗೆ ಎರಡನೇ ಭಾರಿ ನೀರು ಹರಿದು ಬರುತ್ತಿದೆ.

ಲೋಕಿಕೆರೆ, ಪೂಜಾರಹಳ್ಳಿ, ಎಂ,ಬಿ, ಅಯ್ಯನಹಳ್ಳಿ ಕೆರೆಗಳಿಗೆ ನೀರು ಹರಿದು ಬರುತ್ತಿದ್ದು ಹಲವು ವರ್ಷಗಳ ನಂತರ ತಾಲೂಕಿನ ಕೆರೆಗಳಿಗೆ ನೀರು ಹರಿದು ಬರುತ್ತಿರುವುದರಿಂದ ಸುತ್ತಮುತ್ತಲಿನ ಬತ್ತಿ ಹೋಗಿದ್ದ ಕೊಳವೆ ಬಾವಿಗಳಿಗೆ ಮರು ಜೀವ ಬಂದತಾಗಿದೆ. ಇದರಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು ಅನ್ನದಾತ ಉಳುಮೆ ಮಾಡಲು ಸಿದ್ದತೆ ಮಾಡುತ್ತಿದ್ದಾನೆ.

ಮಳೆಯಿಂದಾಗಿ ಯಾವುದೇ ಅನಾಹುತ ಆದ ಬಗ್ಗೆ ಈವರೆಗೂ ವರದಿಯಾಗಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next