ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಂಘರ್ಷ ಹುಟ್ಟುಹಾಕಿ ಹಿಂಸೆಗೆ ಪ್ರಚೋದನೆ ನೀಡುತ್ತಾ ಬಂದಿರುವ ಬಿಜೆಪಿಯ ಜನ ಸುರಕ್ಷಾ ಯಾತ್ರೆ ಜನರನ್ನು ದಾರಿತಪ್ಪಿಸುವ ತಂತ್ರ ಎಂದು ಸಚಿವ ಬಿ.ರಮಾನಾಥ ರೈ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದ್ದಾರೆ.
ಜಿಲ್ಲೆಯಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಕೆಲಸಗಳನ್ನು ಮಾಡಿದವರು, ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ಶಾಂತಿ ಕದಡುತ್ತಿರುವವರು, ನಿಯೋಜಿತ ಕೊಲೆಗಳನ್ನು ನಡೆಸಿದವರು ಮತ್ತು ಅದನ್ನು ಸಮರ್ಥನೆ ಮಾಡಿಕೊಂಡು ಬಂದವರು ಯಾರು ಎಂಬುದು ಜನರಿಗೆ ತಿಳಿದಿದೆ. ಹಿಂಸೆಗೆ ಪ್ರಚೋದನೆ ನೀಡುತ್ತಾ ಬಂದಿರುವ ಬಿಜೆಪಿಗೆ ಜನಸುರಕ್ಷಾ ಮಾಡುವ ಅರ್ಹತೆ ಇಲ್ಲ ಎಂದರು.
ಜೈಲಿನಲ್ಲೇ ಇದ್ದುಕೊಂಡು ಕೊಲೆ ಸಂಚು ನಡೆಸಲಾಗುತ್ತಿದೆ. ಯಾರಧ್ದೋ ಪ್ರತೀಕಾರಕ್ಕಾಗಿ ಅಮಾಯಕರನ್ನು ಕೊಲೆ ಮಾಡುವ ಕೃತ್ಯ ಮಾಡಲಾಗಿದೆ ಮತ್ತು ಇದನ್ನು ಬಹಿರಂಗ ವೇದಿಕೆಗಳಲ್ಲಿ ಸಮರ್ಥನೆ ಮಾಡಲಾಗುತ್ತಿದೆ ಎಂದ ಅವರು, ಇದೀಗ ಬಿಜೆಪಿ ಕೈಗೊಂಡಿರುವ ಜನ ಸುರಕ್ಷಾ ಯಾತ್ರೆ ಕರಾವಳಿಯಲ್ಲಿ ಶಾಂತಿ, ಸಾಮರಸ್ಯವನ್ನು ಕದಡಲು ನಡೆಸುತ್ತಿರುವ ಹುನ್ನಾರವಾಗಿದೆ. ಯಾತ್ರೆ ಸಂದರ್ಭದಲ್ಲಿ ಸುಳ್ಯದಲ್ಲಿ ಪ್ರಚೋದನಕಾರಿ ಟ್ಯಾಬ್ಲೊ ಪ್ರದರ್ಶಿಸ ಲಾಗಿದೆ. ಸಂಸದ ಪ್ರತಾಪಸಿಂಹ ಹಾಗೂ ಸಚಿವ ಅನಂತ ಕುಮಾರ್ ಹೆಗಡೆ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ ಎಂದರು. ಜಿಲ್ಲೆಯಲ್ಲಿ ಶಾಂತಿಯ ವಾತಾವರಣವಿದ್ದು, ಯಾರೂ ಪ್ರಚೋದನೆಗೆ ಒಳಗಾಗದೆ ಇದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಮಾಡಿದರೆ ಕುದುರೆ ವ್ಯಾಪಾರ; ಬಿಜೆಪಿ ಮಾಡಿದರೆ ಚಾಣಕ್ಯತನ!
ಈಶಾನ್ಯ ರಾಜ್ಯಗಳ ಚುನಾ ವಣಾ ಫಲಿತಾಂಶದ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು ತ್ರಿಪುರ, ನಾಗಲ್ಯಾಂಡ್‌ನಲ್ಲಿ ಈ ಮೊದಲು ಕೂಡ ಕಾಂಗ್ರೆಸ್ ಅಧಿಕಾರದಲ್ಲಿರಲಿಲ್ಲ. ಮೇಘಾಲಯದಲ್ಲಿ ಎರಡು ಸ್ಥಾನ ಗಳನ್ನು ಗೆದ್ದಿರುವ ಬಿಜೆಪಿಯು ಸರಕಾರ ರಚಿಸಲು ಹೊರ ಟಿದೆ. ಒಂದು ವೇಳೆ ಇದನ್ನು ಕಾಂಗ್ರೆಸ್‌ನವರು ಮಾಡಿ ದ್ದರೆ ಕುದುರೆ ವ್ಯಾಪಾರ, ಪ್ರಜಾ ಪ್ರಭುತ್ವದ ಕಗ್ಗೊಲೆ ಎಂದು ಆರೋ ಪಿಸ ಲಾ ಗುತ್ತಿತ್ತು. ಈಗ ಬಿಜೆಪಿ ಯವರು ಮಾಡುತ್ತಿರುವುದನ್ನು ಅಮಿತ್‌ಶಾ ಚಾಣಕ್ಯತನ, ತಂತ್ರಗಾರಿಕೆ ಎಂದು ಹೇಳುತ್ತಾರೆ ಎಂದು ಟೀಕಿಸಿದರು.