Advertisement
ಹಾಸನ ಲೋಕಸಭಾ ಕ್ಷೇತ್ರದದಲ್ಲಿ ಬಿಜೆಪಿಯಿಂದ ಎ.ಮಂಜು ಹಾಗೂ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಅವರು ಸ್ಪರ್ಧಿಸಿದ್ದಾರೆ. ಇಬ್ಬರೂ ಅಭ್ಯರ್ಥಿಗಳು ತಮ್ಮದೇ ಆದ ತತ್ವ ಸಿದ್ಧಾಂತವ ನ್ನಿಟ್ಟುಕೊಂಡು ಪ್ರಚಾರ ನಡೆಸುತ್ತಿದ್ದಾರೆ. ತಮ್ಮ ಸ್ಪರ್ಧೆ ಹಾಗೂ ಮೂಂದಿನ ಯೋಜನೆಗಳ ಬಗ್ಗೆ ಉದಯವಾಣಿಯೊಂದಿಗೆ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿದ್ದಾರೆ*ಪ್ರಶ್ನೆ: ಕುಟುಂಬ ರಾಜಕಾರಣ, ನಿಮ್ಮ ಎದುರಾಳಿಗಳಿಗೆ ಅಸ್ತ್ರವಾಗಿದೆಯಲ್ಲಾ?
* ಪ್ರಜ್ವಲ್: ಕುಟುಂಬ ರಾಜಕಾರಣ ದೇವೇಗೌಡರ ಕುಟುಂಬಕ್ಕಷ್ಟೇ ಸೀಮಿತವಾಗಿಲ್ಲ. ಈ ರಾಜ್ಯದಲ್ಲಿ ಯಡಿಯೂರಪ್ಪ, ಸಿ.ಎಂ.ಉದಾಸಿ, ರೆಡ್ಡಿ ಬ್ರದರ್ ಕುಟುಂಬ ರಾಜಕಾರಣ ಮಾಡುತ್ತಿಲ್ಲವೇ? ಅಷ್ಟೇಕೆ ಈಗ ನನ್ನ ಎದುರಾಳಿಯಾಗಿರುವ ಬಿಜೆಪಿ ಅಭ್ಯರ್ಥಿಯ ಮಗನೂ ಜಿಪಂ ಸದಸ್ಯ.
ಅಪ್ಪ ಮಂತ್ರಿಯಾಗಿದ್ದಾಗಲೇ ಮಗ ಜಿಪಂ ಸದಸ್ಯನಾಗಲಿಲ್ಲವೇ? ದೇವೇಗೌಡರ ಕಟುಂಬವನ್ನೇಕೆ ದೂಷಿಸುತ್ತಾರೆ? ಅಷ್ಟಕ್ಕೂ ನಾನು ಹಿಂಬಾಗಿಲಿನಿಂದ ಅಧಿಕಾರ ಹಿಡಿ ಯುತ್ತಿಲ್ಲ. ಜನರ ಆಶೀರ್ವಾದ ಪಡೆದು, ಜನ ಸೇವೆಗೆ ಮುಂದಾಗಿದ್ದೇನೆ.
* ಪ್ರಜ್ವಲ್: ದೇಶದ ಜನಸಂಖ್ಯೆಯಲ್ಲಿ ಶೇ. 45ರಷ್ಟಿರುವ ಯುವ ಕರು ರಾಜಕಾರಣಕ್ಕೆ ಬರಬೇಕು ಎಂದು ಎಲ್ಲರೂ ಹೇಳುತ್ತಾರೆ. ಎಲ್ಲಾ ಪಕ್ಷಗಳಲ್ಲೂ ಯುವಕರಿಗೆ ಆದ್ಯತೆ ನೀಡಲಾಗುತ್ತಿದೆ. ಹಾಗೆಯೇ ನಮ್ಮ ಪಕ್ಷದಲ್ಲಿ ನನನ್ನು ಸ್ಪರ್ಧೆಗಿಳಿಸಿದ್ದಾರೆ. ಅಷ್ಟಕ್ಕೂ ನಮ್ಮ ಪಕ್ಷದಲ್ಲಿ ಚುನಾವಣೆಗೆ ನಿಲ್ಲಲು
ಯಾವ ಹಿರಿಯ ನಾಯಕರೂ ಆಸಕ್ತಿ ತೋರಲಿಲ್ಲ. ಎಚ್.ಡಿ. ದೇವೇಗೌಡರು ಪಕ್ಷದ ಶಾಸಕರು, ಹಿರಿಯ ನಾಯಕರ ಅಭಿಪ್ರಾಯ ಪಡೆದೇ ನಾನು ಅಭ್ಯರ್ಥಿ ಎಂದು ಘೋಷಿಸಿದರು. ಇನ್ನು ಅನುಭವ ದಿಢೀರನೇ ಯಾರಿಗೂ ಬರುವುದಿಲ್ಲ.
