Advertisement

ಪ್ರಜ್ವಲ್‌ ಗೆಲುವಿಗಲ್ಲ,ಲೀಡ್‌ಗಷ್ಟೇ ಕುತೂಹಲ

01:14 PM May 13, 2019 | Suhan S |

ಹಾಸನ: ಪ್ರಜ್ವಲ್ ರೇವಣ್ಣ ಅವರ ಗೆಲುವಿನ ಬಗ್ಗೆ ಅನುಮಾನವಿಲ್ಲ. ಆದರೆ ಬಹುಮತ ಎಷ್ಟು ಎಂಬುದಷ್ಟಕ್ಕೇ ಕುತೂಹಲ ಎಂದು ಪ್ರಜ್ವಲ್ ರೇವಣ್ಣ ಅವರ ತಾಯಿ, ಜಿಪಂ ಸದಸ್ಯೆ ಭವಾನಿ ರೇವಣ್ಣ ಅವರು ಪ್ರತಿಕ್ರಿಯಿಸಿದ್ದಾರೆ.

Advertisement

ಭಾರೀ ಬಹುಮತದಿಂದ ಗೆಲುವು: ನಗರ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್‌ – ಕಾಂಗ್ರೆಸ್‌ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಪರ ಉಭಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಭಾರೀ ಬಹುಮತ ಗಳಿಂದ ಪ್ರಜ್ವಲ್ ರೇವಣ್ಣ ಗೆಲ್ಲುವ ನಿರೀಕ್ಷೆಯಿದ್ದು, ಸುಮಾರು 3 ಲಕ್ಷ ಮತಗಳ ಅಂತರದ ಜಯವನ್ನು ನಿರೀಕ್ಷಿಸಿದ್ದೇವೆ. ಹಾಗಾಗಿ ಪ್ರಜ್ವಲ್ ಗೆಲುವಿನ ಬಗ್ಗೆ ಅನುಮಾನವಿಲ್ಲ. ಲೀಡ್‌ಗಷ್ಟೇ ಕುತೂಹಲ ಎಂದರು.

ಎಚ್ಎಂಟಿ ಕ್ಷೇತ್ರದ ಪ್ರಾಮುಖ್ಯತೆ: ದೇವೇಗೌಡರು ಮತ್ತು ಕುಟುಂಬದವರು ಸ್ಪರ್ಧಿಸಿರುವ ಹಾಸನ, ಮಂಡ್ಯ, ತುಮಕೂರು ಕ್ಷೇತ್ರಗಳನ್ನು ಎಚ್ಎಂಟಿ ಎಂದೇ ಮಾಧ್ಯಮಗಳು ಬಿಂಬಿಸಿವೆ. ಈ ಮೂರೂ ಕ್ಷೇತ್ರಗಳಲ್ಲೂ ಜೆಡಿಎಸ್‌- ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದೂ ಭವಾನಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಶೈಕ್ಷಣಿಕ ಸುಧಾರಣೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳೂ ಸಹಕಾರ ನೀಡಿದರು. ಮುಖ್ಯವಾಗಿ ಶಿಕ್ಷಕರ ಮತ್ತು ಮಕ್ಕಳ ಶ್ರಮದಿಂದ ಹಾಸನ ಜಿಲ್ಲೆ ಎಸ್‌ಎಸ್‌ಎಲ್ಸಿ ಪರೀಕ್ಷೆಯ ಫ‌ಲಿತಾಂಶದಲ್ಲಿ 31 ನೇ ಸ್ಥಾನದಲ್ಲಿದ್ದುದು 13 ನೇ ಸ್ಥಾನಕ್ಕೆ, ಆನಂತರ 7 ನೇ ಸ್ಥಾನಕ್ಕೆ ಬಂದು ಈ ವರ್ಷ ಪ್ರಥಮ ಸ್ಥಾನ ಪಡೆದಿದೆ. ಇದಕ್ಕಾಗಿ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರನ್ನು ಅಭಿನಂದಿಸಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರು ಕೈಗೊಂಡ ಕ್ರಮಗಳೂ ಕಾರಣವಂತೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರು ಏನಾದ್ರೂ ಹೇಳಿಕೊಳ್ಳಲಿ. ನಾವು ಏನೇನು ಮಾಡಿದ್ದೇವೆ. ಎಷ್ಟು ಸಭೆಗಳನ್ನು ನಡೆಸಿದ್ದೇವೆ ಎಂಬುದು ಅಧಿಕಾರಿಗಳಿಗೆ ಗೊತ್ತಿದೆ. ಶಾಲೆಗಳಲ್ಲಿ ಶಿಕ್ಷಕರು ಎಷ್ಟು ಶ್ರಮಿಸಿದ್ದಾರೆ ಎಂಬುದು ಮಕ್ಕಳು ಮತ್ತು ಪೋಷಕರಿಗೆ ಗೊತ್ತಿದೆ. ತಾಯಂದಿರ ಸಭೆಗಳನ್ನು ಹಾಸನ ಜಿಲ್ಲೆಯಲ್ಲಿ ಮೊದಲ ಬಾರಿಗೆ ನಾವು ನಡೆಸಿದೆವು. ಈ ಕ್ರಮ ರಾಜ್ಯದಲ್ಲಿಯೇ ಮೊದಲು. ಈ ಎಲ್ಲಾ ಕ್ರಮಗಳಿಗೆ ಭಗವಂತನು ಫ‌ಲ ನೀಡಿದ್ದರಿಂದಾಗಿ ಹಾಸನ ಜಿಲ್ಲೆ ಜಿಲ್ಲೆ ಎಸ್‌ಎಸ್‌ಎಲ್ಸಿ ಪರೀಕ್ಷೆಯ ಫ‌ಲಿತಾಂಶದಲ್ಲಿ ಮೊದಲ ಸ್ಥಾನ ಪಡೆಯಲು ಸಾಧ್ಯವಾಗಿದೆ ಎಂದರು.

