Advertisement

ಮಕ್ಕಳಿಗೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ

05:47 PM Aug 27, 2022 | Team Udayavani |

ಅಮೀನಗಡ: ಮಕ್ಕಳಲ್ಲಿ ಅಡಗಿರುವ ಜ್ಞಾನ ಹೊರಜಗತ್ತಿಗೆ ತೋರಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಪ್ರಭಾರ ಮುಖ್ಯೋಪಾಧ್ಯಾಯ ಎಸ್‌.ಬಿ.ಹೇಳವರ ಹೇಳಿದರು.

Advertisement

ಕೆಲೂರ ಶ್ರೀ ಗುರು ಮಂಟೇಶ್ವರ ಪ್ರೌಢಶಾಲೆಯಲ್ಲಿ ನಡೆದ ಸೂಳೇಭಾವಿ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯಕ್ಕಷ್ಟೇ ಸೀಮಿತರಾಗಬಾರದು. ತಮ್ಮಲ್ಲಿ ಅಡಗಿರುವ ವಿಭಿನ್ನವಾದ ಜ್ಞಾನ, ಕೌಶಲ ತೋರಿಸಲು ಪ್ರತಿಭಾ ಕಾರಂಜಿ ಉತ್ತಮ ಅವಕಾಶ ಅದರ ಪ್ರಯೋಜನ ಪಡೆದು ಮುಂದೆ ಬರಬೇಕು ಎಂದರು.

ಗ್ರಾಪಂ ಅಧ್ಯಕ್ಷ ಮಹಾಲಿಂಗೇಶ ನಾಡಗೌಡರ ಮಾತನಾಡಿ, ಮಕ್ಕಳಿಗೆ ಪ್ರೋತ್ಸಾಹ ನೀಡುವ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ ನಮ್ಮ ಗ್ರಾಮದ ಪ್ರೌಢಶಾಲೆಯಲ್ಲಿ ನಡೆಯುತ್ತಿರುವುದು ಸಂತಸ ವಿಷಯ. ಮಕ್ಕಳು ಸ್ಪರ್ಧೆಯಲ್ಲಿ ಸಂತೋಷದಿಂದ ಭಾಗವಹಿಸಿ ನಿರ್ಣಾಯಕರು ನೀಡಿದ ತೀರ್ಪಿಗೆ ಬದ್ದರಾಗಬೇಕು ಎಂದರು.

ಗ್ರಾಪಂ ಸದಸ್ಯರಾದ ಉಮೇಶ ಹೂಗಾರ, ಬಸವರಾಜ ಮಾದರ, ರೇಣುಕಾ ಕುಂಚಗನೂರ, ಮಾಸಪ್ಪ ಕಬ್ಬರಗಿ, ಬಾಬುಸಾಬ ಸೀಮಿಕೇರಿ, ಪಿಕೆಪಿಎಸ್‌ ಸದಸ್ಯ ವಜೀರಪ್ಪ ಪೂಜಾರಿ, ಬಸವಂತಪ್ಪ ಗಿರಿಕಾರ,ನೀಲಪ್ಪ ಮಾದರ, ಗೌಡಪ್ಪ ಕೊಪ್ಪದ, ಸಂಗಪ್ಪ ಹೂಗಾರ, ಸಂಗಣ್ಣ ಗೌಡರ, ಶಂಕ್ರಪ್ಪ ಮಾದನಶೆಟ್ಟಿ, ವರದಿಗಾರ ಶಂಕರ ಮಂಡಿ ಸೇರಿದಂತೆ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next