Advertisement

ಪಿಎಫ್ಐ, ಎಸ್‌ಡಿಪಿಐ ಬ್ಯಾನ್‌ ಚುನಾವಣೆ ಗಿಮಿಕ್‌: ಸಂಸದ ಪ್ರಜ್ವಲ್‌ ರೇವಣ್ಣ

04:37 PM Oct 02, 2022 | Team Udayavani |

ಹಾಸನ: ಚುನಾವಣೆ ಗಿಮಿಕ್‌ಗಾಗಿ ಪಿಎಫ್ಐ ಮತ್ತು ಎಸ್‌ಡಿಪಿಐ ಬ್ಯಾನ್‌ ಮಾಡಲಾಗಿದ್ದು, ಬ್ಯಾನ್‌ ಮಾಡುವು ದಾದರೇ ಆರ್‌ಎಸ್‌ಎಸ್‌, ಭಜರಂಗದಳ ಸೇರಿ ಒಟ್ಟಿಗೆ ಮಾಡಲಿ ಎಂದು ಸಂಸದ ಪ್ರಜ್ವಲ್‌ ರೇವಣ್ಣ ಅವರು ಬಿಜೆಪಿ ಪಕ್ಷದ ವಿರುದ್ಧ ಹರಿಹಾಯ್ದರು.

Advertisement

ನಗರದ ಜವೇನಹಳ್ಳಿ ಮಠಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದೊಂದಿಗೆ ಮಾತನಾಡಿ, ದೇಶದಲ್ಲಿ ಬ್ಯಾನ್‌ ಮಾಡಲಾಗಿರುವ ಪಿಎಫ್ಐ ಮತ್ತು ಎಸ್‌ ಡಿಪಿಐ ಒಂದೇ ಅಲ್ಲ, ಆರ್‌ಎಸ್‌ಎಸ್‌, ಭಜರಂಗದಳ ಒಂದೆ ಅಲ್ಲ ಅನೇಕ ಸಂಘಟನೆಗಳಿವೆ. ಬ್ಯಾನ್‌ ಮಾಡುವುದಾದರೇ ಎಲ್ಲ ಒಟ್ಟಿಗೆ ಬ್ಯಾನ್‌ ಮಾಡಲಿ. ಒಂದೆರ ಡು ಸಂಘಟನೆ ಬ್ಯಾನ್‌ ಮಾಡುತ್ತೀನಿ ಎನ್ನುವುದು, ಇನ್ನೆರಡು ಬ್ಯಾನ್‌ ಮಾಡುವುದಿಲ್ಲ ಎನ್ನುವುದು ಸಮಾ ಜದಲ್ಲಿ ಮತ್ತೂಮ್ಮೆ ಗೊಂದಲ ಸೃಷ್ಟಿಸಿ ನೀವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದೀರಿ ಎಂದು ಸರಕಾರದ ವಿರುದ್ಧ ಹರಿಹಾಯ್ದರು.

ಸರ್ವಪಕ್ಷಗಳ ಸಭೆ ಕರೆಯಿರಿ: ಪಿಎಫ್ಐ ಮತ್ತು ಎಸ್‌ಡಿಪಿಐ ಮಾತ್ರ ಬ್ಯಾನ್‌ ಮಾಡುತ್ತೀನಿ ಎಂದ್ರೆ ಅವರು ಸುಮ್ಮನಿರುತ್ತಾರಾ? ಉಳಿದ ಸಂಘಟನೆ ಕೂಡ ಬ್ಯಾನ್‌ ಮಾಡುವಂತೆ ಬೆಟ್ಟು ಮಾಡಿ ತೋರಿಸು ತ್ತಾರೆ. ಸರಕಾರಗಳು ಇದಕ್ಕೆ ತುರ್ತು ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲವಾದರೇ ಸರ್ವ ಪಕ್ಷಗಳ ಸಭೆ ಕರೆಯಿರಿ. ನಮ್ಮನ್ನು ಬಿಡಿ ನಾವೆಲ್ಲ ಜ್ಯೂನಿಯರ್, ಎಲ್ಲಾ ಹಿರಿಯರ ಮಾರ್ಗದರ್ಶನ ದಲ್ಲಿ ಸಮಸ್ಯೆ ಬಗ್ಗೆ ಚರ್ಚಿಸಬೇಕು. ಪಿಎಫ್ಐ, ಮತ್ತು ಎಸ್‌ಡಿಪಿಐನಿಂದ ಯಾವ ತಪ್ಪಾಗಿದೆ? ಟರ್ನಿಸಂ ಆಕ್ಟಿವಿಟಿ ನಡೆಯುತ್ತಿದೆ ಎಂದು ಶಾಸಕರು, ಮಂತ್ರಿಗಳು ಹೇಳಿಕೆ ಕೊಡುತ್ತಿ ದ್ದಾರೆ. ನೀವು ಹೇಳುವುದಕ್ಕೆ ದಾಖಲಾತಿ ಏನಿದೆ? ಸಾಕ್ಷಿಯನ್ನು ಜನರ ಮುಂದೆ ಇಟ್ಟು ನಂತರ ಯಾರಾನ್ನಾದರೂ ಬ್ಯಾನ್‌ ಮಾಡಿ ಬೇಡ ಎಂದು ಹೇಳುವುದಿಲ್ಲ.

