Advertisement

ಜೈಲಿನಲ್ಲಿ ಮಾಜಿ ಸಚಿವನಿಗೆ ತಕ್ಕುದಾದ ಸೌಕರ್ಯ: ಪ್ರಜಾಪತಿ ಆಗ್ರಹ

05:00 PM Jul 08, 2017 | udayavani editorial |

ಲಕ್ನೋ : ಗ್ಯಾಂಗ್‌ ರೇಪ್‌ ಪ್ರಕರಣದ ಆರೋಪಿಯಾಗಿ ಜೈಲು ಪಾಲಾಗಿರುವ ಉತ್ತರ ಪ್ರದೇಶದ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ, ಜೈಲಿನಲ್ಲಿ ತನಗೆ ಮಾಜಿ ಸಚಿವ ಹಾಗೂ ಮಾಜಿ ಶಾಸಕನ ಸ್ಥಾನಮಾನಕ್ಕೆ ತಕ್ಕುದಾದ ಸೌಲಭ್ಯ – ಸೌಕರ್ಯಗಳನ್ನು ನೀಡುವಂತೆ ಆಗ್ರಹಿಸಿದ್ದಾರೆ. 

Advertisement

ಇಲ್ಲಿನ ಜಿಲ್ಲಾ ಬಂಧೀಖಾನೆಯ ಸೆರೆಮನೆಯಲ್ಲಿ ಪ್ರಜಾಪತಿಯನ್ನು ಇರಿಸಲಾಗಿದೆ. ನಿನ್ನೆ ಶುಕ್ರವಾರ ಬಂಧೀಖಾನೆಗೆ ಅಚ್ಚರಿಯ ಭೇಟಿ ನೀಡಿದ ತಂಡಕ್ಕೆ ಪ್ರಜಾಪತಿ ‘ನನಗೆ ನನ್ನ ಸ್ಥಾನಮಾನಕ್ಕೆ ತಕ್ಕುದಾದ ಸೌಕರ್ಯಗಳನ್ನು ಜೈಲಿನಲ್ಲಿ ನೀಡಬೇಕು’ ಎಂದು ಆಗ್ರಹಿಸಿದರು ಎಂಬುದಾಗಿ ಲಕ್ನೋ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಕೌಶಲ್‌ ರಾಜ್‌ ಶರ್ಮಾ ಹೇಳಿದರು. 

ಈ ಬಗ್ಗೆ ಜಿಲ್ಲಾ ಆಡಳಿತಕ್ಕೆ ಮತ್ತು ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸುವಂತೆ ಪ್ರಜಾಪತಿಗೆ ಸೂಚಿಸಲಾಯಿತು ಎಂದು ಶರ್ಮಾ ತಿಳಿಸಿದರು. 

‘ಪ್ರಕೃತ ಪ್ರಜಾಪತಿ ಅವರು ಸಾಮಾನ್ಯ ಕೈದಿಯಾಗಿ ಜೈಲಿನಲ್ಲಿ ಇದ್ದಾರೆ. ಚಾಪೆಯಲ್ಲಿ ಮಲಗುತ್ತಾರೆ, ಜೈಲಿನ ಆಹಾರವನ್ನು ಸ್ವೀಕರಿಸುತ್ತಾರೆ ಮತ್ತು ಯಾವುದೇ ವಿಶೇಷ ಸೌಕರ್ಯಗಳನ್ನು ಅವರಿಗೆ ನೀಡಲಾಗುತ್ತಿಲ್ಲ’ ಎಂದು ಶರ್ಮಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next