Advertisement

ಮುಂದಿನ ರಾಷ್ಟ್ರಪತಿ ಯಾರು? ವಿಪಕ್ಷಗಳ ಆಯ್ಕೆ ಡಾ.ಪ್ರಕಾಶ್ ಅಂಬೇಡ್ಕರ್

12:58 PM Jun 20, 2017 | Sharanya Alva |

ನವದೆಹಲಿ: ಹಾಲಿ ಸಾಲಿನ ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಬಿಹಾರದ ರಾಜ್ಯಪಾಲ, ದಲಿತ ನಾಯಕ ರಾಮನಾಥ್ ಕೋವಿಂದ್ ಅವರನ್ನು ಆಯ್ಕೆ ಮಾಡುವ ಮೂಲಕ ಮಾಸ್ಟರ್ ಸ್ಟ್ರೋಕ್ ನೀಡಿದೆ. ಮತ್ತೊಂದೆಡೆ ಪ್ರತಿಪಕ್ಷಗಳು ಕೂಡಾ ದಲಿತ ಕಾರ್ಡ್ ಅನ್ನು ಉಪಯೋಗಿಸಲು ಹೊರಟಿದ್ದು ಆ ನಿಟ್ಟಿನಲ್ಲಿ ಮಾಜಿ ಸ್ಪೀಕರ್ ಮೀರಾ ಕುಮಾರ್, ಬಿಆರ್ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಹಾಗೂ ಕನ್ನಡಿಗ ಮ್ಯಾಗ್ಸಸೆ ಪ್ರಶಸ್ತಿ ಪುರಸ್ಕೃತ ಬೇಜವಾಡ ವಿಲ್ಸನ್ ಅವರ ರಾಷ್ಟ್ರಪತಿ ಹುದ್ದೆಗೆ ಇವರಲ್ಲಿ ಯಾರಾದರು ಒಬ್ಬರನ್ನು ಅಭ್ಯರ್ಥಿಯನ್ನಾಗಿ ಘೋಷಿಸುವ ಚಿಂತನೆಯಲ್ಲಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

ರಾಷ್ಟ್ರಪತಿ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ವಿಪಕ್ಷಗಳು ಜೂನ್ 22ರಂದು ಸಭೆಯನ್ನು ಕರೆದಿದ್ದು, ಅಭ್ಯರ್ಥಿ ಯಾರು ಎಂಬುದರ ಬಗ್ಗೆ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ವರದಿ ವಿವರಿಸಿದೆ
.
ನಿರೀಕ್ಷೆಗೂ ಮೀರಿದಂತೆ ಬಿಹಾರ ರಾಜ್ಯಪಾಲ ರಾಮನಾಥ್‌ ಕೋವಿಂದ್‌ ಅವರನ್ನು ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ಎಂದು ಸೋಮವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಘೋಷಿಸಿದ್ದರು. ದಲಿತ ನಾಯಕರೊಬ್ಬರನ್ನು ದೇಶದ ಉನ್ನತ ಹುದ್ದೆಯ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಮೂಲಕ ಆಡಳಿತಾರೂಢ ಬಿಜೆಪಿ, “ಒಮ್ಮತದ ವ್ಯೂಹ’ ರಚಿಸಿ ಆಡಳಿತ ಪಕ್ಷಕ್ಕೆ ಬಿಸಿ ಮುಟ್ಟಿಸಲು ಯತ್ನಿಸಿದ್ದ ವಿಪಕ್ಷಗಳನ್ನೇ ದುರ್ಬಲಗೊಳಿಸಿತ್ತು.

ಕೋವಿಂದ್ ಆಯ್ಕೆ ನನಗೆ ವೈಯಕ್ತಿಕವಾಗಿ ತುಂಬಾ ಸಂತೋಷವಾಗಿದೆ. ಆದರೆ ಬೆಂಬಲ ನೀಡುವ ಬಗ್ಗೆ ಈಗಾಗಲೇ ಏನೂ ಹೇಳಲಾರೆ ಎಂದು ನಿತೀಶ್ ಕುಮಾರ್ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿದ್ದರು. 

ಒಂದು ವೇಳೆ ಪ್ರತಿಪಕ್ಷಗಳಿಂದ ಪ್ರಕಾಶ್ ಅಂಬೇಡ್ಕರ್ ಹೆಸರನ್ನು ಘೋಷಿಸಿದರೆ, ನಿತೀಶ್ ಕುಮಾರ್ ಮತ್ತು ಪಟ್ನಾಯಕ್ ತಮ್ಮ ಅಭ್ಯರ್ಥಿ ಪರವಾಗಿ ಮತ ಚಲಾಯಿಸಬಹುದು ಎಂಬ ಲೆಕ್ಕಾಚಾರ. ಶಿವಸೇನೆ ಕೂಡಾ ತಮ್ಮತ್ತ ಒಲವು ತೋರಬಹುದು ಎಂದು ಅಂದಾಜಿಸಿದೆ. ಪ್ರತಿಭಾ ಪಾಟೀಲ್ ಅವರನ್ನು ಯುಪಿಎ ತಮ್ಮ ಅಭ್ಯರ್ಥಿಯನ್ನಾಗಿ ಘೋಷಿಸಿದ್ದ ಸಂದರ್ಭದಲ್ಲಿ ಶವಸೇನೆ ಪ್ರತಿಭಾ ಪಾಟೀಲ್ ಪರವಾಗಿ ಮತ ಚಲಾಯಿಸಿತ್ತು. 

ಪ್ರಕಾಶ್ ಅಂಬೇಡ್ಕರ್ ಯಾರು?
ಸಂವಿಧಾನ ಶಿಲ್ಪಿ ಬಿಆರ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್, 1954 ಮೇ 10ರಂದು ಜನಿಸಿದ್ದರು. ಇವರು ಭಾರಿಪಾ ಬಹುಜನ್ ಮಹಾಸಂಘ ಎಂಬ ಸ್ಥಳೀಯ ರಾಜಕೀಯ ಪಕ್ಷದ ಮುಖಂಡರಾಗಿದ್ದಾರೆ. ಮಹಾರಾಷ್ಟ್ರದ ಅಕೋಲಾ ಕ್ಷೇತ್ರದಿಂದ 2 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ರಾಜ್ಯಸಭಾ ಸದಸ್ಯರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಇವರ ಕಿರಿಯ ಸಹೋದರ ಆನಂದರಾಜ್ ಅಂಬೇಡ್ಕರ್ ಕೂಡಾ ರಾಜಕಾರಣಿಯಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next