ಜನರಿಗೆ ಉತ್ತರಿಸಿ: ನಾಳೆ ಆರ್‌ಎಸ್‌ಎಸ್‌, ಭಜರಂಗದಳ ಇಲ್ಲವೇ ಪಿಎಫ್ಐ ಮತ್ತು ಎಸ್‌ಡಿಪಿಐ ಬ್ಯಾನ್‌ ಮಾಡುತ್ತೀರೋ ಇವೆಲ್ಲಾ ಸರಕಾರದ ವೈಯಕ್ತಿಕ ವಿಚಾರಕ್ಕೆ ಬಿಟ್ಟಿದ್ದು ಎಂದರು. ಏತಕ್ಕಾಗಿ ಪಿಎಫ್ಐ ಮತ್ತು ಎಸ್‌ಡಿಪಿಐ ಬ್ಯಾ ನ್‌ ಮಾಡ್ತಿದ್ದೀರಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಅವರಿಗೆ ಮೊದಲು ರೆಕಾರ್ಡ್‌ ನೀಡಿ ಉತ್ತರ ಕೊಡಿ ಎಂದು ಟೀಕಿಸಿದರು.

ನಾನು ತಪ್ಪು ಮಾಡಿದ್ರೆ ಶಿಕ್ಷೆ ಆಗಬೇಕು. ತಪ್ಪೆ ಮಾಡದೇ ಶಿಕ್ಷೆ ನೀಡಿದ್ರೆ ಅದು ಯಾವ ನ್ಯಾಯ ಸಿಗುತ್ತದೆ. ನೂರಕ್ಕೆ ನೂರರಷ್ಟು ದುಡುಕಿನ ನಿರ್ಧಾರ ಒಂದೆ ಅಲ್ಲ. ಚುನಾವಣೆ ಹತ್ತಿರ ಇರುವುದರಿಂದ ರಾಜಕೀ ಯಕ್ಕೊಸ್ಕರ ಇಂತಹದಕ್ಕೆ ಮುಂದಾಗಿದ್ದಾರೆ ಎಂದು ದೂರಿದರು. ಚುನಾವಣೆ ಗಿಮಿಕ್‌: ಪಿಎಫ್ಐ ಮತ್ತು ಎಸ್‌ಡಿಪಿಐ ನಿನ್ನೆ ಮೊನ್ನೆ ಹುಟ್ಟಿದಲ್ಲ. ಹಲವಾರು ವರ್ಷಗಳಿಂದ ಇದ್ದು, ಬ್ಯಾನ್‌ ಮಾಡು ವುದಾದರೇ ಸರಕಾರ ಬಂದ ಮೂರು ವರ್ಷಗಳಲ್ಲೆ ಮಾಡಬಹುದಿತ್ತು. ಇಷ್ಟೊಂದು ಸಮಯ ಬೇಕಾಗಿರಲಿಲ್ಲ. ಇದೆಲ್ಲಾ ಚುನಾವಣೆ ಗಿಮಿಕ್‌ ಅಷ್ಟೇ ಎಂದರು.

