Advertisement

ಸಚಿವ ಪ್ರಕಾಶ್‌ ಜಾವಡೇಕರ್‌ಗೆ ಮಾತೃ ವಿಯೋಗ

12:09 PM Oct 24, 2017 | Team Udayavani |

ಹೊಸದಿಲ್ಲಿ : ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಅವರ ತಾಯಿ ರಜನಿ ಜಾವಡೇಕರ್‌ ಅವರು ಹೃತ್‌ ಕ್ರಿಯೆ ನಿಂತು ನಿಧನ ಹೊಂದಿದ್ದಾರೆ ಎಂದು ಸಚಿವರ ನಿಕಟವರ್ತಿ ತಿಳಿಸಿದ್ದಾರೆ.

Advertisement

92ರ ಹರೆಯದ ರಜನಿ ಜಾವಡೇಕರ್‌ ಅವರು ಇಂದು ಬೆಳಗ್ಗೆ 9 ಗಂಟೆಗೆ ಇಲ್ಲಿನ ಆರ್‌ಎಂಎಲ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇವರು ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next