ನವದೆಹಲಿ: ಸಿನಿಮಾ ಹಾಗೂ ಟಿ.ವಿ. ಕಾರ್ಯಕ್ರಮಗಳ ಚಿತ್ರೀಕರಣಕ್ಕಾಗಿ ಪ್ರಮಾಣಿಕೃತ ನಿರ್ವಹಣಾ ಕಾರ್ಯವಿಧಾನ ಮಾರ್ಗಸೂಚಿಯನ್ನು (ಎಸ್ಒಪಿ) ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಬಿಡುಗಡೆ ಮಾಡಿದ್ದಾರೆ.
ಇದರ ಪ್ರಕಾರ ದೇಶಾದ್ಯಂತ ಸಿನಿಮಾ ಹಾಗೂ ಟಿ.ವಿ ಚಿತ್ರಿಕರಣಗಳನ್ನು ಪುನರಾರಂಭಿಸಲು ಅನುಮತಿ ನೀಡಲಾಗಿದೆ. ಆರೋಗ್ಯ ಇಲಾಖೆ ಹಾಗೂ ಗೃಹ ಸಚಿವಾಲಯದೊಂದಿಗಿನ ಚರ್ಚೆ ಬಳಿಕ ಈ ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಲಾಗಿದ್ದು ಅಗತ್ಯ ಆರೋಗ್ಯ ಸುರಕ್ಷತಾ ಕ್ರಮಗಳೊಂದಿಗೆ ಸಿನಿಮಾ ಹಾಗೂ ಟಿ.ವಿ. ಕಾರ್ಯಕ್ರಮಗಳ ಚಿತ್ರೀಕರಣವನ್ನು ಆರಂಭಿಸಬಹುದು ಎಂದು ಜಾವಡೇಕರ್ ತಿಳಿಸಿದ್ದಾರೆ.
ಕಳೆದ 6 ತಿಂಗಳಿನಿಂದ ಸಿನಿಮಾ ಸೇರಿದಂತೆ ಟಿ.ವಿ ಕಾರ್ಯಕ್ರಮಗಳ ಚಿತ್ರಿಕರಣ ಸ್ಥಗಿತವಾಗಿತ್ತು. ಅದಾಗ್ಯೂ ಕೆಲವೊಂದು ರಾಜ್ಯಗಳಲ್ಲಿ ಕಳೆದೊಂದು ತಿಂಗಳಿನಿಂದ ಪ್ರಾಥಮಿಕ ಅನುಮತಿ ನೀಡಲಾಗಿತ್ತು. ಆದರೇ ಇಂದಿನಿಂದ ದೇಶಾದ್ಯಂತ ಚಿತ್ರಿಕರಣಕ್ಕೆ ಇರುವ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಈ ನಿರ್ಧಾರವನ್ನು ಚಿತ್ರಮಂಡಳಿ ಸ್ವಾಗತಿಸಿದ್ದು, ಆರ್ಥಿಕ ಚೇತರಿಕೆಯಲ್ಲೂ ಈ ನಿರ್ಧಾರ ಪ್ರಮುಖವಾಗಲಿದೆ ಎಂದಿದ್ದಾರೆ.
ಕಳೆದ 5-6 ತಿಂಗಳಿನಿಂದ ಚಿತ್ರರಂಗದ ಹಲವರು ನಿರುದ್ಯೋಗಿಗಳಾಗಿದ್ದರು. ಈ ಎಲ್ಲಾ ಕಾರಣಗಳಿಂದ ಸಿನಿಮಾ ಪ್ರೊಡಕ್ಷನ್ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಮಾರ್ಗಸೂಚಿ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಖಾಸಗಿ ಸ್ಥಳಗಳಲ್ಲಿ ಚಿತ್ರಿಕರಣ ನಡೆಸುವಾಗ ಫೇಸ್ ಮಾಸ್ಕ್ ಕಡ್ಡಾಯವಾಗಿರುತ್ತದೆ(ಕ್ಯಾಮಾರ ಎದುರಿಸುವ ಕಲಾವಿದರು ಹೊರತುಪಡಿಸಿ). ಆರೋಗ್ಯ ಸೇತು ಆ್ಯಪ್ ಅಳವಡಿಸಿಕೊಳ್ಳುವಂತೆ ಸಲಹೆ, ಪ್ರತಿದಿನ ಥರ್ಮಲ್ ಸ್ಕ್ರೀನಿಂಗ್ ನಡೆಸಬೇಕು. ಅಂತರ ಕಾಯ್ದುಕೊಳ್ಳಬೇಕು, ಶಂಕಿತ ಕೋವಿಡ್ ಕಾಣಿಸಿಕೊಂಡರೇ ಐಶೋಲೇಶನ್ ನಲ್ಲಿರಬೇಕು.
ಚಿತ್ರಿಕರಣ ಸೆಟ್ ಗಳಿಗೆ ಯಾವುದೇ ಸಾರ್ವಜನಿಕರಿಗೆ ಪ್ರವೇಶ ನೀಡಬಾರದು, ಮೇಕಪ್ ರೂಂ, ಚಿತ್ರಿಕರಣ ಸ್ಥಳ, ಶೌಚಾಲಯ ಸೇರಿದಂತೆ ಇತರ ಪ್ರದೇಶಗಳನ್ನು ಸ್ಯಾನಿಟೈಸ್ ಮಾಡುವುದು ಕಡ್ಡಾಯ ಸೇರಿದಂತೆ ಹಲವು ಮಾರ್ಗಸೂಚಿಗಳನ್ನು ನೀಡಲಾಗಿದೆ.