Advertisement
ಗುರುವಾರ ಬೆಳಗ್ಗೆ 11.15ಕ್ಕೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ಮಧ್ಯಾಹ್ನ 12 ಗಂಟೆ ಸುಮಾರಿಗೆ ಒಂದು ಸೆಟ್ ಉಮೇದುವಾರಿಕೆ ಸಲ್ಲಿಸಿದರು. ಪ್ರಜ್ವಲ್ ತಂದೆ ಹಾಗೂ ಶಾಸಕ ಎಚ್.ಡಿ.ರೇವಣ್ಣ, ಜಿಲ್ಲೆಯ ಪಕ್ಷದ ಶಾಸಕರಾದ ಎ.ಮಂಜು, ಸಿ.ಎನ್.ಬಾಲಕೃಷ್ಣ, ಎಚ್.ಪಿ.ಸ್ವರೂಪ್ ಪ್ರಕಾಶ್ ಅವರು ಜತೆಗಿದ್ದರು.
Related Articles
Advertisement
ಪ್ರಜ್ವಲ್ ರೇವಣ್ಣ ಮಾತನಾಡಿ, ಗುರುವಾರ ಶುಭದಿನವೆಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದೇನೆ. ಎ.4ರಂದು ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಜತೆ ಬೃಹತ್ ರ್ಯಾಲಿ ನಡೆಸಿ ನಾಮಪತ್ರ ಸಲ್ಲಿಸುತ್ತೇನೆ. ಅಂದು ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಪ್ರಜ್ವಲ್ 18 ಕೋ. ರೂ. ಆಸ್ತಿ ಒಡೆಯ :ಹಾಸನ: ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಹಾಸನ ಲೋಕಸಭೆ ಕ್ಷೇತ್ರದ ಚುನಾವಣೆಗೆ ಗುರುವಾರ ಸಂಸದ ಪ್ರಜ್ವಲ್ ರೇವಣ್ಣ ಅವರು ನಾಮಪತ್ರ ಸಲ್ಲಿಸಿದ್ದು, ಅವರು 18,52, 21, 267 ಕೋಟಿ ರೂ. ಆಸ್ತಿ ಹೊಂದಿರುವುದನ್ನು ಉಲ್ಲೇಖೀಸಿದ್ದಾರೆ. 5.44 ಕೋ. ರೂ. ಚರ ಹಾಗೂ 4.43 ಕೋ. ರೂ. ಸ್ಥಿರ ಆಸ್ತಿ ಸಹಿತ ಒಟ್ಟು 18.52 ಕೋ. ರೂ. ಮೌಲ್ಯದ ಆಸ್ತಿ ಹೊಂದಿದ್ದು, ಸದ್ಯ 9.29 ಲಕ್ಷ ರೂ. ನಗದು ಇರುವುದಾಗಿ ಪ್ರಮಾಣ ಪತ್ರದಲ್ಲಿ ಉಲ್ಲೇಖೀಸಿದ್ದಾರೆ. ವಿವಿಧ ಬ್ಯಾಂಕ್ ಖಾತೆಗಳಲ್ಲಿ 56 ಲಕ್ಷ ರೂ. ಇರುವುದಾಗಿ ತಿಳಿಸಿದ್ದಾರೆ. ಐದು ವರ್ಷಗಳಲ್ಲಿ ಕೃಷಿಯಿಂದ 2.75 ಕೋಟಿ ರೂ. ಆದಾಯ, ಕೃಷಿಯೇತರ ಮೂಲದಿಂದ 1.33 ಕೋಟಿ ರೂ. ಆದಾಯ ಗಳಿಸಿದ್ದೇನೆ. 31 ಹಸು, 4 ಎತ್ತು, ಒಂದು ಟ್ರ್ಯಾಕ್ಟರ್, ಬೆಂಗಳೂರು ಮೈಸೂರು ಸಹಿತ ವಿವಿಧೆಡೆೆ ವಾಣಿಜ್ಯ ಕಟ್ಟಡ, ಹಾಸನ ಹಾಗೂ ಬೆಂಗಳೂರಿನ ನೆಲಮಂಗಲದಲ್ಲಿ ಆಸ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ. ಕುಟುಂಬದವರಿಂದಲೇ ಸಾಲ ಪಡೆದ ಸಂಸದ ಸೋದರತ್ತೆ ಅನಸೂಯಾ ಅವರಿಂದ 22 ಲಕ್ಷ ರೂ., ಮತ್ತೂಬ್ಬ ಸೋದರತ್ತೆ ಶೈಲಜಾ ಅವರಿಂದ 10 ಲಕ್ಷ ರೂ. ತಂದೆ ರೇವಣ್ಣ ಅವರಿಂದ 86 ಲಕ್ಷ ಹಾಗೂ ಸಹೋದರ, ವಿಧಾನ ಪರಿಷತ್ ಸದಸ್ಯ ಡಾ| ಸೂರಜ್ ರೇವಣ್ಣ ಅವರಿಂದ 1 ಕೋಟಿ ರೂ. ಸಹಿತ ಒಟ್ಟು 4.48 ಕೋಟಿ ಸಾಲ ಹೊಂದಿರುವುದಾಗಿ ತಿಳಿಸಿದ್ದಾರೆ. ಸರಕಾರಕ್ಕೆ 3.04 ಕೋಟಿ ರೂ. ತೆರಿಗೆ ಬಾಕಿ ಉಳಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಿರುವ ಅವರು, ತೆರಿಗೆ ಸಲ್ಲಿಕೆ ಬಗ್ಗೆ ಕಾನೂನು ಹೋರಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.