Advertisement

ವಂದೇ ಮಾತರಂ ಹಾಡಲ್ಲ: ಪ್ರಕಾಶ್‌ ಅಂಬೇಡ್ಕರ್‌

03:54 PM Oct 24, 2018 | |

ಮುಂಬಯಿ: “ವಂದೇ ಮಾತರಂ’ ಹಾಡುವುದಿಲ್ಲ ಎಂದು ಪಟ್ಟು ಹಿಡಿದಿರುವ ಅಖೀಲ ಭಾರತ ಮಜಲಿಸ್ -ಇ- ಇತ್ತೆಹಾದುಲ್‌ ಮುಸ್ಲಿಮೀನ್‌(ಎಐಎಂಐಎಂ)ನ ಬೆಂಬಲಕ್ಕೆ ನಿಲ್ಲುವ ಮೂಲಕ ಭಾರಿಪ್‌ ಬಹುಜನ್‌ ಮಹಾಸಂಘ (ಬಿಬಿಎಂ) ಅಧ್ಯಕ್ಷ ಪ್ರಕಾಶ್‌ ಅಂಬೇಡ್ಕರ್‌ ಹೊಸ ವಿವಾದ ಸೃಷ್ಟಿಸಿದ್ದಾರೆ.

Advertisement

ಪರ್ಭಾನಿಯ ರ್ಯಾಲಿಯಲ್ಲಿ ಮಂಗಳವಾರ ಮಾತನಾಡಿದ ಪ್ರಕಾಶ್‌ ಅಂಬೇಡ್ಕರ್‌, ವಂದೇ ಮಾತರಂ ಅನ್ನು ಹಾಡ ಲೇಬೇಕೆಂದು ಯಾರೂ ಒತ್ತಾಯಿಸುವಂತಿಲ್ಲ. ನಾನೂ ಅದನ್ನು ಹಾಡುವುದಿಲ್ಲ ಎಂದಿದ್ದಾರೆ. “ಜನ ಗಣ ಮನ ಮಾತ್ರವೇ ದೇಶದ ರಾಷ್ಟ್ರಗೀತೆಯೇ ಹೊರತು ವಂದೇ ಮಾತರಂ ಅಲ್ಲ. ಅಧಿಕೃತ ರಾಷ್ಟ್ರಗೀತೆ ಇರುವಾಗ ಮತ್ತೂಂದರ ಅಗತ್ಯವಿಲ್ಲ.

ವಂದೇ ಮಾತರಂ ಅನ್ನು ಕಡ್ಡಾಯವಾಗಿ ಹಾಡಬೇಕೆಂದು ಬಿಜೆಪಿ ಒತ್ತಾಯಿಸುತ್ತಿರುವುದೇಕೆ? ಬಿಜೆಪಿಗೆ ಈಗಿರುವ ರಾಷ್ಟ್ರಗೀತೆ ಬಗ್ಗೆ ನಂಬಿಕೆಯಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ. ಜತೆಗೆ, ಯಾರು ಜನ ಗಣ ಮನ ಹಾಡುತ್ತಾರೋ ಅವರು ಭಾರತೀಯರು, ಯಾರು ಹಾಡುವುದಿಲ್ಲವೋ ಅವರು ಭಾರತೀಯರಲ್ಲ ಎಂದು ವರ್ಗೀಕರಣ ಮಾಡಲು ಬಿಜೆಪಿಯವರು ಯಾರು ಎಂದೂ ಕೇಳಿದ್ದಾರೆ ಪ್ರಕಾಶ್‌ ಅಂಬೇಡ್ಕರ್‌.

Advertisement

Udayavani is now on Telegram. Click here to join our channel and stay updated with the latest news.

Next