Advertisement
ಶನಿವಾರ ವಿಜಯಪುರ ಜಿಲ್ಲೆಯ ಶಾಸಕರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಕೋವಿಡ್ ಸಮಸ್ಯೆ ಕುರಿತು ನಡೆಸಿದ ವಿಡಿಯೋ ಸಂವಾದದಲ್ಲಿ ಈ ಬೇಡಿಕೆ ಮಂಡಿಸಿರುವ ಪ್ರಕಾಶ ರಾಠೋಡ, ಮಕ್ಕಳಿಗೂ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಕಂಡು ಬರುತ್ತಿದೆ. ವಿಜಯಪುರ ಜಿಲ್ಲೆಯ ಉತ್ತನಾಳ ತಾಂಡಾದಲ್ಲಿ 52 ಜನರಿಗೆ ಕೋವಿಡ್ ಸೋಂಕು ತಗುಲಿದ್ದು,15-20 ವಷ೯ದ 15 ಮಕ್ಕಳಲ್ಲಿ ಸೋಂಕು ದೃಢಪಟ್ಟಿದೆ. ಹೀಗಾಗಿ ಸರ್ಕಾರ ವಿಶೇಷ ಗಮನಕೊಡಬೇಕಿದೆ ಎಂದು ಅಗ್ರಹಿಸಿದರು.
Related Articles
Advertisement
ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರು ಪ್ರದೇಶಾಭಿವೃದ್ದಿ ಅನುದಾನವನ್ನು ಕಾಂಗ್ರೆಸ್ ಪಕ್ಷದ ಪರವಾಗಿ ಕೋವಿಡ್ ಕಾರ್ಯಕ್ಕೆ ಬಳಸಲು ಮನವಿ ಮಾಡಿದ್ದೇವೆ. ಆದರೆ ಸರ್ಕಾರ ಇತ್ತ ಗಮನ ಹರಿಸಿಲ್ಲ. ಇದೀಗ ಉಭಯ ಸದನಗಳ ಶಾಸಕರಿಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನೀಡುವ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಿ, ಅದನ್ನು ಉಪಯೋಗಿಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಕೋವಿಡ್ ಸೋಂಕಿನಿಂದ ಗುಣಮುಖರಾದವರಲ್ಲಿ ಕಾಣಿಸಿಕೊಳ್ಳುತ್ತಿರುವ ಬ್ಲ್ಯಾಕ್ ಫಂಗಸ್ ಸಂಕ್ರಾಮಿಕ ರೋಗ ಕನಾ೯ಟಕದಲ್ಲಿ ವ್ಯಾಪಕವಾಗಿದ್ದು, ವಿಜಯಪುರ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ಸದರಿ ರೋಗಿಗಳಿಗೆ ತುರ್ತು ಅಗತ್ಯವಾದ ಎಂಪೋತೆರಿಸಿನ್ ಇಂಜೆಕ್ಷನ್ ಬಹಳ ಕೊರತೆ ಇದೆ. ಆದರೆ ಇದರ ಬದಲಾಗಿ ಪೊಸಕೋನಾಜೋಲ್ ಅಥವಾ ಇಸವುಕೋವಾಜೋಲ್ ಇಂಜೆಕ್ಷನ್ ನೀಡಲು ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಶಾಸಕ ಪ್ರಕಾಶ ರಾಠೋಡ ಮನವಿ ಮಾಡಿದರು