ಹಿರಿಯರಾದ ದೇವೇಗೌಡರು, ಸಿದ್ದರಾಮಯ್ಯ, ಎಚ್.ಡಿ. ರೇವಣ್ಣ , ಸಿಎಂ ಎಚ್.ಡಿ. ಕುಮಾರಸ್ವಾಮ ಅವರ ಸಲಹೆ,ಮಾರ್ಗದರ್ಶನ ನನಗೆ ಸದಾ ಇದ್ದೇ ಇರುತ್ತದೆ. *ಪ್ರಶ್ನೆ: ಹಾಸನ ಲೋಕಸಭಾ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ನಿಮ್ಮ
ಕಲ್ಪನೆ, ಗುರಿ ಏನು?
* ಪ್ರಜ್ವಲ್: ನಿರುದ್ಯೋಗ ನಿವಾರಣೆಯ ನಿಟ್ಟಿನಲ್ಲಿ ಐಟಿ ಕಂಪನಿಗಳನ್ನು ಜಿಲ್ಲಾ ಕೇಂದ್ರಕ್ಕೆ ತರುವುದು. ಮಹಾ ನಗರಗಳಿಗೆ ಸೀಮಿತವಾಗಿರುವ ಐಟಿ, ಬಿಟಿ ಉದ್ದಿಮೆಗಳು ಹಾಸನದಂಥ ಜಿಲ್ಲಾ ಕೇಂದ್ರಕ್ಕೂ ಬರಬೇಕು. ಪ್ರತಿ ತಾಲೂಕು ಕೇಂದ್ರದಲ್ಲಿಯೂ ಕೈಗಾರಿಕಾ ಪ್ರದೇಶಗಳನ್ನು ನಿರ್ಮಿಸಿ ಖಾಸಗಿ ಉದ್ದಿಮೆ ದಾರರನ್ನು ಕರೆ ತಂದು ಉದ್ಯೋಗಾವಕಾಶ ಸೃಷ್ಟಿಸುವುದು ನನ್ನ ಗುರಿ.
Related Articles
*ಪ್ರಜ್ವಲ್: ನನ್ನ ತಾತನ ಕನಸು ನನಸು ಮಾಡುವುದೇ ನನ್ನ ಪ್ರಮುಖ ಗುರಿ. ಹಾಸನಕ್ಕೆ ಐಐಟಿ, ವಿಮಾನ ನಿಲ್ದಾಣ, ಒಂದು ವಿಶ್ವ ವಿದ್ಯಾನಿಲಯ ಸ್ಥಾಪನೆ ದೇವೇಗೌಡರ ಕನಸು. ಈ ಕನಸುಗಳ ಈಡೇರಿಕೆ ನನ್ನೊಬ್ಬನಿಂದ ಸಾಧ್ಯವಿಲ್ಲವೆಂಬ ಅರಿವಿದೆ. ದೇವೇಗೌಡರ ರಾಜಕೀಯ ಪ್ರಭಾವ, ಅವರ ಸಹಕಾರದೊಂದಿಗೆ ಈ ಯೋಜನೆಗಳ ಸಾಕಾರ ಮಾಡುವೆ.
Advertisement
*ಪ್ರಶ್ನೆ: ಬಿರುಸಿನ ಪ್ರಚಾರ ನಡೆಸುತ್ತೀದ್ದೀರಿ. ಜನರ ಸ್ಪಂದನೆ ಹೇಗಿದೆ?* ಪ್ರಜ್ವಲ್: ಕ್ಷೇತ್ರದಲ್ಲಿ ಜನರ ಒಲವು ನನ್ನ ಪರವಾಗಿದೆ. ನನ್ನ ಎದುರಾಳಿ ಅಭ್ಯರ್ಥಿ ಅಧಿಕಾರದಲ್ಲಿದ್ದಾಗ ಅಭಿವೃದ್ಧಿಗೆ ಆದ್ಯತೆ ನೀಡಲಿಲ್ಲ. ಅವರಿಗೆ ಯಾವುದೇ ಬದ್ಧತೆ ಇಲ್ಲ. ಅವಕಾಶವಾದಿ ರಾಜಕಾರಣಿ ಎಂಬ ಕೆಟ್ಟ ಇಮೇಜಿದೆ. ಈಗ ಸಮ್ಮಿಶ್ರ ಸರ್ಕಾರದಲ್ಲಿಸಾವಿರಾರು ಕೋಟಿ ರೂ. ಯೋಜನೆಗಳನ್ನು ನನ್ನ ತಂದೆ ಸಚಿವ ರೇವಣ್ಣ ಅವರು ಹಾಸನ ಜಿಲ್ಲೆಗೆ ಮಂಜೂರು ಮಾಡಿಸಿ ಅನುಷ್ಠಾನಗೊಳಿಸುತ್ತಿದ್ದಾರೆ. ಮೈತ್ರಿ ಪಕ್ಷ ಕಾಂಗ್ರೆಸ್‌ನ ಎಲ್ಲಾ ಮುಖಂಡರು,
ಕಾರ್ಯಕರ್ತರು ಉತ್ಸಾಹದಿಂದ ನನ್ನ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಭಾರೀ ಬಹುಮತದ ಗೆಲುವು ನಿರೀಕ್ಷಿಸಿದ್ದೇನೆ.