Advertisement

‘ಪ್ರಾಕೃತ ಭಾಷೆ ಸರಳ, ಸುಂದರ’

05:03 PM Dec 29, 2017 | Team Udayavani |

ಬೆಳ್ತಂಗಡಿ: ಭಾರತದ ಪ್ರಾಚೀನ ಪ್ರಾಕೃತ ಭಾಷೆಯು ಬಹು ಮಧುರ ಹಾಗೂ ಸರಳವಾದುದು. ಒಮ್ಮೆ ಅದನ್ನು ಕಲಿಯಲು ಆರಂಭಿಸಿದರೆ, ಅದು ಸುಲಭ ವಾಗಿ ಕರಗತವಾಗುತ್ತದೆ. ಆ ಮೂಲಕ ಸಮಗ್ರ ಪ್ರಾಕೃತ ಭಾಷಾ ಸಾಹಿತ್ಯವನ್ನು ಅಧ್ಯಯನ ಮಾಡಬಹುದು ಎಂದು ಉಜಿರೆಯ ಎಸ್‌ಡಿಎಂ ವಿದ್ಯಾ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯ ಸೋಮಶೇಖರ ಶೆಟ್ಟಿ ಹೇಳಿದರು. 

Advertisement

ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಕೃತ ಅಧ್ಯಯನ ಕೇಂದ್ರವು ಏರ್ಪಡಿಸಿದ್ದ ಎರಡು ದಿನಗಳ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಶ್ರವಣಬೆಳಗೊಳದ ಬಾಹುಬಲಿ ಪ್ರಾಕೃತ ವಿದ್ಯಾಪೀಠದಿಂದ ಡಾ| ಎಂ.ಪಿ. ರಾಜೇಂದ್ರ ಕುಮಾರ್‌, ಡಾ| ಪಿ. ಕುಸುಮಾ, ಡಾ| ರಾಜೇಂದ್ರ ಪಾಟೀಲ್‌ ಶಾಸ್ತ್ರಿ ಮತ್ತು ಡಾ| ಅಲೋಕ್‌ ಕುಮಾರ್‌ ಭಾಗವಹಿಸಿ ಪ್ರಾಕೃತ ಭಾಷೆ, ಅದರ ವ್ಯಾಕರಣ ಮತ್ತು ಸಾಹಿತ್ಯದ ಬಗ್ಗೆ ಪರಿಚಯ ನೀಡಿದರು.

ಪ್ರಾಕೃತ ಡಿಪ್ಲೊಮಾ ಅಧ್ಯಯನಕ್ಕೆ ಬೇಕಾದ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು. ಡಾ| ರಾಜೇಂದ್ರ ಪಾಟೀಲ್‌ ಶಾಸ್ತ್ರಿ ಮಾತನಾಡಿ ಈಗಾಗಲೇ ಬಾಹುಬಲಿ ಪ್ರಾಕೃತ ವಿಶ್ವವಿದ್ಯಾಲಯಕ್ಕೆ ಯು.ಜಿ.ಸಿ.ಯಿಂದ ಮಾನ್ಯತೆ ದೊರಕಿದೆ ಎಂದು ತಿಳಿಸಿದರು. ಕಾಲೇಜಿನ ಅಧ್ಯಯನ ಕೇಂದ್ರದ ಸಂಯೋಜಕ ಡಾ| ವೈ. ಉಮಾನಾಥ ಶೆಣೆ„ ಸ್ವಾಗತಿಸಿ, ಇತಿಹಾಸ ಪ್ರಾಧ್ಯಾಪಕ ಡಾ| ಪುಂಡರೀಕ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next