Advertisement

ಹಿಂದುಳಿದವರಿಗೆ ಆರ್ಥಿಕ ನೆರವು ನೀಡಿ: ಪ್ರಕಾಶ್‌ ಶೆಟ್ಟಿ

10:07 AM Feb 25, 2020 | sudhir |

ಉಡುಪಿ: ಸಮುದಾಯದ ಹೆಸರಿನಲ್ಲಿ ದೊಡ್ಡ ದೊಡ್ಡ ಕಟ್ಟಡಗಳನ್ನು ನಿರ್ಮಿಸುವುದಕ್ಕಿಂತ ಹಿಂದುಳಿದವರಿಗೆ ಅಗತ್ಯವಿರುವ ನೆರವು ನೀಡಿ ಎಂದು ಎಂಆರ್‌ಜಿ ಗ್ರೂಪ್‌ ಅಧ್ಯಕ್ಷ ಕೆ. ಪ್ರಕಾಶ್‌ ಶೆಟ್ಟಿ ತಿಳಿಸಿದರು.

Advertisement

ಉಡುಪಿ ಬಂಟರ ಸಂಘದ 25ನೇ ವಾರ್ಷಿಕ ಅಧಿವೇಶನದ ಪ್ರಯುಕ್ತ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ರವಿವಾರ ನಡೆದ ಬಂಟ ಸಮಾಜ ಬಾಂಧವರ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಸಾಧಕರಿಗೆ ಅಭಿನಂದನೆ, ಪ್ರತಿಭಾ ಪುರಸ್ಕಾರ ಹಾಗೂ ವೈದ್ಯಕೀಯ ನೆರವು ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು, ಸಮ್ಮಾನ ಸ್ವೀಕರಿಸಿ ಮಾತನಾಡಿದರು.

ನನ್ನ ಹುಟ್ಟು ಹಬ್ಬದ ಅಂಗವಾಗಿ 1.50 ಕೋ.ರೂ. ವೆಚ್ಚದಲ್ಲಿ ನೂರಾರು ಮಂದಿಗೆ ವೈದ್ಯಕೀಯ ನೆರವು, ಶೈಕ್ಷಣಿಕ, ಆರ್ಥಿಕ ನೆವು ವಿತರಿಸಿದ್ದೇನೆ. ಇದು ಮುಂದುವರಿಯಲಿದೆ ಎಂದರು.

ಆಳ್ವಾಸ್‌ ಎಜುಕೇಶನ್‌ ಫೌಂಡೇಶನ್‌ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಮಾತನಾಡಿ, ಬಂಟ ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರನ್ನು ಗುರುತಿಸಿ ಅವರಿಗೆ ಸಹಾಯ ಮಾಡುವ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.

ಸಮ್ಮಾನ: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಂಟರ ಸಂಘದ ಗೌರವಾಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಕ್ರೀಡಾಪಟು ರೋಹಿತ್‌ ಶೆಟ್ಟಿ ಸಹಿತ ಗಣ್ಯರನ್ನು ಸಮ್ಮಾನಿಸಲಾಯಿತು.
ಕಂಬಳಕಟ್ಟ ಕೊಡವೂರು ಮಹಿಳಾ ವಿಭಾಗದ ಸದಸ್ಯರಿಂದ ಭಜನೆ, ಸತ್ಯನಾರಾಯಣ ಪೂಜೆ ನಡೆಯಿತು. ಮಧ್ಯಾಹ್ನ ನೃತ್ಯ ನಿಕೇತನ ಕೊಡವೂರು
ಕಲಾವಿದರು ನೃತ್ಯ ಸಿಂಚನ ಹಾಗೂ ತನುಶ್ರೀ ಪಿತ್ರೋಡಿ ಯೋಗಾಸನ ಪ್ರದರ್ಶಿಸಿದರು. ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಹಾಯ
ಧನ ಹಾಗೂ ಅಂಗವಿಕಲರಿಗೆ, ವೈದ್ಯಕೀಯ ಸಹಾಯಧನ ವಿತರಿಸಲಾಯಿತು.
ಉಡುಪಿ ಬಂಟರ ಸಂಘದ ಅಧ್ಯಕ್ಷ ಪುರುಷೋತ್ತಮ ಬಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್‌ ಗವರ್ನರ್‌ ವಿ.ಜಿ. ಶೆಟ್ಟಿ, ಜಾಗತಿಕ ಬಂಟರ ಸಂಘ
ಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ದುಬಾೖ ಫಾರ್ಚುನ್‌ ಗ್ರೂಪ್‌ ಆಫ್ ಹೊಟೇಲ್ಸ್‌ನ ಸಿಎಂಡಿ ವಕ್ವಾಡಿ ಪ್ರವೀಣ್‌ ಕುಮಾರ್‌ ಶೆಟ್ಟಿ, ಬಂಟ ಯಾನೆ ನಾಡವರ ಮಾತೃ ಸಂಘದ ಉಡುಪಿ ತಾ| ಸಮಿತಿ ಸಂಚಾಲಕ ಜಯರಾಜ್‌ ಹೆಗ್ಡೆ, ಮಹಿಳಾ ಸಂಘಟನೆ ಅಧ್ಯಕ್ಷೆ ಶ್ವೇತಾ ಜಯಕರ ಶೆಟ್ಟಿ, ಉದ್ಯಮಿಗಳಾದ ಮನೋಹರ್‌ ಶೆಟ್ಟಿ, ಸುರೇಶ್‌ ಶೆಟ್ಟಿ ಗುರ್ಮೆ, ಪುಣೆ ಬಂಟರ ಸಂಘದ ಪ್ರವೀಣ್‌ ಶೆಟ್ಟಿ, ಎರ್ಮಾಳು ಶಶಿಧರ್‌ ಶೆಟ್ಟಿ, ಹಾವಂಜೆ ಭಾಸ್ಕರ್‌ ಶೆಟ್ಟಿ, ವೀಣಾ ಶೆಟ್ಟಿ, ಶ್ರೀನಾಗೇಶ್‌ ಹೆಗ್ಡೆ, ಉಡುಪಿ ಸಂಘದ ಪ್ರ.ಕಾರ್ಯದರ್ಶಿ ಅಮಿತ್‌ ಕುಮಾರ್‌ ಶೆಟ್ಟಿ ಕೆ., ಖಜಾಂಚಿ ಮನೋಹರ ಶೆಟ್ಟಿ ತೋನ್ಸೆ ಉಪಸ್ಥಿತರಿದ್ದರು.
ಸತೀಶ್‌ ಶೆಟ್ಟಿ ಮತ್ತು ವಿಜೇತಾ ಶೆಟ್ಟಿ ಕಾರ್ಯ ಕ್ರಮ ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next