Advertisement

Prajwal Case;ಎಲ್ಲಾ ಆಯಾಮದಲ್ಲಿ ತನಿಖೆ ನಡೆಸಿ,ಸಂತ್ರಸ್ಥರಿಗೆ ನ್ಯಾಯ ದೊರೆಯಬೇಕು: ಬೊಮ್ಮಾಯಿ

03:18 PM May 31, 2024 | Team Udayavani |

ಹುಬ್ಬಳ್ಳಿ: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಎಸ್ಐಟಿ ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸಬೇಕು ಹಾಗೂ ಸಂತ್ರಸ್ಥರಿಗೆ ನ್ಯಾಯ ದೊರೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೆನ್ ಡ್ರೈವ್ ವಿಚಾರದಲ್ಲಿ ಪ್ರಜ್ವಲ್ ರೇವಣ್ಣ ಕಾನೂನಾತ್ಮಕವಾಗಿ ಶರಣಾಗಿದ್ದಾನೆ. ಎಸ್ಐಟಿಯವರು ತನಿಖೆಯನ್ನು ಕಟುಬದ್ದವಾಗಿ ಮಾಡಬೇಕು ಎನ್ನುವುದು ಇಡಿ ಕರ್ನಾಟಕ ಜನರ ಒತ್ತಾಯ. ಅಲ್ಲದೇ ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಎಂದು ಹೇಳಿದರು.

ಇದು ಯಾವ ರೀತಿ ಪ್ರಚಲಿತಕ್ಕೆ ಬಂತು, ಯಾರು ಪ್ರಚಾರ ಮಾಡಿದರು. ಪೆನ್ ಡ್ರೈವ್ ಯಾರ ಹತ್ತಿರವಿತ್ತು. ಅವರು ಯಾಕೆ ಅರೆಸ್ಟ್ ಆದರು ಎನ್ನುವುದರ ಕುರಿತು ಹಲವು ಆಯಾಮಗಳನ್ನು ಪಡೆದಿತ್ತು. ಖಂಡಿತವಾಗಿಯೂ ಇದರಲ್ಲಿ ರಾಜಕಾರಣವು ಬೆರೆತ್ತಿತ್ತು. ಕಾನೂನು ಪ್ರಕಾರ ಇಂತಹದ್ದನ್ನು ಪ್ರಚಾರ ಮಾಡುವುದು ಕಾನೂನು ವಿರುದ್ದವಾದದ್ದು. ಆ ನಿಟ್ಟಿನಲ್ಲಿ ಎಸ್ಐಟಿ ಮುಂದುವರೆದು ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.

ವಾಲ್ಮೀಕಿ ವಾಲ್ಮೀಕಿ ನಿಗಮದ ಸೂಪರಿಟೆಂಡೆಂಟ್ ಚಂದ್ರಶೇಖರ ಆತ್ಮಹತ್ಯೆ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚಂದ್ರಶೇಖರ ಪ್ರಕರಣವು ಸಿಬಿಐಗೆ ಹೋಗುವುದು ಯೋಗ್ಯವಾಗಿದೆ. ಇದರಲ್ಲಿ ಬ್ಯಾಂಕ್ ಕೂಡ ಪಾತ್ರವಹಿಸಿದೆ. ಬ್ಯಾಂಕ್ ನ ನಿಯಮ ಪ್ರಕಾರ 10 ಕೋಟಿಗಿಂತ ಜಾಸ್ತಿ ವಹಿವಾಟುಗಳ ಕುರಿತಾಗಿ ಸಿಬಿಐ ತನಿಖೆ ನಡೆಯಬೇಕು ಎನ್ನುವುದಿದೆ. ಸಚಿವ ಬಿ.ನಾಗೇಂದ್ರ ರಾಜೀನಾಮೆ ವಿಚಾರದಲ್ಲಿ ಇಡೀ ಸರ್ಕಾರದ ನೈತಿಕತೆ ಪ್ರಶ್ನೆ ಇದೆ. ಹಿಂದೆ ವಿರೋಧ ಪಕ್ಷದಲ್ಲಿದ್ದಾಗ ಯಾವ ನೈತಿಕತೆ ಬಗ್ಗೆ ಮಾತನಾಡಿದ್ರು, ಅದೇ ನಾಯಕರು ಇವತ್ತು ಸಿಎಂ, ಡಿಸಿಎಂ ಆಗಿದ್ದಾರೆ. ಹಾಗಾಗಿ ಅವರ ನೈತಿಕತೆ ಸರ್ಕಾರದ ನೈತಿಕತೆಯ ಪ್ರಶ್ನೆಯಿದೆ. ಪ್ರಾಮಾಣಿಕತೆ ಉಳಿಸಿಕೊಳ್ಳುತ್ತಾರೋ ಇಲ್ಲಾ ಮಂತ್ರಿಯನ್ನು ಉಳಿಸಿಕೊಳ್ಳುತ್ತಾರೋ ಎನ್ನುವ ಪ್ರಶ್ನೆ ಅವರ ಮೇಲೆ ಇದೆ ಎಂದು ಹೇಳಿದರು.

ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಶತ್ರು ಭೈರವಿ ಯಾಗ ಮಾಡುತ್ತಿದ್ದಾರೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ನನಗೆ ಗೊತ್ತಿಲ್ಲ. ಯಾಗ ಯಜ್ಞ ಅವರಿಗೆ ಗೊತ್ತು ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next