Advertisement

‘ಮಾಫಿಯಾ’ಅಡ್ಡದಲ್ಲಿ ಖಡಕ್‌ ಪ್ರಜ್ವಲ್‌: ಲೋಹಿತ್‌ ನಿರ್ದೇಶನದ ಚಿತ್ರ

04:33 PM Dec 03, 2021 | Team Udayavani |

“ಮಾಫಿಯಾ’- ಇದು ಪ್ರಜ್ವಲ್‌ ದೇವರಾಜ್‌ ಅಭಿನಯದ ಚಿತ್ರ. ತುಂಬಾ ದಿನಗಳಿಂದ ಈ ಸಿನಿಮಾದ ಹೆಸರು ಕೇಳಿಬರುತ್ತಿದ್ದರೂ, ಚಿತ್ರ ಯಾವಾಗ ಸೆಟ್ಟೇರುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಆದರೆ, ಈ ಚಿತ್ರ ಸೆಟ್ಟೇರಿದೆ. ಗುರುವಾರ ಚಿತ್ರದ ಮುಹೂರ್ತ ನಡೆದಿದೆ. ಈ ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್‌ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಈ ಚಿತ್ರಕ್ಕಾಗಿ ಅವರು ಮಾಡಿಸಿರುವ ಹೊಸ ಶೈಲಿಯಲ್ಲಿ ಹೇರ್‌ಸ್ಟೈಲ್‌ ಮಾಡಿಸಿಕೊಂಡಿದ್ದಾರೆ. “ಮಾಫಿಯಾ’ ಚಿತ್ರವನ್ನು ಲೋಹಿತ್‌ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ “ಮಮ್ಮಿ’, “ದೇವಕಿ’ ಸಿನಿಮಾ ಮಾಡಿ, ಮೆಚ್ಚುಗೆ ಗಳಿಸಿದ್ದ ಲೋಹಿತ್‌ ಈ ಬಾರಿ “ಮಾಫಿಯಾ’ ಹಿಂದೆ ಬಿದ್ದಿದ್ದಾರೆ. ಚಿತ್ರವನ್ನು ಕುಮಾರ್‌.ಬಿ ನಿರ್ಮಿಸುತ್ತಿದ್ದಾರೆ.

Advertisement

ಚಿತ್ರದ ಬಗ್ಗೆ ಮಾತನಾಡುವ ಲೋಹಿತ್‌, “ಇದು ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಎಂಟರ್‌ಟೈನರ್‌. ಆರಂಭದಲ್ಲಿ ಪ್ರಜ್ವಲ್‌ ಅವರನ್ನು ಕಂಡರೆ ಭಯವಿತ್ತು. ಈಗ ಒಳ್ಳೆಯ ಸ್ನೇಹವಿದೆ. ಮೊದಲ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಆ ನಂತರ ರಾಮೋಜಿ ರಾವ್‌ ಫಿಲಂ ಸಿಟಿಯಲ್ಲಿ ಪ್ಲ್ರಾನ್‌ ಮಾಡಿದ್ದೇವೆ’ ಎಂದರು.

ಇದನ್ನೂ ಓದಿ:ಬ್ಯಾಕ್‌ ಟು ಬ್ಯಾಕ್‌ ಆಶಿಕಾ: ಈ ವಾರ ಒಂದು ಮುಂದಿನ ವಾರ ಮತ್ತೂಂದು ರಿಲೀಸ್‌

ಪ್ರಜ್ವಲ್‌ ದೇವರಾಜ್‌ ಕೂಡಾ “ಮಾಫಿಯಾ’ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಹೊಸ ಗೆಟಪ್‌ನ ಜೊತೆಗೆ ವಿಭಿನ್ನ ಪಾತ್ರ ಕೂಡಾ ಸಿಕ್ಕಿದ ಖುಷಿ ಅವರದು. “ನಾನು ಈ ಹಿಂದೆ ಲೋಹಿತ್‌ ಮಾಡಿರುವ ಸಿನಿಮಾಗಳನ್ನು ನೋಡಿದ್ದೇನೆ. ಸಾಕಷ್ಟು ಅಧ್ಯಯನ ಮಾಡಿಯೇ ಅವರು ಸ್ಕ್ರಿಪ್ಟ್ ಮಾಡಿದ್ದಾರೆ. ಮಾಫಿಯಾ ಅಂದಾಗ ಕೇವಲ ಹೊಡೆದಾಟ ಬಡಿದಾಟದ ಸಿನಿಮಾನಾ ಎಂಬ ಭಾವನೆ ಬರಬಹುದು. ಖಂಡಿತಾ ಅಲ್ಲ, ಸಾಕಷ್ಟು ಹೊಸ ವಿಚಾರಗಳನ್ನು ಹೇಳಿದ್ದಾರೆ. ಇದು ಬೇರೆ ತರಹದ ಮಾಫಿಯಾ’ ಎಂದರು. ನಟಿ ಅದಿತಿ ಪ್ರಭುದೇವ ಸಿನಿಮಾದಲ್ಲಿ ನಟಿಸುತ್ತಿರುವ ಖುಷಿ ಹಂಚಿಕೊಂಡರು.

ಸದ್ಯ ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ಸಂಭಾಷಣೆಕಾರರಾಗಿರುವ ಮಾಸ್ತಿ “ಮಾಫಿಯಾ’ ಚಿತ್ರಕ್ಕೂ ಸಂಭಾಷಣೆ ಬರೆಯುತ್ತಿದ್ದಾರೆ. “ಚಿತ್ರದ ಸಂಭಾಷಣೆ ಕೂಡಾ ಬೇರೆ ತರಹ ಇರುತ್ತದೆ. ಈ ಹಿಂದೆ ಪ್ರಜ್ವಲ್‌ ಅಭಿನಯದ ಜಂಟಲ್‌ಮಾÂನ್‌ ಚಿತ್ರಕ್ಕೆ ಬರೆದಿದ್ದೆ. ಈಗ ಮಾಫಿಯಾಗೆ ಬರೆಯುತ್ತಿದ್ದೇನೆ’ ಎಂದರು. ಚಿತ್ರಕ್ಕೆ ಡಿಫ‌ರೆಂಟ್‌ ಡ್ಯಾನಿ ಸಾಹಸವಿದೆ. ಮುಹೂರ್ತ ಸಮಾರಂಭಕ್ಕೆ ಆಗಮಿಸಿದ ದುನಿಯಾ ವಿಜಯ್‌ ಹಾಗೂ ಪ್ರಿಯಾಂಕಾ ಉಪೇಂದ್ರ ಚಿತ್ರತಂಡಕ್ಕೆ ಶುಭ ಕೋರಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next