Advertisement

ಇದೆಲ್ಲಾ ಯಾವುದು ಶಾಶ್ವತವಲ್ಲ. ಇದೆಲ್ಲಾ ಮಾಡುತ್ತಾ ಹೋದ್ರೆ ನಾವೆ ಸಮಾಜದಲ್ಲಿ ಒಡಕನ್ನು ತಂದಂತಾಗುತ್ತದೆ. ಈಗಾಗಲೇ ಸಮಾಜದಲ್ಲಿ ತುಂಬ ಒಡಕು ಉಂಟಾಗಿದೆ. ನಾವು ಯಾವತ್ತು ಸಮಾಜವನ್ನು ಒಗ್ಗೂಡಿಸಿಕೊಂಡು ಎಲ್ಲಾ ಸಮಾಜವನ್ನು ಒಟ್ಟಿಗೆ ದೇಶ ಮತ್ತು ರಾಜ್ಯವನ್ನು ಬೆಳೆಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಈತರ ನಿರ್ಧಾರಕ್ಕೆ ಕಡಿವಾಣ ಹಾಕಿ ಪರಿಶೀಲನೆ ಮಾಡಿ ಕೇಂದ್ರಕ್ಕೆ ಮತ್ತು ರಾಜ್ಯ ಸರಕಾರಕ್ಕೆ ಸಲಹೆ ಕೊಡುವಷ್ಟು ನಾನು ದೊಡ್ಡವನಲ್ಲ. ಈ ವಿಚಾರದ ಬಗ್ಗೆ ಆಯಾ ಮುಖ್ಯಮಂತ್ರಿಗಳು ಅರ್ಜಿ ಬರೆದು ಕೇಂದ್ರ ಸರಕಾರಕ್ಕೆ ಮನ ಮಾಡಲಿ. ನಾನು ಕೂಡ ಸೆಷೆನ್ಸ್‌ ಇದ್ದ ವೇಳೆ ಚರ್ಚೆ ಮಾಡಲಾಗುವುದು ಎಂದರು. ಹಿಂದೂ ಕಾರ್ಯಕರ್ತರ ಹತ್ಯೆಗಳಲ್ಲಿ ಪಿಎಫ್ಐ ಮತ್ತು ಎಸ್‌ಡಿಪಿಐ ಕಾರ್ಯಕರ್ತರ ಕೈವಾಡ ಇದೆ ಎನ್ನುವ ಆರೋಪಗಳು ಕೇಳಿ ಬಂದಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಂಸದರು, ಇದನ್ನು ಪೊಲೀಸ್‌ ಹೇಳುತ್ತಿದ್ದಾರೊ, ಇತರರು ಹೇಳುತ್ತಿದ್ದರೊ ಅದಕ್ಕೆಲ್ಲ ದಾಖಲಾತಿಗಳು ಅವಶ್ಯಕ. ಗೃಹ ಸಚಿವರೂ ಕೂಡ ದಾಖಲಾತಿ ಸಮೇತ ಕೊಡಲಿ. ಚುನಾವಣೆಗೊಸ್ಕರ ಜನಾಂಗ ಒಡೆಯುವುದಕ್ಕಾಗಲಿ ಮತ್ತು ರಾಜ್ಯ ಒಡೆಯುವುದಕ್ಕಾಗಲಿ ದಯವಿಟ್ಟು ಮಾಡಬೇಡಿ. ವಿಶ್ವಾಸದಿಂದ ಜನ ಬದುಕು ನಡೆಸುತ್ತಿದ್ದು, ಇದರಲ್ಲಿ ನೀವೇ ವೇಷ ಹಾಕಿ ಸಮಾಜ ಒಡೆಯುವ ಕೆಲಸ ಮಾಡಬೇಡಿ ಎಂದು ಕೇಂದ್ರ ಮತ್ತು ರಾಜ್ಯ ಸರಕಾರ ಇಬ್ಬರಿಗೂ ಮನವಿ ಮಾಡುತ್ತೇನೆ. ಇದೆ ವೇಳೆ ಜೆಡಿಎಸ್‌ ತಾಲೂಕು ಅಧ್ಯಕ್ಷ ಎಸ್‌. ದ್ಯಾವೇಗೌಡ, ಮುಖಂಡರಾದ ಗಿರೀಶ್‌ ಚನ್ನàರಪ್ಪ, ಮಹೇಶ್‌, ಇತರರು ಉಪಸ್ಥಿತರಿದ್ದರು.

ಕಮಿಷನ್‌ ಸರ್ಕಾರ ನನ್ನ ಆರೋಪವಲ್ಲ : ನಾನಾಗಲಿ, ಕುಮಾರಣ್ಣ ಆಗಲಿ, ರೇವಣ್ಣ ಆಗಲಿ 40 ಪರ್ಸೆಂಟ್‌ ಸರಕಾರ ಎಂದು ಹೇಳಲು ಹೋಗಲಿಲ್ಲ. ಸಿಎಂ ಸಭೆ ಕರೆದ ವೇಳೆ ಗುತ್ತಿಗೆದಾರ ಅಸೋಸಿಯೇಷನ್‌ ಇಡೀ ರಾಜ್ಯಕ್ಕೆ 40ಪರ್ಸೆಂಟ್‌ ಸರಕಾರವೆಂದು ತಿಳಿಸಿದ್ದಾರೆ. ನಾನು ಹೇಳಿಲ್ಲ. ವಿಪಕ್ಷ ನಾಯಕ ಸಿದ್ದರಾಮಣ್ಣ ಹೇಳಿಲ್ಲ. ಈಗ ಇಡೀ ಗ್ರಾಮೀಣ ಮಟ್ಟಕ್ಕೆ 40 ಪರ್ಸೆಂಟ್‌ ಸರಕಾರ ಎಂದು ಗೊತ್ತಾಗಿದೆ. ಇಂತಹ ಆರೋಪಗಳನ್ನು ಅಧಿಕಾರಿಗಳು ಹಣ ಪಡೆದು ಸರಕಾರದ ಮೇಲೆ ದೂರುತ್ತಿರಬೇಕು. ಇಲ್ಲ ಸರಕಾರವು ಹಣ ಪಡೆದು ಅಧಿಕಾರಿಗಳ ಮೇಲೆ ಆರೋಪ ಮಾಡುತ್ತಿರಬೇಕು ಎಂದು ಗಂಬೀರವಾಗಿ ದೂರಿ ದರು. ಅಧಿಕಾರಿಗಳು ಸರಿಯಾಗಿರಬೇಕು ಎಂದರೇ ಸರಕಾರ ಅವರನ್ನು ಹದ್ಬಸ್ತಿನಲ್ಲಿ ಇಟ್ಟುಕೊಳ್ಳ ಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next