Advertisement

ಮುಂದಿನ ವರ್ಷದ ಪರೀಕ್ಷೆಯಲ್ಲೂ ಮೊದಲ ಸ್ಥಾನವನ್ನು ಉಳಿಸಿಕೊಳ್ಳುವ ಸವಾಲು ನಮ್ಮ ಮುಂದಿದೆ. ಆ ನಿಟ್ಟಿನಲ್ಲಿ ನಾನು ಈಗಾಗಲೇ ಕೆಲವು ಕಾರ್ಯಕ್ರಮಗಳನ್ನು ಯೋಜಿಸಿದ್ದೇನೆ. ಆ ನಿಟ್ಟಿನಲ್ಲಿ ಕಾರ್ಯೋನ್ನಮುಖರಾಗುತ್ತೇವೆ ಎಂದೂ ಭವಾನಿ ರೇವಣ್ಣ ಅವರು ಸ್ಪಷ್ಪಪಡಿಸಿದರು.

ಯಾರೇನು ಮಾಡಿದ್ದಾರೆ:

ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಹಾಸನ ಜಿಲ್ಲೆ ಪ್ರಥಮ ಸ್ಥಾನ ಪಡೆದಿರುವುದು ನನಗೆ ಸಂತೋಷವಾಗಿದೆ. ನಾನು ಮೊದಲು ಏನೇ ಕೆಲಸ ಆಗಬೇಕೆಂದರೂ ಸಚಿವ ರೇವಣ್ಣ ಅವರನ್ನು ಅವಲಂಬಿಸುತ್ತಿದ್ದೆ. ಆದರೆ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆಯಾದ ನಂತರ ನಾನೇ ಸ್ವತಂತ್ರವಾಗಿ ನಿರ್ಧಾರ ತೆಗೆದು ಕೊಂಡು ಶೈಕ್ಷಣಿಕ ಸುಧಾರಣಾ ಕ್ರಮಗಳನ್ನು ಕೈಗೊಂಡೆ. ಅದ್ದರಿಂದ ಜಿಲ್ಲೆ ಎಸ್‌ಎಸ್‌ಎಲ್ಸಿ ಪರೀಕ್ಷೆಯ ಫ‌ಲಿತಾಂಶದಲ್ಲಿ ಹಾಸನ ಜಿಲ್ಲೆ ಪ್ರಥಮ ಸ್ಥಾನಕ್ಕೆ ಬಂದಾಗ ಸಚಿವ ರೇವಣ್ಣ ಅವರೂ ಪ್ರಶಂಶಿಸಿರಬಹುದು ಎಂದು ಪ್ರತಿಕ್ರಿಯಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next