Advertisement

Prajwal Devaraj; ‘ಮಾಫಿಯಾ’ ಮುಂದೆ ‘ರಾಕ್ಷಸ’ ಹಿಂದೆ; ಒಬ್ಬ ನಿರ್ದೇಶಕನ ಎರಡು ಸಿನಿಮಾ

03:31 PM Jun 27, 2024 | Team Udayavani |

ಪ್ರಜ್ವಲ್‌ ದೇವರಾಜ್‌ ನಟನೆಯ ಎರಡು ಸಿನಿಮಾಗಳ ಒಂದರ ಹಿಂದೊಂದರಂತೆ ತೆರೆಗೆ ಬರಲು ಸಿದ್ಧವಾಗಿದೆ. ವಿಶೇಷವೆಂದರೆ ಆ ಎರಡೂ ಚಿತ್ರಗಳ ನಿರ್ದೇಶಕ ಒಬ್ಬರೇ.

Advertisement

ಹೌದು, ಪ್ರಜ್ವಲ್‌ ನಟಿಸಿರುವ “ರಾಕ್ಷಸ’ ಹಾಗೂ “ಮಾಫಿಯಾ’ ಚಿತ್ರಗಳು ಒಂದು ತಿಂಗಳ ಅಂತರದಲ್ಲಿ ತೆರೆಗೆ ಬರಲು ಸಿದ್ಧವಾಗಿವೆ. ಈಗಾಗಲೇ “ಮಮ್ಮಿ’, “ದೇವಕಿ’ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ಲೋಹಿತ್‌ ಈ ಎರಡೂ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಈಗಾಗಲೇ “ಮಾಫಿಯಾ’ ಚಿತ್ರತಂಡ ಹೇಳಿದಂತೆ ಜುಲೈ 26ರಂದು ತೆರೆಗೆ ಬರಲಿದೆ. ಒಂದು ವೇಳೆ ಅಂದುಕೊಂಡಂತೆ ಜುಲೈನಲ್ಲಿ “ಮಾಫಿಯಾ’ ಬಂದರೆ ಆಗಸ್ಟ್‌ ಕೊನೆಯಲ್ಲಿ “ರಾಕ್ಷಸ’ ಬರಲಿದೆ.

ಅಂದಹಾಗೆ, ರಾಕ್ಷಸ ಹಾರರ್‌ ಹಿನ್ನೆಲೆಯಲ್ಲಿ ಸಾಗುವ ಚಿತ್ರವಾಗಿದ್ದು, ಟೈಮ್‌ ಲೂಪ್‌ ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ ಎನ್ನಲಾಗಿದೆ. ಟೈಮ್‌ ಲೂಪ್‌ನಡಿ ಹಾರರ್‌ ಕಥೆ ಬಂದಿರೋದು ತೀರಾ ವಿರಳ. ಈಗ ಲೋಹಿತ್‌ ಇಂತಹ ಪ್ರಯತ್ನ ಮಾಡಿದ್ದಾರೆ. ಇಡೀ ಸಿನಿಮಾವನ್ನು ರಾಮೋಜಿ ರಾವ್‌ ಫಿಲಂ ಸಿಟಿಯಲ್ಲಿ ಚಿತ್ರಿಕರಣ ಮಾಡಲಾಗಿದೆ. ಚಿತ್ರದ ಕ್ಲೈಮ್ಯಾಕ್ಸ್‌ ಅನ್ನು ವಿಶೇಷವಾಗಿ ಚಿತ್ರೀಕರಿಸಲಾಗಿದ್ದು, ಅಂಡರ್‌ವಾಟರ್‌ನಲ್ಲಿ ಶೂಟಿಂಗ್‌ ಮಾಡಲಾಗಿದೆ. ಚಿತ್ರವನ್ನು ದೀಪು ಬಿಎಸ್‌ ನಿರ್ಮಿಸಿದ್ದಾರೆ.

ಪ್ರಜ್ವಲ್‌ ಮತ್ತೂಂದು ಚಿತ್ರ “ಮಾಫಿಯಾ’ ಆ್ಯಕ್ಷನ್‌ ಥ್ರಿಲ್ಲರ್‌ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಬೆಂಗಳೂರು ಕುಮಾರ್‌ ಫಿಲಂಸ್‌ ಲಾಂಛನದಲ್ಲಿ ಕುಮಾರ್‌ ಬಿ ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಸಾಹಸ ಸನ್ನಿವೇಶಗಳು ಸಾಹಸಪ್ರಿಯರಿಗೆ ಹೆಚ್ಚು ಪ್ರಿಯವಾಗಲಿದೆ ಎನ್ನುವುದು ಚಿತ್ರ ತಂಡದ ಮಾತು. ನಾಯಕ ಪ್ರಜ್ವಲ್‌ ದೇವರಾಜ್‌ ಅಭಿನಯದ 35ನೇ ಚಿತ್ರ “ಮಾಫಿಯಾ’. ಹಿಂದಿನ ಚಿತ್ರಗಳಿಗಿಂತ ವಿಭಿನ್ನ ಗೆಟಪ್‌ನಲ್ಲಿ ಪ್ರಜ್ವಲ್‌ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಎಸ್‌. ಪಾಂಡಿಕುಮಾರ್‌ ಛಾಯಾಗ್ರಹಣ ಹಾಗೂ ಅನೂಪ್‌ ಸೀಳಿನ್‌ ಸಂಗೀತ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಪ್ರಜ್ವಲ್‌ ದೇವರಾಜ್‌, ಅದಿತಿ ಪ್ರಭುದೇವ, ದೇವರಾಜ್‌, ಸಾಧುಕೋಕಿಲ, ಶೈನ್‌ ಶೆಟ್ಟಿ, ವಿಜಯ್‌ ಚೆಂಡೂರ್‌, ವಾಸುಕಿ ವೈಭವ್‌ ಮುಂತಾದವರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next