ಶಿರಸಿ : ಬೈರುಂಬೆ ಗ್ರಾಮಪಂಚಾಯಿತಿ ಸದಸ್ಯ ಪ್ರಕಾಶ ಶ್ರೀಪತಿ ಹೆಗಡೆ ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದ ಮಂಗಳವಾರ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇವರು ತಾಲೂಕಿನ ಬೈರುಂಬೆ ಪಂಚಾಯಿತಿಗೆ ಮೂರುಬಾರಿ ಆಯ್ಕೆ ಯಾಗಿದ್ದು, ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಈ ಹಿಂದೆ ಆಯ್ಕೆ ಆದ ಒಬ್ಬ ವಿಧಾನ ಪರಿಷತ್ ಸದಸ್ಯರೂ ಕೂಡ ಗ್ರಾಮ ಪಂಚಾಯತ ಸದಸ್ಯರ ಕುಂದು ಕೊರತೆಗಳ ಬಗ್ಗೆ ಗಮನ ಹರಿಸಿಲ್ಲ. ಹೀಗಾಗಿ ಜಿಲ್ಲೆಯ ಎಲ್ಲಾ ಗ್ರಾಮಪಂಚಾಯತದ ಪರವಾಗಿ ಪ್ರತಿನಿಧಿಸಲು ಬಯಸಿದ್ದು, ಈಗಾಗಲೇ ಭೈರುಂಬೆ ಗ್ರಾಮ ಪಂಚಾಯತದಲ್ಲಿ ಸತತ ಮೂರು ಬಾರಿ ಆಯ್ಕೆಯಾಗಿ, ಒಂದು ಅವಧಿಗೆ ಅಧ್ಯಕ್ಷನಾಗಿ ಹಲವು ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವುದಾಗಿ ತಿಳಿಸಿದರು.
ಜಿಲ್ಲೆಯ ಮತ್ತು ತಾಲೂಕಿನ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಹಲವಾರು ಸಮಸ್ಯೆಗಳನ್ನು ಈಗಾಗಲೇ ಅರಿತುಕೊಂಡಿದ್ದೆನೆ.ಜಿಲ್ಲೆಯ ಹಲವಾರು ಸಮಸ್ಯೆಗಳು ಇ ಸ್ವತ್ತು, ವಸತಿ ಯೋಜನೆ, ಹಲವು ವಿಷಯಗಳ ಕುರಿತು ಸದನದಲ್ಲಿ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಪರವಾಗಿ ಧ್ವನಿ ಎತ್ತಬೇಕಿದೆ ಎಂದರು.
ಇದನ್ನೂ ಓದಿ : ಕ್ಲಬ್ , ರೆಸಾರ್ಟ್ ಮೇಲೆ ಪೊಲೀಸರ ದಾಳಿ : 113 ಜನರ ಬಂಧನ, 5.83 ಲಕ್ಷ ರೂ ಜಪ್ತಿ