ಬೆಂಗಳೂರು : ಕೇಂದ್ರ ಸರ್ಕಾರದ ಸಚಿವರ ಜೊತೆ ಮಾತುಕತೆ ನಡೆಸಿದಾಗ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಶು ಸಂಜೀವಿನಿ ಯೋಜನೆಯನ್ನು ದೇಶಾದ್ಯಂತ ವಿಸ್ತರಣೆ ಮಾಡಲು ತೀರ್ಮಾನಿಸಿದ್ದಾರೆ. ರಾಷ್ಟ್ರೀಯ ರೋಗ ನಿಯಂತ್ರಣ ಯೋಜನೆ ಅಡಿಯಲ್ಲಿ ಸಂಚಾರಿ ಪಶು ಚಿಕಿತ್ಸಾಲಯ ಘಟಕಗಳು ರಾಜ್ಯಕ್ಕೆ 14 ಟಾಟಾ ವಿಂಗರ್ ಮಂಜೂರಾಗಿವೆ ಎಂದು ರಾಜ್ಯದ ಪಶು ಸಂಗೋಪನೆ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹ್ವಾಣ್ ತಿಳಿಸಿದ್ದಾರೆ.
ನಮ್ಮ ಮಹತ್ವದ ಯೋಜನೆ ಯಶಸ್ವಿಯಾಗಿದೆ. ರಾಜ್ಯದಲ್ಲಿ 275 ಸಂಚಾರಿ ಪಶು ಸಂಚಾರಿ ವಾಹನಗಳು ಮಂಜೂರಾಗಿವೆ. 44 ಕೋಟಿ ಅನುದಾನ ಬಿಡುಗಡೆ ಆಗಿದೆ. ಒಂದು ವಾಹನಕ್ಕೆ 16 ಲಕ್ಷ ರೂ. ವೆಚ್ಚವಾಗಲಿದೆ. ವಾಹನ ನಿರ್ವಹಣೆಗೆ ಪಿಪಿಪಿ.ಮಾದರಿಯಲ್ಲಿ ಜಾರಿ ವಾರ್ಷಿಕ. 50 ಕೋಟಿ ರೂ. ನಿರ್ವಹಣಾ ವೆಚ್ಚವಾಗುತ್ತದೆ. ಪಶು ಚಿಕಿತ್ಸಾಲಯಕ್ಕೆ ಒಬ್ಬರು ಪಶು ವೈದ್ಯರು, ಒಬ್ಬರು ಸಹಾಯಕರು ಹಾಗೂ ಒಬ್ಬರು ಡ್ರೈವರ್ ಇರುತ್ತಾರೆ. ಕರ್ನಾಟಕದಲ್ಲಿ 1962 ನಂಬರ್ ಗೆ ಕರೆ ಮಾಡಿದರೆ,ಪಶು ಸಂಜೀವಿನೀ ವಾಹನ ರೈತರ ಮನೆಗೆ ತೆರಳಲಿದೆ.
ರೈತರ ಪಶುಗಳಿಗೆ ಸಂಸ್ಥೆಯಾದರೆ ಸ್ಪಂದಿಸಲು ವಾರ್ ರೂಮ ಮಾಡಲಾಗಿದ್ದು ಇದುವರೆಗೂ 25000 ಕರೆಗಳು ಬಂದಿವೆ. ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಗೋ.ಶಾಲಾ ತೆರೆಯಲು 20 ಜಿಲ್ಲೆಗಳಲ್ಲಿ ಸ್ಥಳ ಗುರುತಿಸಲಾಗಿದೆ. ಶೀಘ್ರವೇ ಗೋಶಾಲೆ ಆರಂಭಕ್ಕೆ ಭೂಮಿ ಪೂಜೆ ಮಾಡಲಾಗುವುದು.
ಗೋಹತ್ಯೆ ಕಾಯ್ದೆ ಜಾರಿಗೆ ಬಂದ ನಂತರ 400.ಕ್ಕೂ ಹೆಚ್ಚು ಪ್ರಕರಣ ದಾಖಲಿಸಲಾಗಿದೆ. ಬಕರೀದ್ ಸಂದರ್ಭದಲ್ಲಿ 9000 ಸಾವಿರ ಪಶುಗಳ ರಕ್ಷಣೆ ಮಾಡಲಾಗಿದೆ. ಕಾಲು ಬಾಯಿ ರೋಗಕ್ಕೆ 50 ಲಕ್ಷ ಡೋಸ್ ಲಸಿಕೆ ಬಂದಿದೆ. ಕಾಲುಬಾಯಿ ರೋಗದಿಂದ 58 ಜಾನುವಾರುಗಳು ಸಾವೀಗೀಡಾಗಿವೆ. 4400 ಕಾನುವಾರುಗಳಿಗೆ ಕಾಲು ಬಾಯಿ ರೋಗ ಬಂದಿತ್ತು. ತಕ್ಷಣ ಲಸಿಕೆ ಹಾಕಿಸಲಾಗಿದೆ.
ಸಿದ್ದರಾಮಯ್ಯ, ಕುಮಾರಸ್ವಾಮಿ ಹತಾಶರಾಗಿದ್ದಾರೆ. ಆರ್ ಎಸ್ ಎಸ್ ಇಲ್ಲದಿದ್ದರೆ ಭಾರತ ಪಾಕಿಸ್ತಾನ ಆಗಿತ್ತು. ಆರ್ ಎಸ್ ಎಸ್ ಇರುವುದರಿಂದಲೇ ಭಾರತ ಉಳಿದಿದೆ. ಇಬ್ಬರೂ ಮಾಜಿ ಮುಖ್ಯಮಂತ್ರಿಗಳಾಗಿದ್ದಾರೆ. ಅವರು ಈ ರೀತಿಯ ಹೇಳಿಕೆ ಸರಿಯಲ್ಲ. ಅವರ ಹೇಳಿಕೆಗಳನ್ನು ಖಂಡಿಸುತ್ತೇನೆ.